More

    ಕೇರಳ ಚುನಾವಣೆಗೆ ಮುನ್ನವೇ ಕೈ ಕೊಟ್ಟ ಕಾಂಗ್ರೆಸ್​ ನಾಯಕ! ಪಕ್ಷದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಆರೋಪ

    ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಕೇರಳ ಕಾಂಗ್ರೆಸ್​ಗೆ ಶಾಕ್​ ಎದುರಾಗಿದೆ. ಪಕ್ಷದ ಹಿರಿಯ ನಾಯಕರೊಬ್ಬರು ಪಕ್ಷಕ್ಕೆ ಕೈ ಕೊಟ್ಟಿದ್ದು, ಪಕ್ಷದಲ್ಲಿ ಪ್ರಕಾಪ್ರಭುತ್ವ ಸತ್ತು ಹೋಗಿದೆ ಎನ್ನುವ ಆರೋಪವನ್ನೂ ಮಾಡಿದ್ದಾರೆ.

    ಕಾಂಗ್ರೆಸ್​ನ ಹಿರಿಯ ಮುಖಂಡ ಪಿ.ಸಿ.ಚಾಕೊ ರಾಜೀನಾಮೆ ನೀಡಿರುವ ವ್ಯಕ್ತಿ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್​ನ ಸ್ಥಿತಿ ತೀರಾ ಹೀನಾಯವಾಗಿದೆ. ಇಲ್ಲಿ ಪ್ರಜಾಪ್ರಭುತ್ವವನ್ನು ಪಾಲಿಸಲಾಗುತ್ತಿಲ್ಲ ಬದಲಾಗಿ ಗುಂಪುಗಾರಿಕೆ ಮಾಡಿಕೊಂಡು ಅಧಿಕಾರ ಸಾಧಿಸಲಾಗುತ್ತಿದೆ. ಅದಕ್ಕೇ ಹೆಚ್ಚಿನ ಒತ್ತನ್ನೂ ನೀಡಲಾಗುತ್ತಿದೆ. ಇದರ ಬಗ್ಗೆ ನಾನು ಈಗಾಗಲೇ ಹೈ ಕಮಾಂಡ್​ಗೆ ಮಾಹಿತಿ ನೀಡಿದ್ದೇನೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಹೈ ಕಮಾಂಡ್​ ಕೂಡ ಗುಂಪುಗಾರಿಕೆಗೇ ಆದ್ಯತೆ ನೀಡುತ್ತಿರುವುದರಿಂದ ಬೇಸರಗೊಂಡು ನಾನು ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

    ಚಾಕೊ ಅವರು ಕಾಂಗ್ರೆಸ್​ನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ತ್ರಿಶೂರ್​ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಪಕ್ಷದ ವಕ್ತಾರರಾಗಿಯೂ ಸೇವೆ ಸಲ್ಲಿದ್ದರು. 74 ವರ್ಷದ ಹಿರಿಯ ನಾಯಕನ ದಿಢೀರ್​ ರಾಜೀನಾಮೆಯು ಕಾಂಗ್ರೆಸ್​ಗೆ ದೊಡ್ಡ ಹೊಡೆತವನ್ನು ನೀಡಿದಂತಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    VIDEO| 60ರ ವೃದ್ಧನ 2ನೇ ಮದುವೆಗೆ ಒಪ್ಪದ ಮಕ್ಕಳು! ವಿದ್ಯುತ್​ ಕಂಬವೇರಿ ಕುಳಿತ ವೃದ್ಧ

    ಬಾಯ್​ಫ್ರೆಂಡ್​ ಜತೆ 1 ಗಂಟೆ ಮಾತನಾಡಿ ಸಂಪರ್ಕ ಕಡಿದುಕೊಂಡ ಯುವತಿ ಮನೆಯಲ್ಲೇ ದುರಂತ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts