More

    ಸಾಮಾಜಿಕ, ಸಂಸ್ಕೃತಿಯ ಸಮ್ಮಿಲನ ‘ಇಂದುಲೇಖ’

    ಹೊಸಪೇಟೆ: ಕೇರಳದ ಸಾಂಸ್ಕೃತಿಕ ಪರಿಸರ ಹಾಗೂ ನಾಯರ್ ಸಮುದಾಯದ ಸ್ತ್ರೀಯರ ಬದುಕನ್ನು ಚಿತ್ರಿಸಿದ ಮಲಯಾಳಂನ ಬಹುಮುಖ್ಯ ಸಾಮಾಜಿಕ ಕಾದಂಬರಿ ‘ಇಂದುಲೇಖ’ ಎಂದು ಸಂಶೋಧಕ ಯು.ಲಿಂಗರಾಜು ಹೇಳಿದರು.

    ತಾಲೂಕಿನ ಕಮಲಾಪುರ ಸಮೀಪದ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವ್ಯಾಖ್ಯಾನ’ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಓ.ಚೆಂದು ಮೆನನ್ ಅವರ ‘ಇಂದುಲೇಖ’ ಕಾದಂಬರಿ ಕುರಿತು ವಿಷಯ ಮಂಡಿಸಿ, ‘ಇಂದುಲೇಖ’ ಕಾದಂಬರಿಯನ್ನು ಕನ್ನಡದಲ್ಲಿ ಸಿ.ರಾಘವನ್ ಅವರು 1995ರಲ್ಲಿ ಅನುವಾದ ಮಾಡಿದ್ದಾರೆ ಎಂದರು.

    ಈ ಕಾದಂಬರಿಯಲ್ಲಿ ಕೇರಳದ ನಂಬೂದಿರಿ ಬ್ರಾಹ್ಮಣ ಮತ್ತು ನಾಯರ್ ಸಮುದಾಯಗಳ ನಡುವಿನ ಸಂಬಂಧಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದ ಕೇರಳದ ಸಮಾಜದಲ್ಲಿ ಉಂಟಾದ ಬದಲಾವಣೆಯ ಅಂಶಗಳನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ ಎಂದು ವಿವರಿಸಿದರು.

    ಅಧ್ಯಕ್ಷತೆ ವಹಿಸಿದ್ದ ನಾಯಕರ ಜಯಮ್ಮ ಮಾತನಾಡಿ, ಶಿಕ್ಷಣ ಎನ್ನುವುದು ಸಮಾಜದಲ್ಲಿ ಬದಲಾವಣೆಗಳನ್ನು ತರಲು ಸಹಾಯಕವಾಗುವ ಬಹುಮುಖ್ಯ ಅಸ್ತ್ರ. ಇಂದುಲೇಖ ಕಾದಂಬರಿಯೂ ವಸಾಹತುಶಾಹಿ ಶಿಕ್ಷಣದಿಂದ ನಾಯರ್ ಸಮುದಾಯದ ಮಹಿಳೆಯರಲ್ಲಿ ವೈಚಾರಿಕ ಆಲೋಚನೆಗಳು ರೂಪುಗೊಂಡ ಬಗೆಯನ್ನು ತೆರೆದಿಟ್ಟಿದೆ ಎಂದು ಹೇಳಿದರು.

    ವಿಭಾಗದ ಮುಖ್ಯಸ್ಥ ಡಾ.ಎ.ಮೋಹನ ಕುಂಟಾರ್, ಸಂಚಾಲಕ ರೆಬೆಕ್ಕ, ಅನಂತ ಕೆ. ಉಪಸ್ಥಿತರಿದ್ದರು. ಸಂಗೀತ ವಿಭಾಗದ ಕಾವ್ಯ ಪಿ. ಪ್ರಾರ್ಥಿಸಿದರು. ಅನಂತ ಕೆ. ಸ್ವಾಗತಿಸಿದರು. ಬೇರ‌್ಗಿ ಜಯಶ್ರೀ ವಂದಿಸಿದರು. ಶ್ವೇತಾ ಬಾಳಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts