More

    ‘ತಲಪಾಡಿ ಟು ಕಾಶ್ಮೀರ’ ವಾಕ್ ಆ್ಯಂಡ್ ಡ್ರಾಪ್ ಪ್ರಯಾಣ: ಪಜೀರ್ ಗ್ರಾಮದ ಯುವಕರಿಂದ ವಿಭಿನ್ನ ಸಾಹಸ

    ಉಳ್ಳಾಲ: ಬಂಟ್ವಾಳ ತಾಲೂಕಿನ ಪಜೀರ್ ಗ್ರಾಮದ ಯುವಕರಿಬ್ಬರು ತಲಪಾಡಿಯಿಂದ ಕಾಶ್ಮೀರಕ್ಕೆ ವಾಕ್ ಆ್ಯಂಡ್ ಡ್ರಾಪ್ ಪ್ರಯಾಣ ಆರಂಭಿಸಿದ್ದು, ಈ ಮೂಲಕ ಅಧ್ಯಯನಕ್ಕೆ ಮುಂದಾಗಿದ್ದಾರೆ.

    ಮುಹಮ್ಮದ್ ಮೆಹ್ತಾಬ್ ಮತ್ತು ಮುಹಮ್ಮದ್ ಬಿಲಾಲ್ ಎಂಬುವರು ಆರು ದಿನಗಳ ಹಿಂದೆ ತಲಪಾಡಿಯಿಂದ ಪ್ರಯಾಣ ಆರಂಭಿಸಿದ್ದಾರೆ. ಮೆಹ್ತಾಬ್ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಬಿಲಾಲ್ ಎಸ್ಸೆಸ್ಸೆಲ್ಸಿ ಮುಗಿಸಿದ ಬಳಿಕ ಲಾಕ್‌ಡೌನ್ ಎದುರಾಗಿದ್ದರಿಂದ ಮನೆಯಲ್ಲೇ ಇದ್ದರು. ಇವರಿಬ್ಬರು ಕರೊನಾ ಸಂದರ್ಭದಲ್ಲೇ ಅಧ್ಯಯನಕ್ಕಾಗಿ ಪ್ರಯಾಣ ಬೆಳೆಸಬೇಕೆಂದು ಯೋಚಿಸಿದ್ದು, ಕೊನೆಗೆ ಮನೆಯವರ ಒಪ್ಪಿಗೆ ಪಡೆದು ತಲಪಾಡಿಯಿಂದ ಕಾಶ್ಮೀರ ಪ್ರಯಾಣ ಆರಂಭಿಸಿದ್ದಾರೆ.

    ಆರಂಭದಲ್ಲಿ ತಲಪಾಡಿಯಿಂದ ಕನ್ಯಾಕುಮಾರಿಗೆ ಪ್ರಯಾಣಿಸಲಿದ್ದು, ನಂತರ ಕಾಶ್ಮೀರಕ್ಕೆ ಪ್ರಯಾಣಿಸಲಿದ್ದಾರೆ. ನಡೆದುಕೊಂಡೇ ಹೋಗುವ ಸಂದರ್ಭ ಸಿಗುವ ವಾಹನಗಳಿಗೆ ಕೈ ತೋರಿಸುತ್ತಾರೆ. ನಿಲ್ಲಿಸಿದರೆ ಹತ್ತುವುದು, ಇಲ್ಲವೇ ನಡೆಯುತ್ತಲೇ ಸಾಗುತ್ತಾರೆ. ಪ್ರತಿದಿನ ನೂರು ಕಿ.ಮೀ ಸಂಚರಿಸುತ್ತಿದ್ದು, ಯಾವುದೇ ವಾಹನ ಸಿಗದಿದ್ದರೆ, 50 ಕಿ.ಮೀಗೆ ಪ್ರಯಾಣ ನಿಲ್ಲುತ್ತದೆ. ನಿಗದಿತ ದೂರ ಆಗುತ್ತಿದ್ದಂತೆ ಎಲ್ಲಾದರೂ ಟೆಂಟ್ ಹಾಕಿ ರಾತ್ರಿ ಕಳೆದು ಬೆಳಗ್ಗೆ ಮತ್ತೆ ಪ್ರಯಾಣ ಆರಂಭಿಸುತ್ತಾರೆ.

    ಭಾನುವಾರ ಕೊಚ್ಚಿ ತಲುಪಿದ್ದು, ಸೋಮವಾರ ಬೆಳಗ್ಗೆ ಕನ್ಯಾಕುಮಾರಿ ಪ್ರಯಾಣ ಬೆಳೆಸುತ್ತೇವೆ. ಆರೇಳು ದಿನಗಳಲ್ಲಿ ಕನ್ಯಾಕುಮಾರಿ ತಲುಪುವ ನಿರೀಕ್ಷೆ ಇದ್ದು, ಅಲ್ಲಿಂದ ಕಾಶ್ಮೀರಕ್ಕೆ ಪ್ರಯಾಣಿಸಲಿದ್ದೇವೆ. ಮೊದಲ ದಿನ ಕೇರಳದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ತಂಗಲು ಅವಕಾಶ ಸಿಗಲಿಲ್ಲ. ಬಳಿಕ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದ ಬಳಿಕ ಅನುಮತಿ ನೀಡಿದ್ದಾರೆ.
    ಮುಹಮ್ಮದ್ ಮೆಹ್ತಾಬ್, ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts