More

    10ರಿಂದ ಕಾರಟಗಿಯಿಂದ ರೈಲು ಸಂಚಾರ; ಮೂರು ಟ್ರೇನ್‌ಗಳ ಓಡಾಟ ಹುಬ್ಬಳ್ಳಿ, ಬೆಂಗಳೂರಿಗೆ ನೇರ ಸಂಪರ್ಕ



    ಕಾರಟಗಿ: ಗಿಣಿಗೇರಾ-ಮಹೆಬೂಬ್ ನಗರ ರೈಲ್ವೆ ಮಾರ್ಗದ ಕಾಮಗಾರಿ ಕಾರಟಗಿವರೆಗೆ ಪೂರ್ಣಗೊಂಡಿದ್ದು, ನ.10ರಿಂದ ಕಾರಟಗಿಯಿಂದ ರೈಲು ಸಂಚಾರ ಆರಂಭವಾಗಲಿದೆ.

    ಗಂಗಾವತಿಯಿಂದ ಕಾರಟಗಿವರೆಗೆ ರೈಲು ಸಂಚಾರ ವಿಸ್ತರಿಸಿ ನ.6ರಂದು ಇಲಾಖೆ ಆದೇಶ ಹೊರಡಿಸಿದೆ. ರೈಲು ಸಂಖ್ಯೆ 07303/04 ಕಾರಟಗಿ-ಹುಬ್ಬಳ್ಳಿ ಎಕ್ಸ್‌ಪ್ರೆಸ್, 07381/02 ಕಾರಟಗಿ-ಹುಬ್ಬಳ್ಳಿ ಪ್ಯಾಸೆಂಜರ್, 06207/08 ಕಾರಟಗಿ-ಯಶವಂತಪುರ ರೈಲುಗಳು ಸಂಚರಿಸಲಿವೆ. ರೈತರು, ವ್ಯಾಪಾರಿಗಳು, ಕಾರ್ಮಿಕರು ಕಡಿಮೆ ದರದಲ್ಲಿ ಹುಬ್ಬಳ್ಳಿ, ಬೆಂಗಳೂರಿಗೆ ಹೋಗಲು ಅನುಕೂಲವಾಗಲಿದೆ. ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಕೊನೆಗೂ ಪೂರ್ಣಗೊಂಡು ಸಂಚಾರಕ್ಕೆ ಮೂಹೂರ್ತ ನಿಗದಿಯಾಗಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

    10ರಿಂದ ಕಾರಟಗಿಯಿಂದ ರೈಲು ಸಂಚಾರ; ಮೂರು ಟ್ರೇನ್‌ಗಳ ಓಡಾಟ ಹುಬ್ಬಳ್ಳಿ, ಬೆಂಗಳೂರಿಗೆ ನೇರ ಸಂಪರ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts