More

    ಇನ್ನೆರಡು ಹೊಸ ದಾಖಲೆಗಳನ್ನು ಮಾಡಿದ ‘ಕೆಜಿಎಫ್​ 2’ …

    ಮುಂಬೈ: ಯಶ್​ ಅಭಿನಯದ ‘ಕೆಜಿಎಫ್​ 2’ ಚಿತ್ರವು ಬಿಡುಗಡೆಯಾಗಿ ಒಂದಿಷ್ಟು ದಾಖಲೆಗಳನ್ನು ಮಾಡಿದೆ. ಈಗ ವರ್ಷ ಮುಗಿಯುತ್ತಿದ್ದಂತೆಯೇ, ಇನ್ನೆರೆಡು ದಾಖಲೆಗಳು ಚಿತ್ರದ ಪಾಲಾಗಿದೆ.

    ಇದನ್ನೂ ಓದಿ: ವಿಜಯಾನಂದ ಸ್ಫೂರ್ತಿಯ ಸೆಲೆ ಎಂದ ಕೇಂದ್ರ ಸಚಿವ ಜೋಶಿ; ಹೊಸ ಸೃಷ್ಟಿಗೆ ಸಾಕ್ಷಿ

    ಹೌದು, ಬುಕ್​ ಮೈ ಶೋದ ‘ಬೆಸ್ಟ್​ ಆಫ್​ 2022’ ವರದಿ ಹೊರಬಿದ್ದಿತ್ತು, ಅದರ ಪ್ರಕಾರ, ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಮೊದಲ ದಿನದಂದು ಅತೀ ಹೆಚ್ಚು ಟಿಕೆಟ್​ ಮಾರಾಟವಾದ ಚಿತ್ರ ಎಂಬ ಹೆಗ್ಗಳಿಕೆಗೆ ‘ಕೆಜಿಎಫ್​ 2’ ಪಾತ್ರವಾಗಿದೆ. ಚಿತ್ರವು ಏ.14ರಂದು ಬಿಡುಗಡೆಯಾಗಿದ್ದು, ಅಂದು ಒಟ್ಟಾರೆ 2.14 ಮಿಲಿಯನ್​ ಟಿಕೆಟ್​ಗಳು ಮಾರಾಟವಾಗಿದ್ದವಂತೆ.

    ಇನ್ನು, ಅತೀ ಹೆಚ್ಚು ಅಡ್ವಾನ್ಸ್​ ಬುಕ್ಕಿಂಗ್​ಗಳನ್ನು ಕಂಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ವರ್ಷ ‘ಆರ್​ಆರ್​ಆರ್​’, ‘ಪೊನ್ನಿಯನ್​ ಸೆಲ್ವನ್​ 1’, ‘ಡಾಕ್ಟರ್​ ಸ್ಟ್ರೇಂಜ್​’ ಮುಂತಾದ ಚಿತ್ರಗಳು ಬಿಡುಗಡೆಯಾಗಿದ್ದು, ಈ ಪೈಕಿ ಅತೀ ಹೆಚ್ಚು ಅಡ್ವಾನ್ಸ್​ ಬುಕ್ಕಿಂಗ್​ ಕಂಡ ಚಿತ್ರ ‘ಕೆಜಿಎಫ್​ 2’ ಆಗಿದೆ ಎಂಬುದು ವಿಶೇಷ. ಹಾಲಿವುಡ್​ ಚಿತ್ರಗಳು ಐಮ್ಯಾಕ್ಸ್​ ಮತ್ತು 4ಡಿಎಕ್ಸ್​ ಫಾರ್ಮಾಟ್​ಗಳಲ್ಲಿ ಹೆಚ್ಚು ಬಿಡುಗಡೆಯಾಗುತ್ತಿರುವಾಗ, ಅಲ್ಲೂ ‘ಕೆಜಿಎಫ್​ 2’ ಚಿತ್ರವು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗಿರುವುದು ವಿಶೇಷ.

    ಇದನ್ನೂ ಓದಿ: ಬೆಳಿಗ್ಗೆ 5ಕ್ಕೇ ಶುರುವಾಗಲಿದೆ ‘ವೇದ’ ಚಿತ್ರದ ಮೊದಲ ಪ್ರದರ್ಶನ

    ‘ಕೆಜಿಎಫ್​ 2’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಯಶ್​, ಸಂಜಯ್​ ದತ್​, ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್​ನ ವಿಜಯ್​ ಕಿರಗಂದೂರು ನಿಮಿರ್ಸಿರುವ ಈ ಚಿತ್ರವನ್ನು ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts