More

    ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ನಂ.1: ಸಚಿವ ನಿರಾಣಿ

    ಬೆಂಗಳೂರು: ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ತ್ರೈಮಾಸಿಕದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 62 ಸಾವಿರ ಕೋಟಿ ರೂ. ವಿದೇಶಿ ನೇರ ಬಂಡವಾಳ ಆಕರ್ಷಿಸಲಾಗಿದೆ. ಹೂಡಿಕೆದಾರರ ಸ್ನೇಹಿತ್ವದಲ್ಲಿ ಶೇ.80 ಇದ್ದೇವೆ. ಪೂರಕ ನೆರವಿನಲ್ಲಿ ಶೇ. 100 ಇದ್ದೇವೆ ಎಂದು ರಾಜ್ಯ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಹೇಳಿದ್ದಾರೆ.

    ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೈಗಾರಿಕಾ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಗುರಿಸಾಧನೆ ಮಾಡುತ್ತೇವೆ ಎಂದರು.

    ಇದನ್ನೂ ಓದಿ: VIDEO| ಪಿಎಚ್​ಡಿ, ಡಿಗ್ರಿಗಳಿಗೆ ಯಾವುದೇ ಮೌಲ್ಯವಿಲ್ಲ ಎಂದ ಶಿಕ್ಷಣ ಸಚಿವ!

    ಎಸ್ಸಿ, ಎಸ್ಟಿ ಸಮುದಾಯದವರಿಗೆ ಕೈಗಾರಿಕಾ ಯೋಜನೆಗಳು ಸಿಗಬೇಕು. ಅವರು ಕೂಡ ಸಮಾಜದಲ್ಲಿ ಮೇಲಕ್ಕೆ ಬರಬೇಕು. ಹಾಗಾಗಿ ಕೆಲವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ರಾಜ್ಯದಲ್ಲಿ ನಾಲ್ಕು ಕೈಗಾರಿಕಾ ಡಿವಿಷನ್ ಗಳಿವೆ. ಇದಕ್ಕೆ ಮತ್ತೆರಡು ಡಿವಿಷನ್ ವಿಂಗಡಣೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಕೈಗಾರಿಕಾ ಅದಾಲತ್ ಮಾಡಲು ಯೋಜಿಸಿದ್ದೇವೆ ಎಂದು ತಿಳಿಸಿದರು.

    ನವೆಂಬರ್​​ನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಇದಕ್ಕೆ ಸಿಎಂ ಜೊತೆ ಚರ್ಚಿಸಿ ದಿನಾಂಕ ಫಿಕ್ಸ್ ಮಾಡ್ತೇವೆ ಎಂದ ಸಚಿವ ನಿರಾಣಿ, ಅಕ್ಟೋಬರ್​ನಲ್ಲಿ ನಡೆಯಲಿರುವ ದುಬೈ ಫೆಸ್ಟಿವಲ್​ನಲ್ಲಿ ಸಹ ರಾಜ್ಯ ಕೈಗಾರಿಕಾ ಇಲಾಖೆ ಸ್ಟಾಲ್ ತೆಗೆಯುತ್ತಿದ್ದೇವೆ. ನಾನು ಮೂರು ದಿನ ದುಬೈ ಫೆಸ್ಟಿವಲ್​​ನಲ್ಲಿ‌ ಭಾಗವಹಿಸುತ್ತೇನೆ. ಹಿಂದಿನ ಸಮಾವೇಶಕ್ಕಿಂತ ಹೆಚ್ಚು ಬಂಡವಾಳ ಆಕರ್ಷಿಸುತ್ತೇವೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

    ಡ್ರಗ್ಸ್​ ಕೇಸಲ್ಲಿ ಅನುಶ್ರೀ ಹೆಸರು: ಪೊಲೀಸ್​ ಕಮಿಷನರ್​ ಹೇಳಿದ್ದೇನು?

    ಸ್ತ್ರೀಯರ ಗರ್ಭಾಶಯದ ಆರೋಗ್ಯಕ್ಕೆ ಪೂರಕ; ಪುರುಷರಿಗೂ ಉಪಯುಕ್ತ – ‘ವಿಸ್ತೃತ ಪಾದಾಸನ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts