More

    ಗ್ರಾಮೀಣ ಭಾಗದಲ್ಲಿ ರ್ಯಾಂಡಮ್ ಪರೀಕ್ಷೆ ಮಾಡಿ

    ಗ್ರಾಮೀಣ ಭಾಗದಲ್ಲಿ ರ್ಯಾಂಡಮ್ ಪರೀಕ್ಷೆ ಮಾಡಿ

    ಚಿಕ್ಕಮಗಳೂರು: ಕರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸಬೇಕು ಎಂದು ತಾಪಂ ಅಧ್ಯಕ್ಷೆ ಶುಭಾ ಸತ್ಯಮೂರ್ತಿ ಆರೋಗ್ಯ ಇಲಾಖೆ ಅಧಿಕಾರಿ ಶ್ರೀಧರ್ ಅವರಿಗೆ ಸೂಚಿಸಿದರು.

    ತಾಪಂ ಸಭಾಂಗಣದಲ್ಲಿ ಗುರುವಾರ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಸೋಂಕು ನಗರ ಪ್ರದೇಶದಿಂದ ಹಳ್ಳಿಗಳಿಗೂ ವ್ಯಾಪಿಸಿದೆ. ಹೀಗಾಗಿ ಆರೋಗ್ಯ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

    ಆರೋಗ್ಯ ಇಲಾಖೆ ಅಧಿಕಾರಿ ಶ್ರೀಧರ್ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದಲ್ಲಿ 246 ಕರೊನಾ ಪ್ರಕರಣ ಪತ್ತೆಯಾಗಿದ್ದು, ನಗರದಲ್ಲಿ 521 ಸಕ್ರಿಯವಾಗಿವೆ. ರೋಗ ತಡೆ ಕುರಿತಂತೆ ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು.

    ಮಾಸ್ಕ್ರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಮಕ್ಕಳು ಮತ್ತು ವೃದ್ಧರು ವಿನಾಕಾರಣ ಹೊರಹೋಗದಂತೆ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದು ಕರಪತ್ರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ ಕೂಡಲೇ ಗ್ರಾಮೀಣ ಪ್ರದೇಶದಲ್ಲೂ ಕರೊನಾ ರ್ಯಾಂಡಮ್ ಪರೀಕ್ಷೆ ಮಾಡಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ನಾನೂ ಅವರೊಂದಿಗೆ ಮಾತನಾಡುತ್ತೇನೆ ಎಂದು ಶುಭಾ ಹೇಳಿದರು.

    ವಿದ್ಯಾಗಮ ಯೋಜನೆ ಅಡಿ ಗ್ರಾಮೀಣ ಭಾಗದಲ್ಲಿ ಸೋಮವಾರದಿಂದ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಬಿಇಒ ಮಂಜುನಾಥ ಹೇಳಿದರು. ತಾಪಂ ಇಒ ಎಚ್.ಡಿ.ರೇವಣ್ಣ ಇದ್ದರು.

    ಪ್ರಗತಿಯಲ್ಲಿ ವಿದ್ಯುತ್ ಸಂಪರ್ಕ: ಮಾಕೋಡಿನಲ್ಲಿ ಅರ್ಧ ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ 15 ದಿನ ಕಳೆದಿದೆ. ದೂರವಾಣಿ ಕರೆಗೂ ಯಾರೂ ಸ್ಪಂದಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠ ನಡೆಯುತ್ತಿದ್ದರೂ ಕಲಿಯಲಾಗುತ್ತಿಲ್ಲ. ಹೀಗೇ ಮುಂದುವರಿದರೆ ಅಲ್ಲಿನ ಜನಜೀವನದ ಸ್ಥಿತಿ ಏನು ಎಂದು ಉಪಾಧ್ಯಕ್ಷೆ ಶಾರದಾ ಪ್ರಶ್ನಿಸಿದಾಗ, ಈ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಸರಿಪಡಿಸುವುದಾಗಿ ಮೆಸ್ಕಾಂ ಜೆಇ ಕಾರ್ತಿಕ್ ಹೇಳಿದರು.

    ದೀನ ದಯಾಳ್ ಉಪಾಧ್ಯಾಯ ಮತ್ತು ಸೌಭಾಗ್ಯಾ ಯೋಜನೆ ಎಲ್ಲ ಕಾಮಗಾರಿಗಳೂ ಪೂರ್ಣಗೊಳ್ಳುವ ಹಂತದಲ್ಲಿವೆ. ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದ 3018 ಫಲಾನುಭವಿಗಳ ವಿಸõತ ಪಟ್ಟಿ ಕಳುಹಿಸಿದ್ದು ಅನುಮೋದನೆ ನಂತರ ಆ ಮನೆಗಳಿಗೂ ಸಂಪರ್ಕ ನೀಡಲಾಗುವುದು. ಮಳೆಯಿಂದ 140 ವಿದ್ಯುತ್ ಕಂಬಗಳು ಹಾನಿಯಗಿದ್ದು 90 ಕಂಬ ಬದಲಿಸಲಾಗಿದೆ. ಮೇಲಿನ ಹುಲುವತ್ತಿಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.

    ವಾಸಕ್ಕೆ ತಕ್ಕ ನಿವೇಶನ ಹಂಚಿ: ಕೆಳಗೂರು ಗ್ರಾಪಂ ಪರಿಶಿಷ್ಟ ಪಂಗಡದ 21 ಕುಟುಂಬಗಳು ಕೃಷ್ಣಪ್ಪ ಬಡಾವಣೆಯಲ್ಲಿ ಬಿಡಾರ ಹಾಕಿಕೊಂಡು ವಾಸಿಸುತ್ತಿವೆ. ಅವರ ಬಿಡಾರ 10*20 ವಿಸ್ತೀರ್ಣವಿದ್ದು ಅದಕ್ಕೆ ಹಕ್ಕುಪತ್ರ ಕೊಟ್ಟಿದ್ದಾರೆ. ಅಷ್ಟು ಚಿಕ್ಕ ನಿವೇಶನದಲ್ಲಿ ಮನೆ ನಿರ್ವಿುಸುವುದು ಹೇಗೆ? ಅಧಿಕಾರಿಗಳು ಇಷ್ಟು ಚಿಕ್ಕ ನಿವೇಶನದಲ್ಲಿ ಮನೆ ಕಟ್ಟಿ ವಾಸಿಸುತ್ತಾರಾ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಅನಿಲ್ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸ್ಥಳ ಪರಿಶೀಲಿಸಿ ಅವರಿಗೆ ನೀಡಿರುವ ಹಕ್ಕು ಪತ್ರ ಬದಲಾಯಿಸಿ ಮನೆ ನಿರ್ವಿುಸಲು ಅಗತ್ಯವಿರುವಷ್ಟು ಜಾಗ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts