More

    ಮಹಿಳೆಯರ ಮೀಸಲಾತಿಗಾಗಿ ಕೆಸಿಆರ್​ ಪುತ್ರಿಯಿಂದ ಉಪವಾಸ ಸತ್ಯಾಗ್ರಹ

    ನವದೆಹಲಿ: ಪ್ರಸಕ್ತ ಬಜೆಟ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸುವಂತೆ ಒತ್ತಾಯಿಸಿ ಭಾರತ್ ರಾಷ್ಟ್ರ ಸಮಿತಿಯ ಸಂಸದೆ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಶುಕ್ರವಾರ ರಾಷ್ಟ್ರ ರಾಜಧಾನಿಯ ಜಂತರ್‌ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಂಸತ್ತಿನ ಅಧಿವೇಶನ. ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕೂಡ ಉಪಸ್ಥಿತರಿದ್ದರು.

    ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಭಾರತದಾದ್ಯಂತ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ ವಿರೋಧ ಪಕ್ಷಗಳು ಮತ್ತು ಮಹಿಳಾ ಸಂಘಟನೆಗಳು ಭಾಗವಹಿಸುತ್ತಿವೆ.

    ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಇನ್ನೊಂದು ‘ಕಣ್ಣು’? ಹೊಸ ಪಕ್ಷದ ಹೆಸರು ಘೋಷಿಸಿದ ಕೆಸಿಆರ್​: ಕುಮಾರಸ್ವಾಮಿಯೂ ಸಾಥ್​…

    ಸಭೆಯನ್ನುದ್ದೇಶಿಸಿ ಮಾತನಾಡಿದ ಕೆ ಕವಿತಾ, ಈ ಮಸೂದೆಯು ರಾಷ್ಟ್ರದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದಿದ್ದು ಸಂಸತ್ತಿನಲ್ಲಿ ಈ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

    ‘ಮಹಿಳಾ ಮೀಸಲಾತಿ ಮಸೂದೆಯು ಮಹತ್ವದ್ದಾಗಿದ್ದು ನಾವು ಅದನ್ನು ಶೀಘ್ರದಲ್ಲೇ ತರಬೇಕಾಗಿದೆ. ಮಸೂದೆಯನ್ನು ಮಂಡಿಸುವವರೆಗೂ ಈ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಈ ಮಸೂದೆಯು ರಾಷ್ಟ್ರದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ನಾನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಈ ಮಸೂದೆ ಮಂಡಿಸಲು ವಿನಂತಿಸುತ್ತೇನೆ’ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿದ ಬಿಆರ್‌ಎಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಅವರು ಧನ್ಯವಾದ ಅರ್ಪಿಸಿದರು.

    ಇದನ್ನೂ ಓದಿ: VIDEO: ಪತ್ರಕರ್ತರ ಈ ಪ್ರಶ್ನೆಗೆ ಎದ್ದುನಿಂತ ನಿತೀಶ್​: ಕೆಸಿಆರ್​ ಕುರ್ತಾ ಎಳೆದರೂ, ಕೈ ಜಗ್ಗಿದರೂ ಕೇಳಲಿಲ್ಲ ಸಿಎಂ!

    ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅವರನ್ನು ವಿಚಾರಣೆಗೆ ಒಳಪಡಿಸುವ ಒಂದು ದಿನ ಮೊದಲು ಬಿಆರ್‌ಎಸ್ ನಾಯಕಿಯ ಉಪವಾಸ ಸತ್ಯಾಗ್ರಹ ಶುರುವಾಗಿದೆ ಎನ್ನುವುದು ಗಮನಾರ್ಹ ವಿಚಾರ. ‘ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ನಾವು ಮಾರ್ಚ್ 2ರಂದು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹದ ಕುರಿತು ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದೇವೆ. 18 ಪಕ್ಷಗಳು ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿವೆ. ED ಮಾರ್ಚ್ 9ರಂದು ನನ್ನನ್ನು ಕರೆದಿದೆ. ನಾನು ಮಾರ್ಚ್ 16ಕ್ಕೆ ಬರಬಹುದಾ ಎಂದು ವಿನಂತಿಸಿದೆ. ಆದರೆ ಅವರು ಏಕೆ ಆತುರಪಡುತ್ತಿದ್ದಾರೆ ಎಂದು ತಿಳಿದಿಲ್ಲ. ಹೀಗಾಗಿ ನಾನು ಮಾರ್ಚ್ 11 ಕ್ಕೆ ಒಪ್ಪಿಕೊಂಡೆ. ಏಜೆನ್ಸಿಯು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲು ಬಯಸಿದಾಗ, ಅದು ತನ್ನ ಮನೆಯಲ್ಲಿಯೇ ಮಾಡಲ್ಪಡುವ ಮೂಲಭೂತ ಹಕ್ಕನ್ನು ಹೊಂದಿದೆ. ಆದ್ದರಿಂದ, ನಾನು ತನಿಖೆ ಮಾಡಲು ಮಾರ್ಚ್ 11ರಂದು ನನ್ನ ಮನೆಗೆ ಬರಬೇಕು ಎಂದ ನಾನು ಇಡಿಗೆ ವಿನಂತಿಸಿದೆ; ಆದರೆ ನಾನು ಅವರ ಬಳಿಗೆ ಹೋಗಬೇಕು ಎಂದರು’ ಎಂದು ಅವರು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts