More

    ಕಾರ್ತೀಕ ಕೊನೆಯ ಸೋಮವಾರ ದೇವಾಲಯಗಳಲ್ಲಿ ದೀಪೋತ್ಸವ

    ಬೆಂಗಳೂರು: ಕಾರ್ತೀಕ ಮಾಸದ ಕಡೇ ಸೋಮವಾರದ ಹಿನ್ನೆಲೆಯಲ್ಲಿ ಶಿವನ ದೇವಾಲಯಗಳು ಸೇರಿದಂತೆ ನಗರದ ಹಲವು ದೇವಾಲಯಗಳಲ್ಲಿ ಅಭಿಷೇಕ, ಪೂಜೆ, ಅಲಂಕಾರ, ರಥೋತ್ಸವಗಳು ನಡೆದವು. ಸಂಜೆ ದೇವಾಲಯಗಳಲ್ಲಿ ನಡೆದ ಕಾರ್ತಿಕ ದೀಪ್ರೋತ್ಸವ ವಿಶೇಷ ಕಳೆಕಟ್ಟಿತ್ತು.

    ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ, ಬನಶಂಕರಿ 2ನೇ ಹಂತದಲ್ಲಿರುವ ದೇವಗಿರಿ ವೆಂಕಟೇಶ್ವರ ಸ್ವಾಮಿ ದೇವಾಲಯ, ಚಿಕ್ಕಪೇಟೆಯ ಶ್ರೀ ಕಾಶ್ವಿವಿಶ್ವನಾಥ ದೇವಾಲಯ, ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನಸ್ವಾಮಿ ದೇವಾಲಯ ಹಾಗೂ ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ, ಗವಿಗಂಗಾಧರೇಶ್ವರ ದೇವಾಲಯ, ಬನಶಂಕರಿ ದೇವಾಲಯದ ಶ್ರೀ ಮಲ್ಲಿಕಾರ್ಜುನಸ್ವಾಮಿ, ಹಲಸೂರಿನ ಸೋಮೇಶ್ವರ ದೇವಾಲಯ, ಸಂಪಂಗಿರಾಮನಗರದ ಕಲ್ಯಾಣಿ ಸೇರಿದಂತೆ ನಗರದ ಹಲವೆಡೆ ಕಾರ್ತೀಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

    ಎಂದಿನಂತೆ ಬೆಳಗ್ಗೆ ದೇವಾಲಯಗಳಲ್ಲಿ ಅಭಿಷೇಕ, ಪೂಜೆ ಹಾಗೂ ಅಲಂಕಾರಗಳು ನಡೆದವು. ಭಕ್ತರು ಬೆಳಗಿನ ಜಾವದಿಂದಲೇ ದೇವರ ದರ್ಶನ ಪಡೆದು ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಿದ್ದರು. ಸಂಜೆ ದೇವಾಲಯದ ಆವರಣದಲ್ಲಿ ಭಕ್ತರು ಸಾಲು ಸಾಲು ದೀಪಗಳನ್ನು ಬೆಳಗಿಸಿ ಪ್ರಾರ್ಥಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts