More

    ಇದೆಲ್ಲಾ ಹೇಗೆ ಶುರುವಾಯ್ತೋ ಗೊತ್ತಿಲ್ಲ … ಮದುವೆ ವದಂತಿ ನಂಬಬೇಡಿ ಎಂದ ‘ಮಹಾನಟಿ’

    ಕೀರ್ತಿ ಇಂಥದ್ದೊಂದು ಹೇಳಿಕೆ ಯಾವಾಗ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಆದರೆ, ಅದ್ಯಾಕೋ ಕೀರ್ತಿಯಾಗಲೀ, ಅವರ ಕುಟುಂಬದವರಾಗಲೀ ಮದುವೆ ವದಂತಿಯ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಒಂದು ಹಂತದಲ್ಲಿ ಇದು ನಿಜವಿರಬಹುದೇನೋ ಎಂಬ ಸಂಶಯವೂ ಕೆಲವರಿಗಿತ್ತು. ಆದರೆ, ಇದೀಗ ಕೀರ್ತಿ ಮುಂದೆ ಬಂದು ತಮ್ಮ ಮದುವೆ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

    ಇಷ್ಟಕ್ಕೂ ಆಗಿದ್ದೇನೆಂದರೆ, ಕೆಲವು ದಿನಗಳ ಹಿಂದೆ ಕೀರ್ತಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಹಬ್ಬಿತ್ತು. ಹೇಳಿಕೇಳಿ, ಕೀರ್ತಿ ಈಗ ಭಯಂಕರ ಬ್ಯುಸಿ ನಟಿ. ತಮಿಳಿನಲ್ಲಿ ರಜನಿಕಾಂತ್ ಅಭಿನಯದ ‘ಅಣ್ಣತ್ತಿ’, ‘ಪೆಂಗ್ವಿನ್’, ತೆಲುಗಿನಲ್ಲಿ ‘ರಂಗ್‌ದೇ’, ‘ಗುಡ್ ಲಕ್ ಸಖಿ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗೆ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ಅವರು, ಕೇರಳದ ದೊಡ್ಡ ರಾಜಕಾರಣಿಯ ಮಗನ ಜತೆಗೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಈಗ ಅವೆಲ್ಲಕ್ಕೂ ಕೀರ್ತಿ ಇತಿಶ್ರೀ ಹಾಡಿದ್ದಾರೆ.

    ‘ಈ ಸುದ್ದಿ ಕೇಳಿ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಇದೆಲ್ಲಾ ಹೇಗೆ ಶುರುವಾಯ್ತು ಎಂದು ನನಗೆ ಖಂಡಿತಾ ಗೊತ್ತಿಲ್ಲ. ನಿಜ ಹೇಳಬೇಕೆಂದರೆ, ನನಗೆ ಮದುವೆಯಾಗುವ ಯೋಚನೆಯೂ ಇಲ್ಲ ಮತ್ತು ಅದಕ್ಕೆ ಪುರುಸೊತ್ತೂ ಇಲ್ಲ. ಸದ್ಯಕ್ಕೆ ಕೈತುಂಬಾ ಕೆಲಸವಿದೆ ಮತ್ತು ನಾನು ಆ ಬಗ್ಗೆ ಹೆಚ್ಚು ಗಮನಹರಿಸಿದ್ದೇನೆ’ ಎಂದಿದ್ದಾರೆ ಕೀರ್ತಿ.

    ಹೀಗೆ ಮದುವೆ ಸುದ್ದಿ ಹರಡುವ ಬದಲು, ಜನ ತಮ್ಮ ಕೆಲಸ ತಾವು ನೋಡಿಕೊಂಡರೆ ಎಷ್ಟೊಂದು ಚೆನ್ನಾಗಿರುತ್ತದೆ ಎಂದು ಕೀರ್ತಿ ಅಭಿಪ್ರಾಯಪಟ್ಟಿದ್ದಾರೆ. ‘ದೇಶದಲ್ಲಿ ಗಮನಹರಿಸುವ ಹಲವು ವಿಷಯಗಳಿವೆ. ಕೋವಿಡ್-19 ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಎಲ್ಲರೂ ಯೋಚಿಸಬೇಕಿದೆ’ ಎಂದು ಕೀರ್ತಿ ಹೇಳಿದ್ದಾರೆ.

    ಬುಲೆಟ್ ಪ್ರಕಾಶ್ ಸ್ಥಿತಿ ಗಂಭೀರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts