More

    ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ…

    ಬೆಂಗಳೂರು: ದೇಶದ ಮೂಲೆ ಮೂಲೆಯಲ್ಲೂ ‘ಕೆಜಿಎಫ್ 2′ ಕ್ರೇಜ್ ಇದ್ದರೂಸಿನಿಮಾದ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಿತ್ರತಂಡ ಮಾತ್ರ ತಮ್ಮ ಸಿನಿಮಾದ ಪ್ರಚಾರವನ್ನು ನಿಲ್ಲಿಸದೆ ಮಾಡುತ್ತಿದ್ದಾರೆ. ಇನ್ನು, ವಿದೇಶಗಳಲ್ಲೂ ಈ ಸಿನಿಮಾದ ಕ್ರೇಜ್ ತುಂಬಾನೆ ಇದೆ. ಅದರಲ್ಲಿಯೂ, ಏಪ್ರಿಲ್ 3 ರಿಂದ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಇರುವ ಕ್ರೇಜ್ ಎಷ್ಟು ಎಂಬುದು ಟಿಕೆಟ್ ಸೇಲ್ ಕಂಡರೆ ಗೊತ್ತಾಗುತ್ತಿದೆ. ಏಪ್ರಿಲ್ 14 2022 ರಂದು ವಿಶ್ವಾದ್ಯಂತ ಈ ಸಿನಿಮಾ ರಿಲೀಸ್ ಆಗಲಿದೆ. ಏಪ್ರಿಲ್ 2 ರಂದು UK ನಲ್ಲಿ ಸಿನಿಮಾಗೆ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಕೇವಲ 12 ಗಂಟೆಗಳಲ್ಲಿ ಚಿತ್ರದ 5 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ.
    ಅಂದಹಾಗೆ, ಸಿನಿಮಾ ರಿಲೀಸ್​ಗೂ ಮುಂಗಡವಾಗಿ UK ನಲ್ಲಿ ಇಷ್ಟು ಟಿಕೆಟ್‌ಗಳನ್ನು ಬಿಕ್ಕಿಂಗ್ ಪಡೆದಿರುವ ಮೊದಲ ಭಾರತದ ಸಿನಿಮಾ ಕೆಜಿಎಫ್: ಚಾಪ್ಟರ್ 2′ ಎನ್ನಲಾಗಿದೆ. ಬಳಿಕ ಚಿತ್ರ ನೋಡಲು ಆನ್​ಲೈನ್​ನಲ್ಲಿ ಟಿಕೆಟ್ ಬುಕ್ಕಿಂಗ್ ಅನ್ನು ಏಪ್ರಿಲ್ 7 ರಂದು BookMyShow ನಲ್ಲಿ ಉತ್ತರ ಭಾರತದ, ತಮಿಳುನಾಡಿನ, ಕೇರಳದ ಅಭಿಮಾನಿಗಳಿಗೆ ತೆರೆಯಲಾಗಿತ್ತು. ಉತ್ತರ ಭಾರತ, ತಮಿಳುನಾಡು, ಕೇರಳದಲ್ಲು ಈ ಸಿನಿಮಾದ ಟಿಕೆಟ್ ಸೇಲ್ ಭರ್ಜರಿಯಾಗಿಯೇ ನಡೆಯುತ್ತಿದೆ. ಸಿನಿಮಾ ಉತ್ತರ ಭಾರತದಲ್ಲಿಯೂ ದಾಖಲೆ ಬರೆದಿದೆ. ಹೌದು, ಟಿಕೆಟ್ ಬುಕ್ಕಿಂಗ್ ಆರಂಭವಾದ ಕೇವಲ 12 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್​ಗಳು ಸೋಲ್ಡ್​ಔಟ್ ಆಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಂದರೆ, ಕೇವಲ 12 ಗಂಟೆಗಳಲ್ಲಿ ಸಿನಿಮಾ ಬರೋಬ್ಬರಿ 3.35 ಕೋಟಿ ರೂಪಾಯಿ ಪ್ರೀ–ಬಿಸ್ನೆಸ್ ಮಾಡಿದೆಯಂತೆ.
    ಇಂದು ಅಂದರೆ ಏಪ್ರಿಲ್ 10 ರಂದು, ಆಂಧ್ರಪ್ರದೇಶದಲ್ಲಿ ಮತ್ತು ತೆಲಂಗಾಣದಲ್ಲಿ ಹಾಗೂ ಕರ್ನಾಟಕದಲ್ಲಿ ‘ಕೆಜಿಎಫ್: ಚಾಪ್ಟರ್ 2′ ಬುಕಿಂಗ್ ಆರಂಭವಾಗಿದೆ. ಇನ್ನು, ಈ ಮೂರು ರಾಜ್ಯಗಳಲ್ಲಿ ಸಹ ಸಿನಿಮಾದ ಟಿಕಟ್ ಸೇಲ್ ಸಿಕ್ಕಾಪಟ್ಟೆ ಜೋರಾಗಿಯೇ ಇದೆ. ಆದರೆ, ಕರ್ನಾಟಕದಲ್ಲಿ ಕೆಜಿಎಫ್ 2′ ಟಿಕೆಟ್ ಬೆಲೆ ಗಗನಕ್ಕೇರಿದ . ಹೌದು, ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಟಿಕೆಟ್ ಗಳು ಬಹುತೇಕ ಎಲ್ಲಾ ಕಡೆ ಸೋಲ್ಡ್ ಔಟ್ ಆಗಿವೆ. ಹಾಗಾಗಿ, ಬ್ಲಾಕ್ ನಲ್ಲಿ ಬೇಕಾ ಬಿಟ್ಟಿ ದರದಲ್ಲಿ ಕೆಜಿಎಫ್ 2 ಸಿನಿಮಾದ ಟಿಕೆಟ್ ಮಾರಾಟವಾಗುತ್ತಿದೆ. ಅಂದಹಾಗೆ, ಬೆಳಗಿನ ೪ ಗಂಟೆ ಶೋಗೆ ಡಿಮ್ಯಾಂಡ್ ಸಹಜವಾಗಿಯೇ ಹೆಚ್ಚು ಇರುತ್ತೆ.
    ಇದರಿಂದ, ಬ್ಲಾಕ್​ನಲ್ಲಿ ಒಂದು ಟಿಕೆಟ್ ಗೆ 1 ರಿಂದ 2 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಸಿನಿಪ್ರಿಯರಿಗೆ ಸಹಜವಾಗಿ ಮೊದಲ ದಿನ ಸಿನಿಮಾ ನೋಡಬೇಕು ಎಂಬ ಆಸೆ ಇರುತ್ತೆ. ಆದರೆ, ಈ ಟಿಕೆಟ್ ಬೆಲೆ ಕಂಡು ಹಲವರಿಗೆ ಬೇಸರವಾಗುತ್ತಿದೆ. ಬೆಂಗಳೂರಿನ ಶ್ರೀನಿವಾಸ್ ಚಿತ್ರಮಂದಿರ ಹಾಗೂ ಸ್ವಾಗತ್ ಚಿತ್ರಮಂದಿರದ ಟಿಕೆಟ್ ಗಳು 1 ಹಾಗೂ 2 ಸಾವಿರ ರೂಪಾಯಿಗೆ ಮಾರಾಟವಾಗುತ್ತಿವೆ. ಆಂಧ್ರದಲ್ಲಿಯೂ ಮತ್ತು ತೆಲಂಗಾಣದಲ್ಲಿಯೂ ಸಿನಿಮಾದ ಟಿಕೆಟ್ ಬೆಲೆ 1000 ರದ ಗಡಿ ದಾಟಿದೆ ಎನ್ನಲಾಗುತ್ತಿದೆ. ಸದ್ಯ, ಈ ಟಿಕೆಟ್ ಬೆಲೆ ಕಂಡರೆ ನಟ ಯಶ್ ಅಭಿಮಾನಿಗಳಿಗೆ ಈ ಚಿತ್ರದ ಮೇಲಿರುವ ಕುತೂಹಲ ಹಾಗೂ ನಿರೀಕ್ಷೆ ಎಷ್ಟು ಎಂಬುದು ಕಂಡುಬರುತ್ತಿದೆ

    ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ... ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ... ಬ್ಲಾಕ್ ನಲ್ಲಿ ‘ಕೆಜಿಎಫ್ 2′ ಟಿಕೆಟ್! ಬೆಲೆ ಕೇಳಿದರೆ ಶಾಕ್ ಆಗುತ್ತೀರಿ...

    ಅಪ್ಪು ಅಭಿಮಾನಿಗಳಿಂದ ರಶ್ಮಿಕಾಗೆ ಛೀಮಾರಿ! ಕಾರಣ ಗೊತ್ತಾ?

    ಕುಕ್ಕೆ, ಧರ್ಮಸ್ಥಳಕ್ಕೆ ಯಶ್ ಭೇಟಿ; ಕರುನಾಡಲ್ಲಿ ‘ಕೆಜಿಎಫ್ 2’ ಟಿಕೆಟ್ ಬುಕ್ಕಿಂಗ್ ಆರಂಭ!

    ಭಾವನೆ-ಬಲದ ಸಮ್ಮಿಲನ: ಹೊಂಬಾಳೆ ಫಿಲ್ಮ್ಸ್ ಜತೆ RCB ಪ್ರೇಕ್ಷಕರಿಗೆ ನೀಡಲಿದೆ ಭರಪೂರ ಮನರಂಜನೆ!

    ಮಹೇಶ್ ಜತೆ ಮೇಘಾ: ಟಾಲಿವುಡ್​ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್​ಗಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts