More

    ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರವೇಶಾತಿ ದಿನಾಂಕ ವಿಸ್ತರಣೆ

    ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2020-21ನೇ ಸಾಲಿನ (ಜುಲೈ ಆವೃತ್ತಿ) ವಿವಿಧ ಸರ್ಟಿಫಿಕೇಟ್​ ಪ್ರೋಗ್ರಾಮ್​ಗಳಿಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

    ಸ್ನಾತಕ/ಸ್ನಾತಕೋತ್ತರ ಕೋರ್ಸ್​ಗಳಾದ ಬಿಎ, ಬಿಕಾಂ, ಬಿ.ಲಿಬ್​.ಐ.ಎಸ್ಸಿ, ಎಂಎ/ಎಂಕಾಂ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ಎಸ್ಸಿ, ಎಂಬಿಎ, ಪಿ.ಜಿ. ಡಿಪ್ಲೊಮಾ ಪ್ರೋಗ್ರಾಮ್ಸ್​, ಡಿಪ್ಲೊಮಾ ಪ್ರೋಗ್ರಾಮ್ಸ್ ಮತ್ತು ಸರ್ಟಿಫಿಕೇಟ್​ ಪ್ರೋಗ್ರಾಮ್ಸ್​ಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ. ದಂಡಶುಲ್ಕವಿಲ್ಲದೆ ಪ್ರಥಮ ವರ್ಷದ ಈ ಕೋರ್ಸ್​​ಗಳಿಗೆ ನ. 30ರವರೆಗೆ ಪ್ರವೇಶಾತಿ ವಿಸ್ತರಿಸಲಾಗಿದೆ.

    ಅರ್ಹ ವಿದ್ಯಾರ್ಥಿಗಳು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವೆಬ್​ಸೈಟ್​ www.ksoumysuru.ac.in ಮೂಲಕ ಪ್ರವೇಶಾತಿ ಅರ್ಜಿ ಭರ್ತಿ ಮಾಡಿ, ನಂತರ ಡೌನ್​ಲೋಡ್​ ಮಾಡಿಕೊಂಡು, ಬಳಿಕ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಪ್ರವೇಶಾತಿ ಪಡೆದರೆ ಸ್ಥಳದಲ್ಲೇ ಅಧ್ಯಯನ ಸಾಮಗ್ರಿಗಳನ್ನು ನೀಡಲಾಗುವುದು ಎಂದು ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಎಚ್.ಎನ್. ಗಿರೀಶ್ ತಿಳಿಸಿದ್ದಾರೆ.

    ಬಿಪಿಎಲ್ ಕಾರ್ಡ್​ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 25 ರಿಯಾಯಿತಿ ಲಭ್ಯವಿರುತ್ತದೆ. ಹಾಗೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ನೀಡಿದರೆ ಪ್ರವೇಶಾತಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 080-26603664 ಅಥವಾ 9448668880ಗೆ ಕರೆ ಮಾಡಬಹುದು. ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ, ನಂ.61, 5ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಚಾಮರಾಜಪೇಟೆ ಬೆಂಗಳೂರು – 18

    ಭೋಜಪುರಿಗೆ ಹರ್ಷಿಕಾ; ಲಂಡನ್​ನಲ್ಲಿ ಇಡೀ ಚಿತ್ರದ ಚಿತ್ರೀಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts