More

    ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಇಫ್ತಿಕರ್, ವಿಷ್ಣುವರ್ಧನ್ ಶುಭಾರಂಭ

    ನವದೆಹಲಿ: ಕರ್ನಾಟಕದ ಶೇಖ್ ಎಂ.ಡಿ. ಇಫ್ತಿಕರ್, ಒಲಿಂಪಿಯನ್ ಜೆ.ವಿಷ್ಣು ವರ್ಧನ್, ಹಾಲಿ ಚಾಂಪಿಯನ್ ವೈದೇಹಿ ಚೌಧರಿ 28ನೇ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್-2023ರಲ್ಲಿ ಶುಭಾರಂಭ ಕಂಡಿದ್ದಾರೆ.
    ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಶೇಖ್ ಎಂ.ಡಿ. ಇಫ್ತಿಕರ್, ತಮಿಳುನಾಡಿನ ಧೀರಜ್ ಶ್ರೀನಿವಾಸನ್ ಅವರನ್ನು 6-3, 7-5 ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.
    18 ವಯೋಮಿತಿಯ ಬಾಲಕರ ವಿಭಾಗದಲ್ಲಿ ಕರ್ನಾಟಕದ ಅಗ್ರ ಶ್ರೇಯಾಂಕದ ಚಂದನ್ ಶಿವರಾಜ್, ದೆಹಲಿಯ ವೇದನ್ ಮೆಹ್ತಾರನ್ನು 6-1, 6-1 ಸೆಟ್‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟರು.
    ಎಂಟನೇ ಶ್ರೇಯಾಂಕಿತ ಹಾಗೂ ಎರಡು ಬಾರಿ ಚಾಂಪಿಯನ್ ತೆಲಂಗಾಣದ ವಿಷ್ಣು ವರ್ಧನ್ ಪುರುಷರ ಸಿಂಗಲ್ಸ್ನಲ್ಲಿ ಕರ್ನಾಟಕದ ಆದಿಲ್ ಕಲ್ಯಾಣಪುರ ವಿರುದ್ಧ 7-6, 3-6, 7-5 ರೋಚಕ ಗೆಲುವು ಸಾಧಿಸಿದರು. ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ತನ್ನ ಅನುಭವಯುತ ಆಟದಿಂದ ಮೇಲುಗೈ ಸಾಧಿಸಿದರು.
    ಮಹಿಳೆಯರ ಸಿಂಗಲ್ಸ್ನಲ್ಲಿ ಅಗ್ರ ಶ್ರೇಯಾಂಕದ ವೈದೇಹಿ 6-2, 6-0 ನೇರ ಸೆಟ್‌ಗಳಿಂದ ಸೈಲಿ ಥಕ್ಕರ್ ಮಣಿಸಿದರು.

    ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ಮತ್ತು ದೆಹಲಿ ಲಾನ್ ಟೆನಿಸ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಆಯೋಜಿಸಿರುವ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ರೋಹನ್ ಬೋಪಣ್ಣ, ಸೋಮದೇವ್ ದೇವ್‌ವರ್ಮನ್, ಯೂಕಿಯಂತಹ ಖ್ಯಾತ ಭಾರತೀಯ ಟೆನಿಸ್ ಆಟಗಾರರು ಭಾಗವಹಿಸಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ಯೂಕಿ ಭಾಂಬ್ರಿ, ಸಾನಿಯಾ ಮಿರ್ಜಾ ಮತ್ತು ರುತುಜಾ ಭೋಸಲೆ ಕಣಕ್ಕಿಳಿದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts