More

    ಕೆಂಪೇಗೌಡರು ಸರ್ವಧರ್ಮ ಸಹಿಷ್ಣು – ಬೀರಪ್ಪ ಕಡಗಂಚಿ

    ತೆಲಸಂಗ: ಬೆಂಗಳೂರು ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬ ಮಹದಾಸೆ ಹೊಂದಿದ್ದ ಕೆಂಪೇಗೌಡರು ವೃತ್ತಿಯ ಹೆಸರಿನಲ್ಲಿ 54 ಪೇಟೆ ನಿರ್ಮಿಸಿ ಎಲ್ಲ ಜಾತಿಯವರಿಗೆ ನೆಲೆ ಕಲ್ಪಿಸಿಕೊಟ್ಟ ಸರ್ವಧರ್ಮ ಸಹಿಷ್ಣು ಎಂದು ಪಿಡಿಒ ಬೀರಪ್ಪ ಕಡಗಂಚಿ ಹೇಳಿದ್ದಾರೆ.

    ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿ, ಬೆಂಗಳೂರು ಸುರಕ್ಷಿತ ಮತ್ತು ಅಹ್ಲಾದಕರ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ವಾಣಿಜ್ಯ ಕೇಂದ್ರವಾಗಿ ಬೆಳೆದು ನಿಲ್ಲಲು ಕೆಂಪೇಗೌಡರ ದೂರದೃಷ್ಟಿಯೇ ಕಾರಣ ಎಂದರು. ಯುವ ಮುಖಂಡ ರಾಜು ಪರ್ನಾಕರ ಮಾತನಾಡಿದರು. ಸಂಗಮೇಶ ಕುಮಠಳ್ಳಿ, ಶಿವಾನಂದ ಬನಗೊಂಡ, ಪವನ ಶಿಂಧೆ, ಮಹೇಶ ಕುಂಬಾರ, ರಮೇಶ ಸಿಂದಗಿ, ಗಜು ಮೋರೆ ಉಪಸ್ಥಿತರಿದ್ದರು.

    ಅರಟಾಳ ವರದಿ: ಕೆಂಪೇಗೌಡರು ರಾಜಧಾನಿ ನಿರ್ಮಾಣದ ಕನಸು ಹೊತ್ತು ಬೃಹತ್ ಬೆಂಗಳೂರು ನಿರ್ಮಿಸಿದ ಮಹಾನ್ ಶಕ್ತಿ ಎಂದು ಪಿಡಿಒ ಎ.ಜಿ.ಎಡಕೆ ಹೇಳಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೂಲತ ಕೃಷಿಕ ಕುಟುಂಬದಿಂದ ಬಂದವರಾದ ಕೆಂಪೇಗೌಡರು, ನೀರಿನ ಪೂರೈಕೆ ವಿಷಯದಲ್ಲಿ ಆಸಕ್ತಿ ಉಳ್ಳವರಾಗಿದ್ದರು.

    ಕೆಂಪೇಗೌಡರು ರಾಜಧಾನಿ ನಿರ್ಮಾಣದ ಜತೆಗೆ ಬೆಂಗಳೂರು ಸೇರಿ ನಾಡಿನ ತುಂಬ ಕೆರೆ-ಕಟ್ಟೆಗಳನ್ನು ನಿರ್ಮಿಸಿದರು. ಅವರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಗ್ರಾಪಂ ಕಾರ್ಯದರ್ಶಿ ಎಸ್. ಎಸ್. ಜನಾಯಿ, ಸಂಗು ಜಂಬಗಿ, ಹನುಮಂತ ಹಟ್ಟಿ, ಕಲ್ಲಪ್ಪ ಕಾಂಬಳೆ, ಮಹಾದೇವ ಮಾದರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts