More

    ಅಬಕಾರಿ ನೀತಿ ಹಗರಣ; ಮೂರನೇ ಬಾರಿಗೆ ವಿಚಾರಣೆಗೆ ಗೈರಾದ ಕೇಜ್ರಿವಾಲ್

    ನವದೆಹಲಿ: ಈ ಹಿಂದೆ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೆಶನಾಲಯ (ED) ನೋಟಿಸ್​ಗೆ ಲಿಖಿತ ರೂಪದಲ್ಲಿ ಉತ್ತರ ನೀಡುವ ಮೂಲಕ ಮೂರನೇ ಬಾರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

    ರಾಜಕೀಯ ದುರುದ್ಧೇಶದಿಂದ ಈ ನೋಟಿಸ್​ ಜಾರಿ ಮಾಡಲಾಗಿದ್ದು, ಅವರನ್ನು ಬಂಧಿಸುವ ಉದ್ದೇಶದಿಂದ ವಿಚಾರಣೆಗೆ ಹಾಜರಾಗುವಂತೆ ಪದೇ ಪದೇ ನೋಟಿಸ್​ ನೀಡಲಾಗುತ್ತಿದೆ ಎಂದು ಆಮ್​ ಆದ್ಮಿ ಪಕ್ಷ ಆರೋಪಿಸಿದೆ.

    ಇದನ್ನೂ ಓದಿ: ಬಸ್​ ಟ್ರಕ್​ ನಡುವೆ ಭೀಕರ ರಸ್ತೆ ಅಪಘಾತ; 14 ಮಂದಿ ಸಾವು

    ಈ ಕುರಿತು ಪ್ರತಿಕ್ರಿಯಿಸಿರುವ ಎಎಪಿಯ ಹಿರಿಯ ಮುಖಂಡರೊಬ್ಬರು, ಅಬಕಾರಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ED) ನೀಡಿದ್ದ ಮೂರನೇ ನೋಟಿಸ್‌ಗೆ ಲಿಖಿತ ಉತ್ತರ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ತನಿಖಾ ಸಂಸ್ಥೆಯೊಂದಿಗೆ ಅರವಿಂದ ಕೇಜ್ರಿವಾಲ್ ಅವರು ಸಹಕರಿಸಲು ಸಿದ್ಧವಿದ್ದಾರೆ. ಅವರನ್ನು ಬಂಧಿಸುವ ಉದ್ದೇಶದಿಂದ ನೋಟಿಸ್‌ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

    ಲೋಕಸಭೆ ಚುನಾವಣೆಗೂ ಮುನ್ನ ಏಕೆ ನೋಟಿಸ್​ ನೀಡಲಾಗುತ್ತಿದೆ. ಅವರನ್ನು ಚುನಾವಣಾ ಪ್ರಚಾರದಿಂದ ದೂರ ಇಡುವ ಸಲುವಾಗಿ ನೋಟಿಸ್​ ನೀಡಲಾಗಿದೆ. ಈ ರೀತಿಯ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಮುಂದಿನ ದಿನಗಳಲ್ಲಿ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಎಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts