More

    ಯುವ ಬ್ರಿಗೇಡ್ ಕಾರ್ಯ ಶ್ಲಾಘನೀಯ

    ಗುರುಮಠಕಲ್: ಪ್ರಾಚೀನ ಪರಂಪರೆಯನ್ನು ಜಾಗರೂಕತೆಯಿಂದ ಜತನ ಮಾಡುವ ಅವಶ್ಯಕತೆ ಇದೆ ಎಂದು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಹೇಳಿದರು.

    ಖಾಸಾ ಮಠದ ಆವರಣದಲ್ಲಿ ಯುವ ಬ್ರಿಗೇಡ್ನಿಂದ ನಿಮರ್ಿಸಿದ ರೆಲ್ಲೋ ಫ್ಲೆಕ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಐತಿಹಾಸಿಕ, ಸಾಮಾಜಿಕ ಮತ್ತು ಧಾಮರ್ಿಕ ತಾಣಗಳ ಪರಿಚಯ ಬಹಳ ಜನರಿಗೆ ಇರುವುದಿಲ್ಲ. ಆದರೆ ಯುವ ಬ್ರಿಗೇಡ್ ಅಂಥ ತಾಣಗಳನ್ನು ಪರಿಚಯಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

    ಮಠದ ಪೀಠಾಧಿಪತಿ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಕಾಲಗರ್ಭದಲ್ಲಿ ಎಷ್ಟೋ ಐತಿಹಾಸಿಕ ಸ್ಥಳಗಳು ಕಳೆದು ಹೋಗುತ್ತಿವೆ. ಇಂತಹ ಸ್ಥಿತಿಯಲ್ಲಿ ಯುವ ಬ್ರಿಗೇಡ್ ತಂಡ ಅವುಗಳನ್ನು ಗುರುತಿಸಿ ಇತರರಿಗೂ ಅದರ ಇತಿಹಾಸ ತಿಳಿಯಲು ಅನುಕೂಲವಾಗುವಂತೆ ರೆಲ್ಲೋ ಫ್ಲೆಕ್ಸ್ ಅಳವಡಿಸುವ ಕಾರ್ಯಕ್ಕೆ ಕೈ ಹಾಕಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ನಮ್ಮ ಭಾಗದಲ್ಲೂ ಹಲವಾರು ಐತಿಹಾಸಿಕ ಸ್ಥಳಗಳಿದ್ದು, ಗುರುತಿಸದೆ ಇರುವುದರಿಂದ ಪಾಳು ಬೀಳುವ ಸ್ಥಿತಿಗೆ ಬಂದಿವೆ. ಇಲ್ಲಿಂದ ಮೈಸೂರಿನಂತಹ ದೂರದ ನಗರಗಳಿಗೆ ಭೇಟಿ ನೀಡುವ ನಾವು, ನಮ್ಮ ಸುತ್ತಲಿನಲ್ಲಿರುವ ಅಪರೂಪದ ಸ್ಥಳಗಳನ್ನು ಗುರುತಿಸಬೇಕಿದೆ ಎಂದರು.

    ತಹಸೀಲ್ದಾರ್ ಸಂಗಮೇಶ ಜಿಡಗಿ, ಪುರಸಭೆ ಮುಖ್ಯಾಧಿಕಾರಿ ಜೀವನ ಕಟ್ಟಿಮನಿ, ಯುವ ಬ್ರಿಗೇಡ್ ಯಾದಗಿರಿ ಘಟಕದ ಸಂಚಾಲಕ ವಿಶ್ವನಾಥ ಯಾದವ್, ವೆಂಕಟೇಶ ಕಲಬುರಗಿ, ನೀಲೇಶ ಜಾಕಾಲೆ, ಸಿದ್ದಲಿಂಗರೆಡ್ಡಿ ನಾಯ್ಕಲ್, ಮಲ್ಲಾರೆಡ್ಡಿ ಮಗ್ಗ, ಶ್ರೀಕಾಂತ, ಶಂಕರ ನಾಗಮೋಳ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts