More

    ಸಮಸ್ಯೆ ಪರಿಹಾರಕ್ಕೆ ಕೃಷಿಕರು ಒಟ್ಟಾಗಲಿ

    ಕವಿತಾಳ: ರೈತ ದೇಶದ ಬೆನ್ನೆಲುಬು ಎಂಬುದು ಭಾಷಣಕ್ಕಷ್ಟೇ ಸೀಮಿತವಾಗಿದ್ದು, ರೈತರ ಸಂಕಷ್ಟ ಕಾಲದಲ್ಲಿ ಯಾವ ಸರ್ಕಾರವಾಗಲಿ, ರಾಜಕಾರಣಿಗಳಾಗಲಿ ನೆರವಿಗೆ ಬರುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕೃಷಿಕರೆಲ್ಲ ಒಟ್ಟಾಗಿರಬೇಕೆಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ ಹೇಳಿದರು.

    ಸಮೀಪದ ಹೀರಾ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಸೋಮವಾರ ಏರ್ಪಡಿಸಿದ್ದ ರೈತ ಜಾಗೃತಿ ಸಭೆ ಮತ್ತು ಸಂಘದ ನೂತನ ಘಟಕ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯ ನಾಯಕರು ಹಾಗೂ ಸರ್ಕಾರಿ ನೌಕರರು ತಮ್ಮ ಸಮಸ್ಯೆಗಳನ್ನು ಗುಪ್ತವಾಗಿ ಬಗೆಹರಿಸಿಕೊಳ್ಳುತ್ತಾರೆ. ಆದರೆ ರೈತರ ವಿಷಯದಲ್ಲಿ ಎಲ್ಲ ಸರ್ಕಾರಗಳು ನಿರ್ಲಕ್ಷೃ ವಹಿಸಿವೆ ಎಂದು ದೂರಿದರು.

    ಸಂಘದ ಜಿಲ್ಲಾ ಅಧ್ಯಕ್ಷೆ ಅನಿತಾ ಬಸವರಾಜ ಮಂತ್ರಿ ಮಾತನಾಡಿ, ರೈತರು ಬೆಳೆದ ಫಸಲನ್ನು ಸಮರ್ಪಕ ಬೆಲೆಗೆ ಮಾರಾಟ ಮಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತದ ಬೆಲೆ ಕುಸಿದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ನಮ್ಮ ಹೋರಾಟ ಭ್ರಷ್ಟಾಚಾರ ಮತ್ತು ಮಧವರ್ತಿಗಳ ವಿರುದ್ಧ. ಪ್ರತಿ ಗ್ರಾಮದಲ್ಲಿ ರೈತ ಸಂಘ ಸ್ಥಾಪಿಸಿ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಮುಖರಾದ ಬಸವರಾಜ ಕಸನದೊಡ್ಡಿ, ನಾಗರಾಜ ಹೀರಾ, ಅಯ್ಯಣ್ಣ ಹುಡಾ, ಬಸನಗೌಡ ಬುದ್ದಿನ್ನಿ, ಅಂಬಣ್ಣ ಹುಡಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts