More

    ಜಿಲ್ಲಾ ಕಸಾಪದಿಂದ ಸಂಕ್ರಾಂತಿ ಕವಿಗೋಷ್ಠಿ

    ವಿಜಯವಾಣಿ ಸುದ್ದಿಜಾಲ ಗದಗ
    ಕವಿ ತಮ್ಮ ನೋಟವನ್ನು, ಅನುಭವವನ್ನು ರಸವತ್ತಾಗಿ ಓದುಗರೆದುರು ತೆರೆದಿಡುವುದಾಗಿದೆ ಎಂದು ಕವಿಯಿತ್ರಿ ಅರುಣಾ ನರೇಂದ್ರ ಹೇಳಿದರು.
    ತೋಟಂದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಕಸಾಪದಿಂದ ಭಾನುವಾರ ಏರ್ಪಡಿಸಿದ್ದ ಸಂಕ್ರಾಂತಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾವ್ಯ ಎಂದರೆ ಕೇವಲ ಒಂದು ವಾಖ್ಯವನ್ನು ವಿಸ್ತರಿಸುವುದುಲ್ಲ. ಕಾಡಿನಲ್ಲಿ ಹಾದಿ ತಪ್ಪಿ ನಡೆಯುವವನಿಗೂ ಬೆಳಕಿನ ಬೀಜವನ್ನು ಕಂಡು ಅದರತ್ತ ಸಾಗುವವನಿಗೂ ವ್ಯತ್ಯಾಸ ಇರುವ ಹಾಗೆ, ಅರ್ಥ ರ್ಪೂಣವಾಗಿ ಸಂಕೀರ್ಣವಾಗಿ ಪದಗಳನ್ನು ಕಟ್ಟಿಕೊಡುವುದೇ ಕಾವ್ಯ ಎಂದು ಅರುಣಾ ನರೇಂದ್ರ ಪಾಟೀಲ ಹೇಳಿದರು.
    ಕವಿತೆ ಎನ್ನುವುದು ರಸಟ್ಟಿ, ವಜ್ರದ ಹಾಗೆ ಇರುತ್ತದೆ. ಓದುಗನಿಗೆ ಕಾವ್ಯದ ಮೂಲಕ ಭಾವಸಂಸ್ಕಾರ, ತಿಳಿವಳಿಕೆ, ಜ್ಞಾನ, ಓದಿನ ಹಿನ್ನೆಲೆ, ಸಂಸತಿ, ಸಹೃದಯತೆಗಳನ್ನು ಉಣಬಡಿಸಬೇಕು. ಒಳ್ಳೆಯ ವಸ್ತು, ಭಾವ, ಬಾಷೆ, ಶೈಲಿ, ರೂಪ ವಿನ್ಯಾಸಗಳನ್ನು ತಿಳಿಸಿಕೊಡಬೇಕು ಎಂದರು.
    ಅಧ್ಯತೆ ವಹಿಸಿ ಮಾತನಾಡಿದ ವಿವೇಕಾನಂದಗೌಡ ಪಾಟೀಲ, ಪ್ರಕೃತಿಯಲ್ಲಿ ಮಣ್ಣು ಮತ್ತು ಸೂರ್ಯ ಮನುಷ್ಯನ ಎಲ್ಲ ಕಾರ್ಯಗಳಿಗೂ ಮೂಲ. ಭೂಮಿಯ ವಸತಿಗೆ ಮೂಲ ಕಾರಣಕತೃ ಸೂರ್ಯನಾಗಿದ್ದಾನೆ. ತನ್ನ ಪಥವನ್ನು ಬದಲಿಸುವ ಸಂಕ್ರಮಣ ಕಾಲದಲ್ಲಿ ಮನುಷ್ಯ ಕೂಡಾ ತನ್ನ ಆಲೋಚನೆಗಳ ಮೂಲಕ, ಕಾರ್ಯಗಳ ಮೂಲಕ, ಗುಣಗಳ ಮೂಲಕ ಸಕಾರಾತ್ಮವಾಗಿ, ಜನಪರವಾಗಬೇಕು, ಜೀವಪರವಾಗಬೇಕು ಎಂದರು.
    ಕಾರ್ಯಕ್ರಮದಲ್ಲಿ ಅರುಣಾ ನರೇಂದ್ರ ಅವರನ್ನು ಸನ್ಮಾನಿಸಲಾಯಿತು.
    ಕವಿಗೋಷ್ಠಿಯಲ್ಲಿ ಶಿಲ್ಪಾ ಕುರಿ, ಡಾ. ರಾಜೇಂದ್ರ ಗಡಾದ, ಪದ್ಮಾ ಕಬಾಡಿ, ಈಶ್ವರ ಕುರಿ, ಬಿ. ಬಿ. ಹತಿರ್, ರಮಾ ಚಿಗಟೇರಿ, ಅಮೋವರ್ಷ ಎ., ಮಂಜುಳಾ ವೆಂಕಟೇಶಯ್ಯ, ಚಂದ್ರಕಲಾ ಇಟಗಿಮಠ, ನೀಲಮ್ಮ ಅಂಗಡಿ ಅವರು ಸಂಕ್ರಾಂತಿ ಕವನ ವಾಚನ ಮಾಡಿದರು.
    ಎಂ. ಎಚ್​. ಹುಲ್ಲೂರ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಶ್ರೀಕಾಂತ ಬಡ್ಡೂರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts