More

    ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್​ಹೌಸ್​ಗೆ ನುಗ್ಗಿದ ನೀರು: ಸಿಎಂ ಬೊಮ್ಮಾಯಿ‌ ದೌಡು

    ಬೆಂಗಳೂರು: ಕಾವೇರಿ ನದಿ ನೀರೆತ್ತಿ ಶುದ್ಧೀಕರಿಸಿದ ನಂತರ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ ಪಂಪ್​ಹೌಸ್​ಗೆ ಮಳೆ‌ ನೀರು ನುಗ್ಗಿ ಯಂತ್ರಗಳು ಸ್ತಬ್ಧವಾಗಿದ್ದು, ಯಂತ್ರಗಳ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ.

    ಈ ವಿಚಾರ ಗೊತ್ತಾಗುತ್ತಿದ್ದಂತೆ ಅಲ್ಲಿನ ವಸ್ತುಸ್ಥಿತಿ ಪರಿಶೀಲನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಸೋಮವಾರ ಮಧ್ಯಾಹ್ನ ಸ್ಥಳಕ್ಕೆ ತೆರಳಿದರು. ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ತೊರೆಕಾಡನಹಳ್ಳಿ ಪಂಪ್ ಸ್ಟೇಶಸ್​ಗೆ ನೀರು ನುಗ್ಗಿ ಯಂತ್ರೋಪಕರಣಗಳು ಸ್ಥಗಿತವಾಗಿವೆ. ಈಗಾಗಲೇ ಬಿಡಬ್ಲ್ಯೂಎಸ್ಎಸ್​ಬಿ ಅಧ್ಯಕ್ಷರ ಜತೆ ಮಾತನಾಡಿದ್ದೇನೆ, ಅವರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಖುದ್ದು ಹೋಗಿ ಪರಿಶೀಲನೆ ಮಾಡುವೆ. ಸಂಜೆಯೊಳಗೆ ಯಂತ್ರೋಪಕರಣಗಳು ಮತ್ತೆ ಚಾಲನೆಯಾಗಲಿವೆ. ತುರ್ತು ಕೆಲಸ ನಡೆಯುತ್ತಿದ್ದು, ತೊರೆಕಾಡನಹಳ್ಳಿ ಪರಿಶೀಲನೆ ಮಾಡಿದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದರು.

    ಬೆಂಗಳೂರಿನಲ್ಲಿ ಕೂಡ ಮಳೆಯಾಗಿದೆ. ಈ ಬಗ್ಗೆ ಆಯುಕ್ತರಿಂದ ಮಾಹಿತಿ ಪಡೆದಿರುವೆ. ವಿಶೇಷವಾಗಿ ಮೊನ್ನೆ ಮಳೆಯಾದ ಸ್ಥಳದಲ್ಲೇ ಮತ್ತೆ ಮಳೆಯಾಗಿದೆ. ಬೊಮ್ಮನಳ್ಳಿಯಳ್ಳಿಯಲ್ಲಿ 30 ಕಡೆ, ಮಹದೇವಪುರದಲ್ಲಿ ಕೆಲವು ಕಡೆ ಮಳೆಯಾಗಿದೆ. ಮಹದೇವಪುರ ಹಾಗೂ ಬೊಮ್ಮನಹಳ್ಳಿಗೆ ಎಸ್​ಡಿಆರ್​ಎಫ್ ಟೀಮ್ ಕಳುಹಿಸಲು ಹೇಳಿದ್ದೇನೆ. ಬೋಟ್ ಅವಶ್ಯಕತೆ ಇದ್ರೆ ತರಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ಸ್ಥಳದಲ್ಲೇ ಎಂಜಿನಿಯರ್ ಗಳಿದ್ದಾರೆ ಎಂದು ತಿಳಿಸಿದರು.

    ಎಲ್ಲೆಲ್ಲಿ ರಸ್ತೆಗಳ ಮೇಲೆ ನೀರು ನಿಂತಿದೆಯೋ ಅದನ್ನೆಲ್ಲ ಕ್ಲಿಯರ್ ಮಾಡಲು ಆದೇಶ ಕೊಟ್ಟಿದ್ದೇನೆ. ಮಳೆ ನೀರಿನ ಸಮಸ್ಯೆ ಪರಿಹಾರಕ್ಕೆ ತಾತ್ಕಾಲಿಕವಾಗಿ ಏನು ಪ್ಲಾನ್ ಮಾಡಬೇಕೋ ಅದನ್ನು ಮಾಡಿಕೊಂಡಿದ್ದು, ತಕ್ಷಣ ಕಾರ್ಯಗತವಾಗಲಿದೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ವೈರಲ್​ ಪೋಸ್ಟ್ ಎಡವಟ್ಟು:​ ಜೀವ ಬರುತ್ತೆ ಅಂತ ಬಾಲಕನ ಶವವನ್ನು ಉಪ್ಪಿನ ರಾಶಿಯಲ್ಲಿಟ್ಟ ಗ್ರಾಮಸ್ಥರು!

    ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದನ್ನು ಸಹಿಸಲಾರದೇ ಮಗನ ಸಹಪಾಠಿಯನ್ನೇ ಕೊಂದ ಮಹಿಳೆ!

    ಮಠಗಳಲ್ಲಿ ಲೈಂಗಿಕ ಹಗರಣ: ಮಹಿಳೆಯರ ಆಡಿಯೋ ವೈರಲ್​- ಮನನೊಂದು ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts