More

    ಕಾಯಕ, ದಾಸೋಹದ ಅರ್ಥ ತಿಳಿಸುವ ನುಲಿಯ ಚಂದಯ್ಯ ಅವರ ವಚನಗಳು

    ಕನಕಗಿರಿ: ತಾನು ಕಾಯಕನಿರತನಾಗಿ ಪ್ರತಿನಿತ್ಯದ ಅನ್ನವನ್ನು ತಾನೇ ದುಡಿದು ತಿನ್ನಬೇಕೆನ್ನುವ ಕಾಯಕ ಸಿದ್ಧಾಂತ ನುಲಿಯ ಚಂದಯ್ಯ ಅವರದಾಗಿತ್ತು ಎಂದು ಬಿಜೆಪಿ ಮಂಡಲ ಕಾರ್ಯದರ್ಶಿ ವಾಗೇಶ ಹಿರೇಮಠ ಹೇಳಿದರು.

    ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಗುರುವಾರ ಹಮ್ಮಿಕೊಳ್ಳಂಡಿದ್ದ 916ನೇ ನುಲಿಯ ಚಂದಯ್ಯ ಜಯಂತಿಯಲ್ಲಿ ಮಾತನಾಡಿದರು. ಮಹಾನ್ ವ್ಯಕ್ತಿ ನುಲಿಯ ಚಂದಯ್ಯ, ಬಸವಣ್ಣನ ಸಮಕಾಲೀನರು ಮತ್ತು ಅವರೊಂದಿಗೆ ಕೈಜೋಡಿಸಿದ ಪ್ರಮುಖ ಶರಣರಲ್ಲೊಬ್ಬರು ಎಂದರು.

    ಎಣ್ಣೆ ಹೊಳೆಯಲ್ಲಿ ಕಾಯಕ-ದಾಸೋಹ ಏರ್ಪಡಿಸಿದ್ದರ ಬಗ್ಗೆ ಈಗಲೂ ಐತಿಹ್ಯವಿದೆ. ಅಕ್ಕ ನಾಗಲಾಂಬಿಕೆ ಕಾಲವಾದ ನಂತರ ನಂದಿ ಕ್ಷೇತ್ರದಲ್ಲಿ ತಮ್ಮ ಬೆತ್ತ ಮತ್ತು ಜೋಳಿಗೆ ಇಟ್ಟು ಕಾಯಕ ದಾಸೋಹ ಮಾಡಿ ಹಲವು ವರ್ಷ ನೆಲೆ ನಿಂತಿದ್ದರು. ನುಲಿಯ ಚಂದಯ್ಯನ ಇಡೀ ವಚನಗಳನ್ನು ಓದಿದಾಗ ಗುರು-ಲಿಂಗ-ಜಂಗಮ ಮತ್ತು ಕಾಯಕ-ದಾಸೋಹ ಎನ್ನುವ ಅಂಶಗಳ ಬಗ್ಗೆ ಆಳವಾದ ಒಳಹುಗಳು ತಿಳಿಯುತ್ತದೆ ಎಂದು ಹೇಳಿದರು.

    ಕನಕಗಿರಿ ಮಂಡಲ ಪ್ರಧಾನ ಕಾರ್ಯದರ್ಶಿ ಗ್ಯಾನಪ್ಪ ಗಾಣಧಾಳ, ಪಪಂ ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಸದಸ್ಯರಾದ ಹನುಮಂತ ಬಸರಿಗಿಡದ, ಪ್ರಮುಖರಾದ ಯಂಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts