ಕೆರೂರದಲ್ಲಿ ಸೋಂಕಿತ ಸ್ಥಳದಲ್ಲೇ ಸಂತೆ

blank

ಕೆರೂರ: ಜಿಲ್ಲಾಡಳಿತ ವಾರದ ಸಂತೆ ನಿಷೇಧಿಸಿದ್ದರೂ ಪಟ್ಟಣದ ಕರೊನಾ ಹಾಟ್‌ಸ್ಪಾಟ್ ಸ್ಥಳದಲ್ಲಿ ಮಂಗಳವಾರ ತರಕಾರಿ ಸಂತೆ ಭರ್ಜರಿಯಾಗಿ ನಡೆದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಯಿತು. ಇಲ್ಲಿಯ ಹೊಸಪೇಟೆ ಗಲ್ಲಿಯ ಪತ್ತಾರ ಕಟ್ಟೆಯ ಅಕ್ಕಪಕ್ಕದಲ್ಲಿನ ಮನೆಗಳಲ್ಲಿ ಕರೊನಾ ಸೋಂಕಿತರು ಇದ್ದಾರೆ. ಅಲ್ಲಿಯೇ ಸಂತೆ ನಡೆದ ಪರಿಣಾಮ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿ ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಸಂತೆಯಲ್ಲಿ ಜನರು ಕರೊನಾ ನಿಯಮಗಳನ್ನು ಪಾಲಿಸದೆ ಮಾಸ್ಕ್ ಧರಿಸದೆ ತರಕಾರಿ ಖರೀದಿಗೆ ಮುಗಿ ಬಿದ್ದಿರುವುದು ಕಂಡು ಬಂದಿತು. ಸೋಂಕು ಮತ್ತಷ್ಟು ಹರಡುವಿಕೆಗೆ ಅವಕಾಶ ನೀಡುವ ಘಟನೆಗಳು ನಗರದಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ಸೋಂಕಿತ ವ್ಯಕ್ತಿಗಳ ಮನೆ ಅಕ್ಕಪಕ್ಕದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಿಲ್ಲ ಎಂದು ಜನತೆ ದೂರಿದ್ದಾರೆ.

ಪತ್ತಾರಕಟ್ಟೆ ಹತ್ತಿರದ ಸೋಂಕಿತ ಸ್ಥಳದಲ್ಲಿ ಮಂಗಳವಾರ ಸಂತೆ ನಡೆದ ಬಗ್ಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದ್ದರು. ಕೂಡಲೇ ಪಪಂ ಮುಖ್ಯಾಧಿಕಾರಿ ಸಂಪರ್ಕಿಸಿ ಸಂತೆ ಬಂದ್ ಮಾಡಿಸಲಾಗಿದೆ. ಇನ್ನೂ ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸಲಾಗುವುದು.
ಮಂಜುಳಾ ತಿಮ್ಮಾಪುರ ಕೆರೂರ ಪಪಂ ಅಧ್ಯಕ್ಷೆ

blank


Community-verified icon
Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…