More

    ಕೆಐಎಡಿಬಿ ಭೂ ಪರಿಹಾರ ಪರಿಷ್ಕರಣೆ

    ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಭೂ ಸ್ವಾಧೀನಪಡಿಸಿಕೊಳ್ಳುವ ಜಮೀನುಗಳಿಗೆ ಪರಿಹಾರದ ಬದಲಾಗಿ ಪ್ರತಿ ಎಕರೆಗೆ ಅಭಿವೃದ್ಧಿಪಡಿಸಿದ ಭೂಮಿ ನೀಡುವ ತೀರ್ಮಾನವನ್ನು ಸರ್ಕಾರ ಪರಿಷ್ಕರಿಸಿದೆ.

    ಈ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆದೇಶ ಹೊರಡಿಸಿದ್ದು, ಈ ವರೆಗೆ ಭೂ ಸ್ವಾಧೀನಪಡಿಸಿಕೊಳ್ಳುತ್ತಿರುವ ಪ್ರತಿ ಎಕರೆಗೆ ಎದುರಾಗಿ ಅಭಿವೃದ್ಧಿಪಡಿಸಿದ 9583 ಚದರ ಅಡಿ ಜಾಗ ನೀಡಲಾಗುತ್ತಿತ್ತು, ಇನ್ನು ಮುಂದೆ ಈ ಪ್ರಮಾಣವನ್ನು 10781 ಚದರ ಅಡಿಗೆ ಹೆಚ್ಚಿಸಲಾಗಿದೆ.

    ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರ ರೂಪದಲ್ಲಿ ನೀಡುವ ಪ್ರಕ್ರಿಯೆ 2007ರಲ್ಲೇ ಜಾರಿಗೆ ಬಂದಿತ್ತು. ಆರಂಭದಲ್ಲಿ ಪ್ರತಿ ಎಕರೆಗೆ ಎದುರಾಗಿ 8500 ಚದರ ಅಡಿ ಭೂಮಿ ನೀಡಲಾಗುತ್ತಿತ್ತು. 2010ರಲ್ಲಿ ಈ ಪ್ರಮಾಣವನ್ನು 9583 ಚದರ ಅಡಿಗೆ ಹೆಚ್ಚಿಸಲಾಗಿತ್ತು. ಅಭಿವೃದ್ಧಿಪಡಿಸಿದ ಜಮೀನನ್ನು ಪಡೆಯಲು ಇಚ್ಛಿಸದ ಭೂ ಮಾಲಿಕರಿಗೆ ಪರಿಹಾರವನ್ನು ಹಣದ ರೂಪದಲ್ಲಿ ನೀಡಬಹುದು. ಈ ಯೋಜನೆ ಕೈಐಎಡಿಬಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಕೈಗಾರಿಕಾ ಪ್ರದೇಶದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ.

    ಈ ಪಾಲುದಾರಿಕೆ ಯೋಜನೆ ನಗದು ಪರಿಹಾರದ ಬದಲಿಗೆ ಅದೇ ಕೈಗಾರಿಕಾ ಪ್ರದೇಶದಲ್ಲಿ ಸ್ವಾಧೀನಪಡಿಸಿಕೊಂಡ ಅಭಿವೃದ್ಧಿಪಡಿಸಿದ ಜಮೀನನ್ನು ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ. ಚಾಲ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳ ಕುರಿತಂತೆಯೂ ಸರ್ಕಾರ ಸ್ಪಷ್ಟನೆ ನೀಡಿದ್ದು, ಭೂ ಮಾಲಿಕರು ಇನ್ನೂ ಪರಿಹಾರವನ್ನು ಪಡೆಯದ ಪ್ರಕರಣಗಳಿಗೆ ಅವರು ಇಚ್ಛಿಸಿದಲ್ಲಿ ಅದೇ ಕೈಗಾರಿಕಾ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಿದ ಜಮೀನು ಲಭ್ಯವಿದ್ದಲ್ಲಿ ಯೋಜನೆಯನ್ನು ವಿಸ್ತರಿಸಲು ಅವಕಾಶ ನೀಡಿದೆ. ಜಮೀನು ಲಭ್ಯವಿಲ್ಲದಿದ್ದಲ್ಲಿ ನಗದು ರೂಪದಲ್ಲಿಯೇ ಭೂ ಪರಿಹಾರ ಪಡೆಯತಕ್ಕದ್ದು.

    ಬದಲಾವಣೆ ಏಕೆ?: ಜಮೀನು ನೀಡುವ ಪ್ರಮಾಣದ ಬಗ್ಗೆ ಜಮೀನು ಮಾಲಿಕರಿಗೆ ಆಕ್ಷೇಪವಿತ್ತು. ಕೆಲವರಿಗೆ ಭೂಮಿಯನ್ನು ಕೆಎಐಡಿಬಿಗೆ ಬಿಟ್ಟುಕೊಟ್ಟರೆ ಭೂಮಿ ಇಲ್ಲವಾಗುತ್ತದೆ, ಪರಿಹಾರ ರೂಪದಲ್ಲಿ ವಾಪಾಸು ಬಂದರೆ ಒಳಿತು ಎಂಬ ಅಭಿಪ್ರಾಯವಿದೆ, ಆದರೆ ಭೂಮಿಯ ಪ್ರಮಾಣ ಕಡಿಮೆ ಎಂಬ ಬೇಸರವಿತ್ತು. ಹಾಗೆಯೇ ಹಣದ ಮೌಲ್ಯ ದಿನವೂ ಕಡಿಮೆ ಆಗುತ್ತದೆ, ಅಭಿವೃದ್ಧಿಪಡಿಸಿದ ಭೂಮಿಯನ್ನೇ ನಾವು ಸ್ವತಃ ಹೊಂದಿದರೆ ಭೂ ಮಾಲಿಕತ್ವ ಇರುತ್ತದೆ ಎಂಬ ಆಶಯ. ಈ ಕಾರಣಕ್ಕೆ ಪರಿಹಾರ ರೂಪದಲ್ಲಿ ನೀಡುವ ಪ್ರಮಾಣ ಹೆಚ್ಚಿಸಲು ಸರ್ಕಾರ ಆಸಕ್ತಿ ತೋರಿಸಿದೆ. ಈ ವಿಚಾರ ಸಂಪುಟ ಸಭೆಯಲ್ಲೂ ಚರ್ಚೆಯಾಗಿತ್ತು.

    ಪರಿಹಾರ ಹೇಗೆ?: ಅಭಿವೃದ್ಧಿಗೊಳಿಸಿದ ಜಮೀನನ್ನು ಭೂ ಮಾಲಿಕರಿಗೆ ಶುದ್ಧ ಕ್ರಯಪತ್ರದ (ಸೇಲ್ ಡೀಡ್) ಮೂಲಕ ನೀಡಲಾಗುತ್ತದೆ. ಅದನ್ನವರು ವಸತಿ, ವಾಣಿಜ್ಯ, ಕೈಗಾರಿಕೆ ಉದ್ದೇಶಗಳಿಗಾಗಿ ಸ್ವತಃ ಬಳಸಿಕೊಳ್ಳಲು ಅವಕಾಶವಿದೆ.  ಭೂಮಿ ಪಡೆದುಕೊಂಡವರು ಆ ಜಮೀನಿನ ಮೇಲೆ ಮಾಲೀಕತ್ವದ ಪೂರ್ತಿ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಾಗುತ್ತದೆ. ್ಝಾವುದೇ ನಿರ್ಮಾಣ ಕಾರ್ಯ ಪ್ರಾರಂಭಿಸುವ ಮೊದಲು ಭೂ ಮಾಲಿಕರು ಕೆಐಎಡಿಬಿಯಿಂದ ಕಟ್ಟಡ ನಕ್ಷೆಯನ್ನು ಮಂಜೂರು ಮಾಡಿಕೊಳ್ಳಬೇಕೆಂಬ ಷರತ್ತು ಇದೆ. ್ಝ ರೀತಿಯ ಪರಿಹಾರ ಯೋಜನೆಯು ಏಕ ಘಟಕ ಸಂಕೀರ್ಣ ಕೈಗಾರಿಕಾ ಘಟಕಕ್ಕಾಗಿ ಹಾಗೂ ಮೂಲಸೌಲಭ್ಯ ಯೋಜನೆಗಳಿಗಾಗಿ (ಇನ್​ಫ್ರಾಸ್ಟ್ರಚರ್ ಪ್ರಾಜೆಕ್ಟ್) ಭೂ ಸ್ವಾಧೀನಪಡಿಸಿಕೊಳ್ಳುವ ಪ್ರಕರಣಗಳಿಗೆ ಅನ್ವಯಿಸಲ್ಲ.

    ತಮಿಳುನಾಡು ವಿಧಾನಸಭೆ ಚುನಾವಣೆ: ಕ್ಷೇತ್ರ ಆಯ್ಕೆ ಮಾಡಿಕೊಂಡ ಕಮಲ್ ಹಾಸನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts