More

    ಖಾನಾಪುರದಲ್ಲಿ ಜನಜೀವನ ತತ್ತರ

    ಖಾನಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಖಾನಾಪುರ ಪಟ್ಟಣ ಹಾಗೂ ಗ್ರಾಮೀಣ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ದೇವಲತ್ತಿ ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಸುರೇಶ ಇಟಗಿ ಮತ್ತು ನರಸಿಂಹ ಟಕ್ಕೇಕರ ಅವರ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ ದಿನಬಳಕೆ ವಸ್ತುಗಳು ನಾಶಗೊಂಡಿವೆ. ಮಹದಾಯಿ, ಪಾಂಡರಿ ಮತ್ತು ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳು ಜಲಾವೃತಗೊಂಡಿವೆ.

    ಪುಂಡಲೀಕೇಶ್ವರ ದೇವಸ್ಥಾನ ಜಲಾವೃತ

    ಮುನವಳ್ಳಿ: ಸತತ ಮಳೆಯಿಂದ ಸಮೀಪದ ನವಿಲು ತೀರ್ಥದ ಮಲಪ್ರಭಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು ಜಲಾಶಯ ಭರ್ತಿಗೆ ಕೇವಲ 3.5 ಅಡಿ ಮಾತ್ರ ಬಾಕಿ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಭಾನುವಾರ ಸಂಜೆ 5 ಗಂಟೆಗೆ 16 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ.

    ಇದರಿಂದ ಮುನವಳ್ಳಿಯ ಹಳೇ ಸೇತುವೆ ಹಾಗೂ ಪುಂಡಲೀಕೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಮಲಪ್ರಭಾ ನದಿ ಪಾತ್ರದ ಸವದತ್ತಿ ತಾಲೂಕಿನ ಮುನವಳ್ಳಿ, ಶಿಂದೋಗಿ, ಹಿರೂರ, ಹಳ್ಳೂರ, ಭಂಡಾರಹಳ್ಳಿ, ತೆಗ್ಗಿಹಾಳ, ಅರ್ಟಗಲ್ಲ, ಜಕಬಾಳ ಹಾಗೂ ರಾಮದುರ್ಗ, ಬದಾಮಿ ತಾಲೂಕಿನ ಹಳ್ಳಿಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.

    ಶಾಸಕ ಮಾಮನಿ ಭೇಟಿ: ಮುನವಳ್ಳಿಯಲ್ಲಿ ನದಿ ಪಾತ್ರದಲ್ಲಿರುವ ಜನರು ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗತೊಡಗಿದ್ದಾರೆ. ಹೀಗಾಗಿ ಸ್ಥಳಕ್ಕೆ ಶಾಸಕ ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಭೇಟಿ ನೀಡಿ, ಪುರಸಭೆ ಅಧಿಕಾರಿ ಎಂ.ಎಂ. ತಿಮ್ಮಾಣಿ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts