More

    ಕೇರಳದ ಪೊಲೀಸರು ಬಡಗಿ, ಪೇಟಿಂಗ್​ ಮತ್ತು ಡ್ರಮ್​ ಬಾರಿಸುವ ಕೆಲಸ ಆಯ್ಕೆ ಮಾಡಿಕೊಳ್ಳುತ್ತಿರುವುದು ಏಕೆ?

    ತಿರುವನಂತಪುರ: ಕೇರಳದ ನಾಗರಿಕ ಪೊಲೀಸ್​ ಅಧಿಕಾರಿಗಳು (ಸಿಪಿಒ) ದಿಢೀರನೆ ತಮ್ಮ ವೃತ್ತಿಯನ್ನೇ ಬದಲಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹಾಗೆಂದು ಅವರು ಪೊಲೀಸ್​ ಉದ್ಯೋಗವನ್ನು ತೊರೆಯುತ್ತಿಲ್ಲ. ಬದಲಿಗೆ ಪೊಲೀಸ್​ ಇಲಾಖೆಯಲ್ಲೇ ಇರುವ ಬಡಗಿ, ಪೇಂಟರ್​, ಡ್ರಮ್ಮರ್​, ಕಮ್ಮಾರಿಕೆ, ಸ್ವಚ್ಛತೆಗಾರದಂಥ ತಾಂತ್ರಿಕ ಕೆಲಸಗಳನ್ನು ಆಯ್ಕೆ ಮಾಡಿಕೊಂಡು ಪೊಲೀಸ್​ ಕರ್ತವ್ಯದಿಂದ ದೂರಾಗುತ್ತಿದ್ದಾರೆ.

    ಈ ಪ್ರಕ್ರಿಯೆಗೆ ಕಾರಣ ಏನೆಂದು ಹುಡುಕಿಕೊಂಡು ಹೊರಟರೆ, ತಮ್ಮ ತಮ್ಮ ಊರುಗಳಿಗೆ ವರ್ಗಾವಣೆ ಪಡೆದುಕೊಂಡು, ಕುಟುಂಬದವರ ಜತೆ ಹಾಯಾಗಿ ಕಾಲಕಳೆಯುವುದು ಎಂಬ ಉತ್ತರ ದೊರೆತಿದೆ.

    100ಕ್ಕೂ ಹೆಚ್ಚು ಸಿಪಿಒಗಳನ್ನು ಈ ಹುದ್ದೆಗಳಿಗೆ ನೇಮಿಸಿ ಕೇರಳದ ಕೇಂದ್ರ ಪೊಲೀಸ್​ ಕಚೇರಿ ಜೂನ್​ 25ರಂದು ಆದೇಶ ಹೊರಡಿಸಿದೆ. ಇವರೆಲ್ಲವೂ ತಾಂತ್ರಿಕ ಹುದ್ದೆಗಳಾಗಿದ್ದು, ಅವರವರ ಇಚ್ಛೆಯನುಸಾರ, ಬಯಸಿದ ತಾಂತ್ರಿಕ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಇದನ್ನೂ ಓದಿ: ಜಮೀನು ಸರ್ವೇ ಮಾಡಲು ಬಂದ ತಹಸೀಲ್ದಾರ್​ ಎದೆಗೆ ಚಾಕು ಇರಿದು ಕೊಂದ ನಿವೃತ್ತ ಶಿಕ್ಷಕ

    ಹೀಗೆ ತಾಂತ್ರಿಕ ಹುದ್ದೆಗಳಿಗೆ ವರ್ಗಾವಣೆಗೊಂಡಿರುವ ಸಿಪಿಒಗಳಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮಹಿಳಾ ಅಧಿಕಾರಿಗಳ ಸಂಖ್ಯೆ ಕೂಡ ಸಾಕಷ್ಟಿದೆ ಎನ್ನಲಾಗಿದೆ. ಕಾಸರಗೂಡಿನಿಂದ ತಿರುವನಂತಪುರದವರೆಗಿನ ವಿವಿಧ ಠಾಣೆಗಳಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು ಎಂಬುದು ಗಮನಾರ್ಹ ಸಂಗತಿ.

    ಪೊಲೀಸ್​ ಕರ್ತವ್ಯಕ್ಕೆ ಎಂದು ಆಯ್ಕೆಯಾಗಿದ್ದರೂ, ಈ ರೀತಿಯ ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ಪಡೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಪೊಲೀಸ್​ ಇಲಾಕೆಯ ನಿಯಮಗಳು ಕೂಡ ಇದಕ್ಕೆ ಸಹಕಾರಿಯಾಗಿವೆ. ಆದರೆ, ಈ ಹುದ್ದೆಗಳಿಗೆ ನಿಯೋಜನೆ ಪಡೆದುಕೊಂಡವರಿಗೆ ಆ ಕೆಲಸಗಳನ್ನು ಮಾಡುವ ಕೌಶಲ ಹಾಗೂ ಪರಿಣತಿ ಇದೆಯೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಇದು ವಿವಾದಕ್ಕೆ ಕಾರಣವಾಗಿದೆ.

    ಈ ಹುದ್ದೆಗಳಿಗೆ ನೇಮಕ ಮಾಡುವಂತೆ ಲೋಕೋಪಯೋಗಿ ಆಯೋಗಕ್ಕೆ 2010ರಲ್ಲೇ ಪತ್ರ ಬರೆಯಲಾಗಿತ್ತು. ಆದರೆ, ಈ ಹುದ್ದೆಗಳ ನೇಮಕಾತಿಗೆ ಅಗತ್ಯವಾದ ಉಪನಿಯಮಗಳನ್ನು ರೂಪಿಸಲಾಗಿಲ್ಲ. ಹಾಗಾಗಿ ಕಳೆದ 9 ವರ್ಷಗಳಿಂದ ಈ ಹುದ್ದೆಗಳು ಭರ್ತಿಯಾಗದೆ ಖಾಲಿವುಳಿದಿದ್ದವು. ಈ ಅವಕಾಶವನ್ನು ಬಳಸಿಕೊಂಡು ಕೌಶಲ ಮತ್ತು ಪರಿಣತಿ ಇಲ್ಲದಿದ್ದರೂ ಸಿಎಸ್​ಒಗಳು ಈ ಹುದ್ದೆಗಳಿಗೆ ನಿಯೋಜನೆ ಪಡೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಯಸ್ಸಾದ ಮಹಿಳೆ ಎಂದೂ ನೋಡದೆ ಫೇಸ್​ಬುಕ್​ ಫ್ರೆಂಡ್ ಹೀಗಾ ವಂಚಿಸೋದಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts