More

    ಕಾವೇರಿ 2.0ತಂತ್ರಾಂಶದಿಂದ ಮಧ್ಯವರ್ತಿಗಳಿಗೆ ತಡೆ

    ಕಂಪ್ಲಿ: ಕಾವೇರಿ 2.0ತಂತ್ರಾಶ ಜೋಡಣೆಯಿಂದ ನೋಂದಣಿ ಕಚೇರಿಗೆ ನೋಂದಣಿದಾರರು ಅಲೆಯುವುದನ್ನು ತಡೆಯಲು ಸಾಧ್ಯವಿದೆ ಎಂದು ಬಳ್ಳಾರಿ ಜಿಲ್ಲಾ ನೋಂದಣಾಧಿಕಾರಿ ಮಾಬುನ್ನಿಸಾ ಬೇಗಮ್ ಹೇಳಿದರು.

    ಇದನ್ನೂ ಓದಿ:

    ಮನೆಯಿಂದಲೇ ತಮ್ಮ ದಾಖಲೆ ಲಗತ್ತು

    ಇಲ್ಲಿನ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕಾವೇರಿ 2.0ತಂತ್ರಾಂಶ ಬಳಕೆಗೆ ಚಾಲನೆ ನೀಡಿ, ಕಾವೇರಿ 2.0ತಂತ್ರಾಂಶವು ಸುಧಾರಿತ ತಂತ್ರಾಂಶವಾಗಿದ್ದು, ಮನೆಯಿಂದಲೇ ತಮ್ಮ ದಾಖಲೆಗಳನ್ನು ಮೊಬೈಲ್ ಮೂಲಕ ಲಗತ್ತು ಮಾಡಬಹುದಾಗಿದೆ.

    ಕೇವಲ ಹದಿನೈದು ನಿಮಿಷಗಳಲ್ಲಿ ನೋಂದಣಿ ಕಾರ್ಯ ಮುಕ್ತಾಯ

    ಲಗತ್ತಿಸಿದ ದಾಖಲೆಗಳನ್ನು ನೋಂದಣಾಧಿಕಾರಿ ಪರಿಶೀಲಿಸಿ ಮುದ್ರಾಂಕ ಶುಲ್ಕ(ಸ್ಟ್ಯಾಂಪ್ ಡ್ಯೂಟಿ)ನಿಗದಿಪಡಿಸಿ, ನೋಂದಣಿಯ ದಿನಾಂಕ, ಸಮಯವನ್ನು ನೋಂದಣಿದಾರರಿಗೆ ತಿಳಿಸಲಾಗುವುದು. ಕೇವಲ ಹದಿನೈದು ನಿಮಿಷಗಳಲ್ಲಿ ನೋಂದಣಿ ಕಾರ್ಯ ಮುಕ್ತಾಯಗೊಳ್ಳುವುದರಿಂದ ಗಂಟೆಗಟ್ಟಲೆ ನೋಂದಣಿ ಕಚೇರಿಯಲ್ಲಿ ಕಾಯುವುದನ್ನು ತಪ್ಪಿಸಬಹುದಾಗಿದೆ. ಮುದ್ರಾಂಕ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸುವ ಸೌಲಭ್ಯವಿದೆ.

    ದಸ್ತಾವೇಜು ಬರಹಗಾರರಿಗೆ ತರಬೇತಿ

    ಇದರಿಂದ ಮಧ್ಯವರ್ತಿಗಳ ಹಾವಳಿ ತಡೆಯಲಾಗುವುದು. ಕಾವೇರಿ ತಂತ್ರಾಂಶ ಅಳವಡಿಕೆ, ಬಳಕೆ ಕುರಿತು ನೋಂದಣಿದಾರರಿಗೆ ತಿಳಿಸಿಕೊಡಲು ದಸ್ತಾವೇಜು ಬರಹಗಾರರಿಗೆ ತರಬೇತಿ ನೀಡಿದ್ದು, ನೋಂದಣಾಧಿಕಾರಿಗಳಿಂದಲೂ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

    ಕಾವೇರಿ 2.0ತಂತ್ರಾಂಶವನ್ನು ಬಳಸುವಲ್ಲಿ ಜಾಗೃತಿ ಮೂಡಿಸಲಾಗುವುದು. ಜಿಲ್ಲೆಯ ಎಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾವೇರಿ 2.0ತಂತ್ರಾಂಶವನ್ನು ಅಳವಡಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts