More

    ತಿಂಥಣಿ ಮೌನೇಶ್ವರ ಹಿಂದು-ಮುಸ್ಲಿಮರ ಭಾವೈಕ್ಯದ ಸಂಕೇತ

    ಕವಿತಾಳ: ತಿಂಥಣಿಯ ಜಗದ್ಗುರು ಮೌನೇಶ್ವರ ಹಿಂದು-ಮುಸ್ಲಿಮರ ಭಾವೈಕ್ಯತೆಯ ಸಂಕೇತ ಎಂದು ಆಹಾರ ಇಲಾಖೆ ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ ವಟಗಲ್ ಹೇಳಿದರು.

    ವಟಗಲ್ ಜಾಲಿಗುಡ್ಡದ ಶಿವಪುರದಲ್ಲಿ ಏರ್ಪಡಿಸಿದ್ದ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆ, ಸಂತ ಅಬ್ದುಲ್ ತಾತನವರ ತುಲಾಭಾರ ಮತ್ತು ದೀಪೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸಮಾಜದಲ್ಲಿ ಹಿಂದು-ಮುಸ್ಲಿಂ ಬೇಧಭಾವವಿದ್ದು ಇದ್ದು, ಹೋಗಬೇಕಾಗಿದೆ. ಅಬ್ದುಲ್ ತಾತನವರು ಮುಸ್ಲಿಮರಾದರೂ ಸಂತರಾಗಿ ಮೌನೇಶ್ವರರನ್ನು ಆರಾಧ್ಯ ದೈವವಾಗಿಸಿಕೊಂಡು ಧಾರ್ಮಿಕ ಕಾರ್ಯಗಳಾದ ಜಾತ್ರೆ, ದಾಸೋಹ ನಡೆಸುತ್ತಿರುವುದು ಹಿಂದು-ಮುಸ್ಲಿಮರ ಭಾವೈಕ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದರು.

    ಅಮೀನಗಡ ಗ್ರಾಪಂ ಅಧ್ಯಕ್ಷ ಮೌನೇಶ ದೊಡ್ಡಮನಿ ಮಾತನಾಡಿ, ಅಬ್ದುಲ್ ತಾತನವರು, ಭಾವೈಕ್ಯತೆ ಮೂಡಿಸುವ ಜತೆಗೆ ಅನ್ನದಾಸೋಹದ ಮೂಲಕ ಪ್ರಸಿದ್ಧರಾಗಿದ್ದಾರೆ ಎಂದರು. ವಟಗಲ್ ಬಸವೇಶ್ವರ ದೇವಸ್ಥಾನದಿಂದ ಶಿವಪುರದವರೆಗೆ ಬಾಜ ಭಜಂತ್ರಿ, ಕಳಸ, ಡೊಳ್ಳು ಕುಣಿತದೊಂದಿಗೆ ಮೌನೇಶ್ವರರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ದೇವಸ್ಥಾನ ಆವರಣದಲ್ಲಿ ಅಬ್ದುಲ್ ತಾತನವರ 10ನೇ ತುಲಾಭಾರವನ್ನು ಹನುಮಂತಿ ದೇವಪ್ಪ ಕಡ್ಡೋಣಿ ದಂಪತಿ ನೆರವೇರಿಸಿದರು.

    ಭಕ್ತರು ಮನದ ಬಯಕೆ ಈಡೇರಲೆಂದು ಪ್ರಾರ್ಥಿಸಿ ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಮೆರಗು ತಂದರು. ಸಂತ ಅಬ್ದುಲ್ ತಾತ, ರೈತ ಮುಖಂಡ ಬಸವರಾಜಪ್ಪ, ಗ್ರಾಪಂ ಸದಸ್ಯ ಆದನಗೌಡ, ಗ್ರಾಪಂ ಮಾಜಿ ಅಧ್ಯಕ್ಷ ್ಷ ಅಮರೇಗೌಡ, ಬಸವರಾಜ, ಹನುಮಂತಪ್ಪ, ಬಸವರಾಜಪ್ಪ, ಅಮರಪ್ಪ ಭಜಂತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts