More

    ದೆಹಲಿಯಲ್ಲಿ ಕೆಜಿಎಫ್ ಟೀಮ್; ಇಲ್ಲಿವೆ ನೋಡಿ ವೈರಲ್ ಫೋಟೋಗಳು

    ದೆಹಲಿ:ಕೆಜಿಎಫ್ ಚಾಪ್ಟರ್ 2′ ಸಿನಿಮಾ ವಿಶ್ವಾದ್ಯಂತ ಇದೇ ಏಪ್ರಿಲ್ 14 ರಂದು ತೆರೆಗಪ್ಪಳಿಸಲಿದೆ. ಇಡೀ ದೇಶದಲ್ಲಿ 6000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮತ್ತು ವಿದೇಶಗಳಲ್ಲಿ 3000 ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ರಿಲೀಸ್ ಆಗಲಿರುವ ಈ ಸಿನಿಮಾ ಈಗಾಗಲೇ ಬರಿ ಟೀಸರ್, ಹಾಡುಗಳು, ಟ್ರೈಲರ್ ಅಂತ ಸಿಕ್ಕಾಪಟ್ಟೆ ದಾಖಲೆಗಳನ್ನು ಬರೆದಿದೆ. ಇನ್ನು, ಬಹಳಷ್ಟು ನಿರೀಕ್ಷೆ ಹೆಚ್ಚಿಸಿದ ಈ ಸಿನಿಮಾದ ಪ್ರಚಾರದ ಕೆಲಸಗಳು ಭರದಿಂದ ಸಾಗುತ್ತಿವೆ.
    ಪ್ಯಾನ್ ಇಂಡಿಯಾ ಚಿತ್ರವಾದ ‘RRR’ ಸಿನಿಮಾದಂತೆ ನಮ್ಮ ಕೆಜಿಎಫ್ ಚಾಪ್ಟರ್ 2′ ಚಿತ್ರತಂಡ ಕೂಡಾ ದೇಶದ ನಾನಾ ರಾಜ್ಯಗಳಿಗೆ ತೆರೆಳಿ ಪ್ರಮೋಷನ್ ಮಾಡಲು ರೆಡಿಯಾಗಿದ್ದಾರೆ. ಸದ್ಯ, ಹಿಂದಿಯಲ್ಲಿ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದ್ದು, ಚಿತ್ರದ ಟ್ರೈಲರ್ ರಿಲೀಸ್ ಆದ ಕೇವಲ 24 ಗಂಟೆಯೊಳಗೆ ಬರೋಬ್ಬರಿ 5 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಈ ಸಿನಿಮಾಗೆ ಕನ್ನಡಕ್ಕಿಂತ ಹಾಗೂ ಬೇರೆ ದಕ್ಷಿಣ ಭಾಷೆಗಳಿಗಿಂತ ಹಿಂದಿಯಲ್ಲಿ ಹೆಚ್ಚು ಕ್ರೇಜ್ ಇದೆ ಅಂತ ತಿಳಿದಿದೆ.
    ಇನ್ನು, ಇದೇ ಕಾರಣಕ್ಕೆ ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಹೆಚ್ಚು ಪ್ರಚಾರ ಕೊಡುವ ಅನಿವಾರ್ಯತೆ ಇದೆ ಅಂತ ಸಿನಿಮಾ ತಂಡ ಭಾವಿಸಿದೆ. ಹೀಗಾಗಿ, ನಿನ್ನೆ ಅಂದರೆ ಮಾರ್ಚ್ 31 ರಂದು ಸಂಜೆ ‘ಕೆಜಿಎಫ್ 2’ ಚಿತ್ರತಂಡ ದೆಹಲಿಗೆ ತೆರಳಿತ್ತು. ನಿನ್ನೆ ಬೆಂಗಳೂರಿನಿಂದ ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ರಂತೆ ಮೊದಲಾದವರು ಖಾಸಗಿ ಜೆಟ್​ನಲ್ಲಿ ದೆಹಲಿಗೆ ತೆರಳುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಈ ಫೋಟೋ ನೋಡಿದ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
    ಇದೀಗ, ಚಿತ್ರತಂಡ ದೆಹಲಿ ತಲುಪಿದ್ದು, ಇಂದು ಬೆಳಿಗ್ಗೆ ಪ್ರಚಾರಕ್ಕೆ ರೆಡಿಯಾಗಿರುವ ಚಿತ್ರತಂಡದ ಇಂದಿನ ಫೋಟೋಗಳು ಕೂಡಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು, ಇಂದು ಸಂಜೆ ದೆಹಲಿಯ ಐನಾಕ್ಸ್ ನಲ್ಲಿ ಕೆಜಿಎಫ್ ಚಾಪ್ಟರ್ 2′ ಸುದ್ದಿಗೋಷ್ಠಿ ನಡೆಯಲಿದೆ. ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ ಜೊತೆಗೆ ನಟ ಸಂಜಯ್ ದತ್ತ್, ನಟಿ ರವೀನಾ ಟಂಡನ್, ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರದ ದೆಹಲಿಯ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ

    ದೆಹಲಿಯಲ್ಲಿ ಕೆಜಿಎಫ್ ಟೀಮ್; ಇಲ್ಲಿವೆ ನೋಡಿ ವೈರಲ್ ಫೋಟೋಗಳು ದೆಹಲಿಯಲ್ಲಿ ಕೆಜಿಎಫ್ ಟೀಮ್; ಇಲ್ಲಿವೆ ನೋಡಿ ವೈರಲ್ ಫೋಟೋಗಳು

    ದೆಹಲಿಯಲ್ಲಿ ಕೆಜಿಎಫ್ ಟೀಮ್; ಇಲ್ಲಿವೆ ನೋಡಿ ವೈರಲ್ ಫೋಟೋಗಳು ದೆಹಲಿಯಲ್ಲಿ ಕೆಜಿಎಫ್ ಟೀಮ್; ಇಲ್ಲಿವೆ ನೋಡಿ ವೈರಲ್ ಫೋಟೋಗಳು

    ಬ್ರಾಲೆಟ್ ಧರಿಸಿದ ಸಮಂತಾ; ನಿನ್ನ ಡ್ರೆಸ್ಸಿಂಗ್ ಓವರ್ ಆಗುತ್ತಿದೆ ಎಂದ ನೆಟ್ಟಿಗರು!

    ಮೇಡಂ ಪ್ಲೀಸ್​​… ಕ್ಯಾಬ್​ ಚಾಲಕನ ಜತೆಗಿನ ವಿಚಿತ್ರ ಅನುಭವ ಬಿಚ್ಚಿಟ್ಟ ನಟಿ ಶ್ರದ್ಧಾ ಶ್ರೀನಾಥ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts