More

    ಕೆಜಿಎಫ್-2​ ನಟನ ಕಾರು ಅಪಘಾತ; ಕ್ಯಾಂಟರ್ ಡಿಕ್ಕಿ, ಬೆಂಜ್ ಕಾರು ಜಖಂ..

    ಬೆಂಗಳೂರು: ಕೆಜಿಎಫ್-2​ ಸಿನಿಮಾದಲ್ಲಿ ಅಭಿನಯಿಸಿದ್ದ ನಟನ ಬೆಂಜ್​ ಕಾರು ಅಪಘಾತಕ್ಕೀಡಾಗಿದ್ದು, ಕ್ಯಾಂಟರ್​ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

    ಕೆಜಿಎಫ್ ಚಿತ್ರದಲ್ಲಿ ಆ್ಯಂಡ್ರೂಸ್ ಪಾತ್ರದಲ್ಲಿ ಅಭಿನಯಿಸಿದ್ದ ನಟ ಅವಿನಾಶ್ ಕಾರು ಇದಾಗಿದ್ದು, ಇಂದು ಮುಂಜಾನೆ ಅನಿಲ್​ ಕುಂಬ್ಳೆ ವೃತ್ತದದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಸ್ವತಃ ಅವಿನಾಶ್ ಕಾರು ಚಲಾಯಿಸುತ್ತಿದ್ದರು.

    ಕಾರು ಎಂ.ಜಿ. ರಸ್ತೆ ಕಡೆಗೆ ಹೊರಟಿದ್ದು, ಈ ವೇಳೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಕಾರು ಜಖಂಗೊಂಡಿದ್ದು, ಕ್ಯಾಂಟರ್​ ಚಾಲಕ ಶಿವಗೌಡ ಎಂಬಾತನನ್ನು ಕಬ್ಬನ್​ ಪಾರ್ಕ್ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕೆಜಿಎಫ್-2​ ನಟನ ಕಾರು ಅಪಘಾತ; ಕ್ಯಾಂಟರ್ ಡಿಕ್ಕಿ, ಬೆಂಜ್ ಕಾರು ಜಖಂ.. ಕೆಜಿಎಫ್-2​ ನಟನ ಕಾರು ಅಪಘಾತ; ಕ್ಯಾಂಟರ್ ಡಿಕ್ಕಿ, ಬೆಂಜ್ ಕಾರು ಜಖಂ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts