More

    ಜಾತ್ರೆಯಲ್ಲಿನ ಮಳಿಗೆಗಳು ಜಲಾವೃತ

    ಕವಿತಾಳ: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿ ನೀರು ಹರಿದಿದ್ದರಿಂದ ಸವಾರರು ಪರದಾಡಿದರು.

    ಹಾಲಾಪುರದಲ್ಲಿ ಮಂಗಳವಾರ ಕರಿಯಪ್ಪನ ಜಾತ್ರೆ ಇದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂದೆ ಹಾಕಿದ್ದ ಮಳಿಗೆಗಳು ಹಳ್ಳದ ನೀರಿನಿಂದ ಜಲಾವೃತವಾಗಿವೆ. ಇದರಿಂದಾಗಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಚಾಪುರ ಭೀಮಣ್ಣ ನಾಯಕರ ಹತ್ತಿ ಬೆಳೆ ನೀರಿನಿಂದ ಹಾನಿಯಾಗಿದೆ. ತುಗ್ಗಲದಿನ್ನಿಯಲ್ಲಿ ಬಸವರಾಜ ಮತ್ತು ಇತರ ರೈತರ ಭತ್ತದ ಬೆಳೆ ನೀರು ಹರಿದು ನಾಶವಾಗಿದೆ. ಮಲ್ಕಾಪುರ, ಮಲ್ಲದಗುಡ್ಡ, ತೋರಣದಿನ್ನಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇರಕಲ್, ಕಾಚಾಪುರ ಹಳ್ಳ ತುಂಬಿ ಹರಿಯುತ್ತಿರುವದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

    ಅಮೀನಗಡದ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಯತಗಲ್-ಅಮೀನಗಡ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ. ಹೀರಾ ಚಿಂಚರಕಿ, ತೊಪ್ಪಲದೊಡ್ಡಿಯಲ್ಲಿ ಬೆಳೆಗಳು ಹಾನಿಯಾಗಿವೆ. ಬಾಗಲವಾಡದಲ್ಲಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಮೂರು ತಾಸಿಗೆ ಹೆಚ್ಚು ಹೊತ್ತು ಸಂಚಾರ ಸ್ಥಗಿತವಾಗಿತ್ತು. ಬಸ್ ನಿಲ್ದಾಣ ಹತ್ತಿರದ ಜಾಗದಲ್ಲಿರುವ ಅಲೆಮಾರಿ ಸಮುದಾಯದವರ ಗುಡಿಸಲುಗಳು ಜಲಾವೃತವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts