More

    ಶಿಕ್ಷಕರ ವರ್ಗಾವಣೆಗೆ ಕೆಎಟಿ ಸೂಚನೆ; 23ಕ್ಕೆ ವಿಚಾರಣೆ ಮುಂದೂಡಿಕೆ

    ಬೆಂಗಳೂರು: ಸದ್ಯ ಚಾಲ್ತಿಯಲ್ಲಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದುವರಿ ಸದಂತೆ ಕರ್ನಾಟಕ ಆಡಳಿತಾತ್ಮ ನ್ಯಾಯ ಮಂಡಳಿ(ಕೆಎಟಿ) ತಡೆಯಾಜ್ಞೆ ಕೊಟ್ಟಿದೆ. 2016-17ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆ ಯಿಂದ ತೊಂದರೆಗೆ ಸಿಲುಕಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಲೇಹಳ್ಳಿ ಸರ್ಕಾರಿ ಪ್ರೌಢ ಮತ್ತು ಪ್ರಾರ್ಥಮಿಕ ಶಾಲಾ ಶಿಕ್ಷಕ ಬಿ.ಎನ್.ಮಹೇಶ್ವರಪ್ಪ ಸೇರಿ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಟಿಯ ಹಂಗಾಮಿ ಅಧ್ಯಕ್ಷ ನ್ಯಾ. ಆರ್.ಬಿ.ಬೂದಿಹಾಳ್ ಮತ್ತು ಆಡಳಿತಾತ್ಮಕ ಸದಸ್ಯ ಶಿವಶೈಲಂ ಅವರಿದ್ದ ಪೀಠ, ಇಡೀ ವರ್ಗಾವಣೆ ಪ್ರಕ್ರಿಯೆಗೆ ಯಥಾಸ್ಥಿತಿ ಕಾಯ್ದು ಕೊಳ್ಳಲು ಆದೇಶಿಸಿದೆ. ವಿಚಾರಣೆಯನ್ನು ನ್ಯಾಯಪೀಠ ಡಿ.23ಕ್ಕೆ ಮುಂದೂಡಿದೆ. ವರ್ಗಾವಣೆ ವೇಳಾಪಟ್ಟಿ ಪ್ರಕಾರ ಜನವರಿಯಲ್ಲಿ ಆರಂಭವಾಗಬೇಕಿದ್ದ ಕೌನ್ಸೆಲಿಂಗ್ ಪ್ರಕ್ರಿಯೆ ಕೂಡ ಮುಂದೂಡುವ ಬಗ್ಗೆ ಶಿಕ್ಷಣ ಇಲಾಖೆ ಆಲೋಚಿಸಿದೆ.

    ಅರ್ಜಿದಾರರ ವಾದವೇನು?: 2016-17ನೇ ಸಾಲಿನ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಶಿಕ್ಷಕರು ತೊಂದರೆಗೆ ಸಿಲುಕಿದ್ದಾರೆ. 3 ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಇದೀಗ ಶಿಕ್ಷಣ ಇಲಾಖೆ 2020-21ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಗೆ ಕೌನ್ಸಿಲ್ ನಡೆಸಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಲು 2016-17ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಿಂದ ತೊಂದರೆಗೆ ಸಿಲುಕಿದವರಿಗೆ ಮೊದಲ ಆಧ್ಯತೆ ನೀಡಬೇಕಾಗಿತ್ತು. ಆದರೆ, 2019-20ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಿಂದ ತೊಂದರೆಗೆ ಸಿಲುಕಿರುವವರಿಗೆ ಮೊದಲ ಆಧ್ಯತೆ ನೀಡಿದೆ. ಇದು ಕಾನೂನುಬಾಹಿರವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿನ ವರ್ಗಾವಣೆ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. 2020ರ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನ.30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. 70 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ವೇಳಾಪಟ್ಟಿಯ ಪ್ರಕಾರ ಜನವರಿಯಲ್ಲಿ ಕೌನ್ಸೆಲಿಂಗ್ ಆರಂಭವಾಗಲಿದೆ.

    ಪಾಲಿಟೆಕ್ನಿಕ್ ಕಾಲೇಜು ತಾತ್ಕಾಲಿಕ ವೇಳಾಪಟ್ಟಿ

    ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಪಾಲಿಟೆಕ್ನಿಕ್ ಕಾಲೇಜಿನ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಿಸುವ ಸಂಬಂಧ ತಾತ್ಕಾಲಿಕ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿಪ್ಲೊಮಾ ಒಂದು ಮತ್ತು 3ನೇ ಸೆಮಿಸ್ಟರ್ ಆನ್​ಲೈನ್ ಹಾಗೂ ಭೌತಿಕ ಸಂಪರ್ಕ ತರಗತಿಗಳು ಹಾಗೂ 5ನೇ ಸೆಮಿಸ್ಟರ್ ಭೌತಿಕ ತರಗತಿ, ಆನ್​ಲೈನ್ ತರಗತಿ, ಭೌತಿಕ ಸಂಪರ್ಕ ತರಗತಿಗಳು 2021ರ ಮಾರ್ಚ್ 12ಕ್ಕೆ ಪೂರ್ಣಗೊಳ್ಳಲಿದೆ. ಡಿಪ್ಲೊಮಾ 1, 3 ಮತ್ತು 5ನೇ ತರಗತಿ ಪ್ರಾಯೋಗಿಕ ಪರೀಕ್ಷೆಗಳು 2021ರ ಮಾರ್ಚ್ 18ಕ್ಕೆ ಆರಂಭಗೊಂಡು, ಮಾರ್ಚ್ 27ಕ್ಕೆ ಮುಗಿಯಲಿದೆ. ಥಿಯರಿ ಪರೀಕ್ಷೆಗಳು ಮಾ.31ಕ್ಕೆ ಆರಂಭಗೊಂಡು, ಏಪ್ರಿಲ್ 20ಕ್ಕೆ ಮುಗಿಯಲಿದೆ ಎಂದು ಇಲಾಖೆ ತಿಳಿಸಿದೆ.

    ಕನ್ನಡದಲ್ಲೂ ಜೆಇಇ ಮೇನ್ ಪರೀಕ್ಷೆಗೆ ಅವಕಾಶ

    ನವದೆಹಲಿ: ಮುಖ್ಯ ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮೇನ್) ಮುಂದಿನ ವರ್ಷದಿಂದ ವರ್ಷಕ್ಕೆ 4 ಬಾರಿ ನಡೆಸಲು ಸರ್ಕಾರ ನಿರ್ಧರಿಸಿದೆ. 2021ರಲ್ಲಿ ಫೆ.23ರಿಂದ 26, ನಂತರ ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ನಡೆದ ನಾಲ್ಕೈದು ದಿನದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಹಿಂದಿ, ಇಂಗ್ಲಿಷ್, ಕನ್ನಡ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಈ ಸಾರಿ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಪರೀಕ್ಷಾ ಕ್ರಮ ಹಾಗೂ ಪ್ರಶ್ನಪತ್ರಿಕೆ ಆಯ್ಕೆಯಲ್ಲೂ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts