More

    ಖಾಸಗಿ ಶಾಲಾ ಶಿಕ್ಷಕರೇ ನಿಮ್ಮ ವಿದ್ಯಾರ್ಹತೆ ಏನು? ಮಾಹಿತಿ ಕೇಳಿದ ಶಿಕ್ಷಣ ಇಲಾಖೆ

    ಬೆಂಗಳೂರು: ರಾಜ್ಯದ ಎಲ್ಲ ಖಾಸಗಿ ಶಾಲಾ ಶಿಕ್ಷಕರ ಮಾಹಿತಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ (ಡಿಡಿಪಿಐ) ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಸೂಚನೆ ನೀಡಿದ್ದಾರೆ.

    ಶಾಸಕ ಬಿ. ಸುರೇಶ್‌ಗೌಡ ಅವರು ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ಕೇಳಿರುವ ಹಿನ್ನೆಲೆಯಲ್ಲಿ, ಖಾಸಗಿ ಶಾಲಾ ಶಿಕ್ಷಕರ ಹೆಸರು, ರಾಷ್ಟ್ರೀಯ ಗುರುತು (ಭಾರತೀಯ/ಅನ್ಯ ಭಾರತೀಯ) ಮತ್ತು ವಿದ್ಯಾರ್ಹತೆ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ. ಒಂದು ವಾರದೊಳಗೆ ಎಲ್ಲ ಡಿಡಿಪಿಐ ಗಳೂ ಮಾಹಿತಿಯನ್ನು ದೃಢೀಕರಿಸಿ ಆಯುಕ್ತರಿಗೆ ಮೇಲ್ ಮೂಲಕ ಕಳುಹಿಸುವಂತೆ ಸೂಚಿಸಲಾಗಿದೆ.

    ಮಾಹಿತಿಯಲ್ಲಿ ಕ್ರಮ ಸಂಖ್ಯೆ, ಜಿಲ್ಲೆಯ ಹೆಸರು, ತಾಲ್ಲೂಕು, ಶಾಲೆ, ಯು-ಡೈಸ್ ಕೋಡ್, ಶಿಕ್ಷಕರ ಹೆಸರು, ರಾಷ್ಟ್ರೀಯ ಗುರುತು ಮತ್ತು ಶಿಕ್ಷಕರ ವಿದ್ಯಾರ್ಹತೆ ಮಾಹಿತಿಯನ್ನು ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts