More

    ಜಿಲ್ಲಾ ಕಸಾಪ ಗದಗ : ಆದರ್ಶ ಮುತ್ತುಗಳು ಪುಸ್ತಕ ಲೋಕಾರ್ಪಣೆ

    ಗದಗ: ಅಪ್ಪನ ಅಪ್ಪಟ ಪಡಿನೆರಳು ಬಹುಮುಖ ಪ್ರತಿಭೆಯ ಲೇಖಕಿ ಪದ್ಮಾ ಜೆ ಕಬಾಡಿಯವರು ಅತ್ಯಲ್ಪ ಸಮಯದಲ್ಲಿಯೇ ಸಾಧನೆಯ ಹಾದಿಯಲ್ಲಿ ಕ್ರಮಿಸುತ್ತಿರುವ ಪ್ರತಿಭೆ. ಈ ನೆಲದ ಗುಣವೂ ಇದಕ್ಕೆ ಸಹಕಾರಿಯಾಗಿದೆ ಕವಿಯಿತ್ರಿ ಪದ್ಮಾರವರು ಕವಿತೆ ರಚನೆ ಗಾಯನ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಮೊದಲ ನನ್ನೊಲವೆ ಕವನ ಸಂಕಲನ ಹೊರತಂದಿದ್ದಾರೆ ಈಗ ಎರಡನೆಯ ಕೃತಿ ಆದರ್ಶ ಮುತ್ತುಗಳು ಕೃತಿಯಲ್ಲಿ ವ್ಯಕ್ತಿಗಳ ಚಿತ್ರಣವನ್ನು ಸಂಗ್ರಹಿಸಿ ಓದುಗರಿಗೆ ನೀಡಿದ್ದಾರೆ. ರೆಂದು ಕೆ.ಎಲ್.ಈ. ವಾಣಿಜ್ಯ ಮಹಾವಿದ್ಯಾಲಯ ಗದಗನ ಉಪನ್ಯಾಸಕಿ ಡಾ.ವೀಣಾ ನುಡಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ದಿಂದ ದಿನಾಂಕ ೨೦ ರಂದು ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ ಕ.ಸಾ.ಪ ಕಾರ್ಯಾಲಯದಲ್ಲಿ ಕವಿಯಿತ್ರಿ ಪದ್ಮಾ ಜೆ ಕಬಾಡಿ ಬರೆದಿರುವ ವ್ಯಕ್ತಿಚಿತ್ರಗಳ ಸಂಕಲನ ಆದರ್ಶ ಮುತ್ತುಗಳು ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿಯ ಕುರಿತು ಪರಿಚಯಿಸುತ್ತ ಮುಂದುವರೆದು ಮಾತನಾಡಿ ಆರೂಢ ಪರಂಪರೆಯ ಹುಬ್ಬಳ್ಳಿ ಸಿದ್ಧಾರೂಢರು, ಇಸ್ರೋ ವಿಜ್ಞಾನಿ ಪದ್ಮಾವತಿ ರಾಯಬಾಗಿ ಕಡೇಮನಿ ಕುಟುಂಬದ ಸಮಾಜ ಸೇವೆ ಈ ಕೃತಿಯಲ್ಲಿ ಅಕ್ಷರ ರೂಪ ತಾಳಿದೆಯೆಂದರು.
    ಪುಸ್ತಕ ಲೋಕಾರ್ಪಣೆ ಮಾಡಿದ ಬೆಂಗಳೂರಿನ ಜನಸಿರಿ ಫೌಂಡೇಶನ್ ಮುಖ್ಯಸ್ಥ ನಾಗಲೇಖ ಮಾತನಾಡಿ ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಿದ್ದೇವೆ ಎನ್ನುವುದು ಮುಖ್ಯವಲ್ಲ ಎಷ್ಟು ಜನ ಸಹೃದಯವಂತರು ಸೇರಿದ್ದೇವೆ ಎನ್ನುವುದು ಮುಖ್ಯವಾಗುತ್ತದೆಯೆನ್ನುತ್ತ ಕನ್ನಡ ನಾಡು ನುಡಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾಗಿದೆ. ಇದರಲ್ಲಿ ಸಾಹಿತಿಗಳು ಮತ್ತು ಶಿಕ್ಷಕರ ಪಾತ್ರ ಅಪಾರವಾಗಿದೆ ಇಂದು ಧನ ಕನಕ ಇರುವವರು ಶ್ರೀಮಂತರೆAದು ಭಾವಿಸುವ ಕಾಲ ದೂರವಾಗಿದೆ. ಅಪ್ಪನ ಹೆಗಲು ಅಮ್ಮನ ಮಡಿಲು ಸ್ವರ್ಗಕ್ಕಿಂತ ಮಿಗಿಲಾದುವುಗಳಾಗಿವೆ. ಇವುಗಳನ್ನು ಶ್ರದ್ಧೆಯಿಂದ ಪೂಜಿಸುವ ಗೌರವಿಸುವ ಜೀವಗಳು ಕೋಟ್ಯಾಧಿಪತಿಗಳು ಹಾಗೆಯೇ ಒಂದೂ ಮಾತ್ರೆಯನ್ನು ಸೇವಿಸದೇ ಆರೋಗ್ಯದಿಂದ ಬದುಕುತ್ತಿರುವ ವ್ಯಕ್ತಿ ಕೋಟ್ಯಾಧಿಪತಿಗಿಂತಲೂ ಹೆಚ್ಚು ಶ್ರೀಮಂತರು ಎಂದು ಇಂದಿನ ವ್ಯವಸ್ಥೆಯ ಲೋಪಗಳಿಗೆ ಮಲಾಮು ಸವರುತ್ತ ಪ್ರೀತಿ ವಿಶ್ವಾಸದ ಕಡೆಗೆ ನಾವು ಬಾಂಧವ್ಯವನ್ನು ಬೆಸೆಯಬೇಕಾಗಿದೆಯೆಂದು ನಾಗಲೇಖ ನುಡಿದರು.
    ಅಧ್ಯಕ್ಷತೆ ವಹಿಸಿ ವಿವೇಕಾನಂದಗೌಡ ಪಾಟೀಲ ಮಾತನಾಡಿ ಪುಸ್ತಕದ ಕುರಿತು ಮಾತನಾಡುತ್ತ ಸಮಯವನ್ನು ಸದುಪಯೋಗ ಮಾಡಿಕೊಂಡು ಗೃಹಿಣಿ ಪದ್ಮಾ ಜೆ ಕಬಾಡಿಯವರು ಕವನ ವ್ಯಕ್ತಿ ಪರಿಚಯದ ಕೃತಿಯನ್ನು ರಚಿಸಿರುವುದು ಉತ್ಸಾಹಕ್ಕೆ ವಯಸ್ಸಿಯ ಮಿತಿ ನಿರ್ಭಂದವಲ್ಲ ಎನ್ನುವುದನ್ನು ರುಜುವಾತುಪಡಿಸಿದ್ದಾರೆ. ಮನೆಯಲ್ಲಿ ಇವರ ಹಂಬಲಕ್ಕೆ ಇವರ ಪತಿ ಜನಾರ್ಧನಸಾ ಬೆಂಬಲಿಸಿದ್ದಾರೆ. ಸಾಹಿತ್ಯ ಪರಿಷತ್ತು ಕೂಡಾ ಉದಯೋನ್ಮುಖ ಬರಹಗಾರರಿಗೆ ವೇದಿಕೆಯನ್ನು ಒದಗಿಸಿಕೊಡುತ್ತದೆಯೆಂದರು.
    ಲೇಖಕಿ ಪದ್ಮಾ ಜೆ ಕಬಾಡಿ ಮಾತನಾಡಿ ತಮ್ಮ ಕೃತಿಯಲ್ಲಿ ವ್ಯಕ್ತಿಚಿತ್ರಗಳು ಹಾಗೂ ಸ್ವರಚಿತ ಕವನಗಳನ್ನು ಸಂಗ್ರಹಿಸಿ ಮುದ್ರಿಸಲು ಅವಕಾಶವಾಗಿದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಕೃತಿಯ ಬಿಡುಗಡೆಗೆ ವೇದಿಕೆ ಒದಗಿಸಿ ಸಾಧನೆಯ ಹೆಜ್ಜೆಗಳನ್ನಿರಿಸುತ್ತಿರುವ ಕವಿಯಿತ್ರಿಯರಿಗೆ ಪ್ರೋತ್ಸಾಹಿಸಿದೆ. ಅದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
    ವೇದಿಕೆ ಮೇಲೆ ವಿವೇಕಾನಂದಗೌಡ ಪಾಟೀ¯ ನಾಗಲೇಖ ಡಾ. ವೀಣಾ ಕಿಶೋರಬಾಬು ನಾಗರಕಟ್ಟಿ ಶ್ರೀಮತಿ ಪದ್ಮಾ ಜೆ ಕಬಾಡಿ ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಜಯದೇವ ಮೆಣಸಗಿ ಪ್ರೊ.ಅನ್ನದಾನಿ ಹಿರೇಮಠ ಆರ್ ಡಿ ಕಪ್ಪಲಿ ಡಾ. ಬಿ ಬಿ ಹೊಳಗುಂದಿ ಬಿ ಎಸ್ ಹಿಂಡಿ ಮಂಜುನಾಥ ಹಿಂಡಿ ಬಸವರಾಜ ಗಣಪ್ಪನವರ ಡಾ.ಬಿ.ಎಲ್.ಚವ್ಹಾಣ ಜೆ ಎ ಪಾಟೀಲ ಶಿವಾನಂದ ಭಜಂತ್ರಿ ಅಶೋಕ ಭಜಂತ್ರಿ ದುಶ್ಯಂತಸಾ ಕಬಾಡಿ ವೀರೇಶ ಪೂರ್ವಾ ಎಸ್ ಎಚ್ ಸಂಜೀವಸ್ವಾಮಿ ಪ್ರ ತೋ ನಾರಾಯಣಪುರ ಶಶಿಕಾಂತ ಕೊರ್ಲಹಳ್ಳಿ ರತ್ನಾ ಬದಿ ಭಾಗ್ಯಶ್ರೀ ಹುರಕಡ್ಲಿ ರತ್ನಾ ಪುರಂತರ ಅಖಿಲಾಬಾಯಿ ಬಾಕಳೆ ಮಾಜಿ ನಗರಸಭಾ ಸದಸ್ಯೆ ಲಕ್ಷಿö್ಮದೇವಿ ಕಟ್ಟಿಮನಿ ಸುಧಾ ಬಳ್ಳಿ ಸುಮಿತ್ರಾ ಕಬಾಡಿ ವಿದ್ಯಾ ಕಬಾಡಿ ಡಿ ಎಲ್ ಕಬಾಡಿ ಶೈಲಜಾ ಗಿಡ್ನಂದಿ ರಕ್ಷಿತಾ ಗಿಡ್ನಂದಿ ಶಾರದಾ ಬೂಸನೂರಮಠ ಅನಸೂಯಾ ದೀಪಾಲಿ ಶಾರಕ್ಕ ಬಡಿಗಣ್ಣವರ ಶ್ರೀಮತಿ ನೀಲಮ್ಮ ಅಂಗಡಿ ನೈನಾ ಎ ಕಬಾಡಿ ಲಲಿತಾ ಖಟವಟೆ ರೇಖಾ ಖಟವಟೆ ಅಕ್ಕಮ್ಮ ಪಾರ್ವತಿಮಠ ಹಾಜರಿದ್ದರು.
    ಪ್ರಾರಂಭದಲ್ಲಿ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸರ್ವರನ್ನು ಸ್ವಾಗತಿಸಿದರು. ಪೊ ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts