More

    ಕೇರಳದಲ್ಲಿ ಹೋಟೆಲ್​ಗಳು ಓಪನ್​, ಬಸ್​ ಸಂಚಾರವೂ ಶುರು; ಸರ್ಕಾರದ ಕ್ರಮಕ್ಕೆ ಕೆಂಡಾಮಂಡಲವಾಯ್ತೇ ಕೇಂದ್ರ?

    ನವದೆಹಲಿ: ಕೇರಳ ಸರ್ಕಾರ ಕರೊನಾ ನಿಯಂತ್ರಿಸುವಲ್ಲಿ ಅಪಾರ ಶ್ರಮ ವಹಿಸಿದೆ. ಸೋಂಕು ಹಬ್ಬುವುದನ್ನು ತಡೆಯಲು ಭಾರಿ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದೆ ಎಂದೆಲ್ಲ ಕೇಂದ್ರ ಸರ್ಕಾರವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ, ಸೋಮವಾರ ರಾಜ್ಯದಲ್ಲಿರುವ ಸ್ಥಿತಿ ಬಗ್ಗೆ ಕೇಂದ್ರ ಕೆಂಡಾಮಂಡಲವಾಗಿದೆ. ಸೂಕ್ತ ಉತ್ತರವನ್ನು ಕೋರಿ ಕೇಂದ್ರ ಗೃಹ ಸಚಿವಾಲಯ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ. ಅಷ್ಟಕ್ಕೂ ಅಲ್ಲಿ ಆಗಿರೋದಾದರೂ ಏನು ಅಂತೀರಾ?

    ಕೇರಳದಲ್ಲಿ ಹೋಟೆಲ್​ಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಪುಸ್ತಕ ಮಳಿಗೆಗಳನ್ನು ತೆರಯಲಾಗಿದೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಸವಾರಿ ಮಾಡಬಹುದು. ಕ್ಯಾಬ್​ಗಳಲ್ಲೂ ಇಬ್ಬರು ತೆರಳಲು ನಿರ್ಬಂಧವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಸ್​ಗಳು ಸಂಚರಿಸುತ್ತಿವೆ. ಸರ್ಕಾರಿ ಕಚೇರಿಗಳು ತರೆದಿವೆ.

    ಹಾಟ್​ಸ್ಪಾಟ್​ಗಳಲ್ಲದ ಪ್ರದೇಶಗಳಲ್ಲಿ ಮನೆಗೆಲಸದವರು ಎಂದಿನಂತೆ ಕೆಲಸ ಮಾಡಬಹುದು. ಎಸಿ ಹೊಂದಿಲ್ಲದ ಸಲೂನ್​ ತೆರೆಯಬಹುದು. ಎಲೆಕ್ಟ್ರಾನಿಕ್​ ಹಾಗೂ ಎಲೆಕ್ಟ್ರಿಕಲ್​ ದುರಸ್ತಿ ಮಳಿಗೆಗಳು ಕಾರ್ಯ ನಿವರ್ಹಿಸಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
    ಈ ಎಲ್ಲ ಕ್ರಮಗಳಿಗೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಏಕೆಂದರೆ, ಇದ್ಯಾವುದಕ್ಕೂ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಇದು ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಸೂಕ್ತ ಉತ್ತರ ನೀಡುವಂತೆ ಕೋರಿ ಕೇಂದ್ರ ಸರ್ಕಾರ ಕೇರಳಕ್ಕೆ ಪತ್ರ ಬರೆದಿದೆ.

    ಏಪ್ರಿಲ್​ 20ರಿಂದ ಅನ್ವಯವಾಗುವಂತೆ ಕೆಲ ನಿರ್ಬಂಧಗಳನ್ನು ಸಡಿಲಿಸಿ ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. ಅದನ್ನೇ ಆಧರಿಸಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂಬುದು ಕೇರಳ ಸರ್ಕಾರದ ವಾದ. ಸರ್ಕಾರಿ ಕಚೇರಿ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಶೇ.33 ಉದ್ಯೋಗಿಗಳೊಂದಿಗೆ ಪ್ರಾರಂಭಿಸಬಹುದು ಎಂದು ಕೇಂದ್ರ ತಿಳಿಸಿದೆ. ಆದರೆ, ಅಲ್ಲಿಗೆ ಉದ್ಯೋಗಿಗಳು ತೆರಳಲು ಅನುಕೂಲವಾಗುವಂತೆ ಸರ್ಕಾರಿ ಬಸ್​ಗಳನ್ನು ಬಳಸುವಂತೆ ಸೂಚಿಸಲಾಗಿದೆ. ಇನ್ನು ಕುಟುಂಬದ ಇಬ್ಬರು ಸದಸ್ಯರು ಒಂದೇ ಬೈಕ್​ನಲ್ಲಿ ತೆರಳಲು ನಿರ್ಬಂಧವಿಲ್ಲ. ಅಂದರೆ, ಪತಿ ಅಥವಾ ಪತ್ನಿಯನ್ನು ಕಚೇರಿಗೆ ಬಿಡಲು ಬೈಕ್​ನಲ್ಲಿ ಹೋಗಬಹುದು ಎನ್ನುತ್ತಾರೆ ಕೇರಳ ಮುಖ್ಯ ಕಾರ್ಯದರ್ಶಿ ಟಾಮ್​ ಜೋಸ್​.

    ಜತೆಗೆ, ಸಿಎಂ ಪಿಣರಾಯಿ ವಿಜಯನ್​ ಟ್ವಿಟ್​ ಮಾಡಿ, ರಾಜ್ಯವು ಇಂದಿನಿಂದ ಸಹಜ ಸ್ಥಿತಿಯತ್ತ ಮುಖ ಮಾಡಲಿದೆ. ಕೆಲ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ, ನಾವಿನ್ನೂ ಅಪಾಯದಿಂದ ಸಂಪೂರ್ಣ ದೂರಾಗಿಲ್ಲ. ಹೀಗಾಗಿ ಹೆಚ್ಚುವರಿ ಮನ್ನೆಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ.

    ರಾಜ್ಯದಲ್ಲೂ ಸಿಗುತ್ತಾ ಶಾಲಾ ಶುಲ್ಕದಿಂದ ವಿನಾಯ್ತಿ? ದೆಹಲಿ, ಬಿಹಾರ, ಹರಿಯಾಣದಲ್ಲಾಗಿರೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts