More

    ಶ್ರೀಕೃಷ್ಣನ ಸಂದೇಶ ವಿಶ್ವಕ್ಕೆ ಸಾರಬೇಕು

    ಬಾಳೆಹೊನ್ನೂರು: ಮಂಗಳೂರು ಇಸ್ಕಾನ್ ಶಾಖೆಯ ಶ್ರೀಕೃಷ್ಣ ಬಲರಾಮಮಂದಿರ ಅಧ್ಯಕ್ಷ ಶ್ರೀಕಾರುಣ್ಯ ಸಾಗರ್ ದಾಸ್, ಮಂಗಳೂರು ಇಸ್ಕಾನ್​ನ ಅಕ್ಷಯ ಪಾತ್ರೆ ಅಧ್ಯಕ್ಷ ರಾಧಾವಲ್ಲಭ ದಾಸ್ ಶನಿವಾರ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು.

    ಇಸ್ಕಾನ್ ಪರವಾಗಿ ರಂಭಾಪುರಿ ಜಗದ್ಗುರುಗಳನ್ನು ಗೌರವಿಸಿ ಜಗದ್ಗುರುಗಳಿಗೆ ಶ್ರೀಕೃಷ್ಣನ ಸಂದೇಶವುಳ್ಳ ವಿವಿಧ ಗ್ರಂಥಗಳನ್ನು, ಶ್ರೀಕೃಷ್ಣನ ಪ್ರಸಾದವನ್ನು ಅರ್ಪಿಸಿದರು. ಇಸ್ಕಾನ್ ನಡೆದು ಬಂದ ಹಾದಿ, ವಿವಿಧ ಸಮಾಜಮುಖಿ ಕಾರ್ಯಗಳನ್ನು ಜಗದ್ಗುರುಗಳಿಗೆ ವಿವರಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಂಗಳೂರು ಇಸ್ಕಾನ್ ಶಾಖೆಯ ಶ್ರೀಕೃಷ್ಣ ಬಲರಾಮಮಂದಿರ ಅಧ್ಯಕ್ಷ ಶ್ರೀಕಾರುಣ್ಯ ಸಾಗರ್​ದಾಸ್ ಮಾತನಾಡಿ, ಇಸ್ಕಾನ್ ಇಡೀ ವಿಶ್ವಕ್ಕೆ ಶ್ರೀಕೃಷ್ಣನ ಸಂದೇಶ ಹರಡಬೇಕು ಎಂಬ ಇಸ್ಕಾನ್ ಸಂಸ್ಥಾಪಕ ಸ್ವಾಮಿ ಪ್ರಭು ಪಾದಾಚಾರ್ಯರು ಆಶಯದಂತೆ ಕಾರ್ಯನಿರ್ವಹಿಸುತ್ತಿದೆ.

    ಕೃಷ್ಣನ ಭಗವತ್ ಪ್ರಸಾದವನ್ನು ಪ್ರತಿಯೊಬ್ಬರಿಗೂ ಹಂಚಬೇಕು ಹಾಗೂ ಕೃಷ್ಣನ ಪೂಜೆ ಎಲ್ಲೆಡೆ ಸದಾ ಕಾಲ ನಡೆಯಬೇಕು. ಆಗ ಜಗತ್ತಿನ ಎಲ್ಲ ತೊಂದರೆಗಳು ದೂರಾಗಲಿವೆ. ಶ್ರೀಕೃಷ್ಣನ ನಾಮ ಸಂಕೀರ್ತನೆಯನ್ನು ಎಲ್ಲ ಹಳ್ಳಿಗಳಲ್ಲಿ ಆರಂಭಿಸಿ ಜಾತಿ, ಕುಲ, ಧರ್ಮ ಬೇಧವಿಲ್ಲದೆ ಭಗವಂತನ ಹಾಗೂ ಭಗವದ್ಗೀತೆ ಸಂದೇಶ ನೀಡಬೇಕು. ಈ ನಿಟ್ಟಿನಲ್ಲಿ ಇಸ್ಕಾನ್ ಜಾತಿ, ಮತ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುತ್ತಿದೆ ಎಂದರು.

    ಪ್ರಭು ಪಾದಾಚಾರ್ಯರು 10 ವರ್ಷದಲ್ಲಿ ವಿದೇಶದಲ್ಲಿ 108 ಶ್ರೀಕೃಷ್ಣನ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಜನರಲ್ಲಿ ಆಧ್ಯಾತ್ಮದ ಅರಿವು ನೀಡಿದ್ದಾರೆ. 10 ಸಾವಿರ ಪಾಶ್ಚಾತ್ಯರಿಗೆ ಶ್ರೀಕೃಷ್ಣನ ದೀಕ್ಷೆ ನೀಡಿ ಕೃಷ್ಣಮಂತ್ರ ಹೇಳಿಸಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts