More

    ರಾಜ್ಯದಲ್ಲಿ ಹುಕ್ಕಾ ನಿಷೇಧಿಸಿ ಸರ್ಕಾರ ಆದೇಶ

    ಬೆಂಗಳೂರು: ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಸಂಗ್ರಹಣೆ, ಜಾಹೀರಾತ, ಸೇವನೆಗೆ ಪ್ರಚೋದನೆ ಮತ್ತು ವ್ಯಾಪಾರವನ್ನು ನಿಷೇಧಿಸಲಾಗಿದ್ದು, ಸಂವಿಧಾನದ 47ನೇ ವಿಧಿ ಅನ್ವಯ ರಾಜ್ಯ ಸರ್ಕಾರಕ್ಕೆ ಲಭ್ಯವಿರುವ ಅಧಿಕಾರವನ್ನು ಬಳಸಿ ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಿದೆ.

    ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಹುಕ್ಕಾ, ತಂಬಾಕು ರಹಿತ ಮತ್ತು ನಿಕೋಟಿನ್ ರಹಿತ ಹುಕ್ಕಾ, ಸ್ವಾದಭರಿತ ಹುಕ್ಕಾ, ಮೊಲಾಸಿಸ್, ಶಿಶಾ ಹಾಗೂ ಇದೇ ಮಾದರಿಯ ಇನ್ನಿತರೆ ಅಂಶಗಳನ್ನು ಒಳಗೊಂಡಿರುವ ಹುಕ್ಕಾಗಳನ್ನು ನಿಷೇಧಿಸಲಾಗಿದೆ.

    ಈ ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಕೋಟ್ಪಾ) ಕಾಯ್ದೆ – 2003, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ – 2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ – 2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮ – 2015 ಮತ್ತು ಭಾರತೀಯ ದಂಡ ಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ವಿ. ಪದ್ಮ ಆದೇಶದಲ್ಲಿ ಸೂಚಿಸಿದ್ದಾರೆ.

    ಕೋಟ್ಪಾ ಕಾಯ್ದೆಯಡಿ ಹುಕ್ಕಾವನ್ನು ತಂಬಾಕು ಎಂದು ಪರಿಗಣಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಶಿಕ್ಷಣ ಸಂಸ್ಥೆಯಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಹುಕ್ಕಾ ಒಳಗೊಂಡಂತೆ ತಂಬಾಕು ವಸ್ತುಗಳ ಮಾರಾಟ ಮತ್ತು ಬಳಕೆ ನಿಷೇಧಿಸಲಾಗಿದೆ. ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ – 2015ರ ಅಡಿಯಲ್ಲಿ ನಿಕೋಟಿನ್ ಅನ್ನು ವಿಷ ಅಥವಾ ಅಪಾಯಕಾರಿ ರಾಸಾಯನಿಕ ಎಂದು ಪರಿಗಣಿಸಲಾಗಿದೆ ಎಂಬ ವಿವರಣೆ ಆದೇಶದಲ್ಲಿದೆ.

    ಹುಕ್ಕಾ ಸೇವನೆ ಆರೋಗ್ಯಕ್ಕೆ ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆಯು ಹುಕ್ಕಾವನ್ನು ವ್ಯಸನಕಾರಿ ಉತ್ಪನ್ನ ಎಂದು ೋಷಿಸಿದೆ. ಹುಕ್ಕಾ ಸೇವನೆಯು ಆರೋಗ್ಯಕ್ಕೆ ಅತ್ಯಂತ ಮಾರಕ, ಹುಕ್ಕಾ ಬಾರ್‌ಗಳು ಅಗ್ನಿ ಅನಾಹುಗಳಿಗೆ ಕಾರಣವಾಗುತ್ತಿದೆ. ಅಧ್ಯಯನಗಳ ಪ್ರಕಾರ 45 ನಿಮಿಷಗಳ ಹುಕ್ಕಾ ಸೇವನೆ 100 ಸಿಗರೇಟ್ ಸೇವನೆಗೆ ಸಮನಾಗಿದ್ದು, ಆರೋಗ್ಯಕ್ಕೆ ಮಾರಕವಾಗಿದೆ. ಮುಚ್ಚಿರುವ ಕೊಠಡಿಯಲ್ಲಿ ಹುಕ್ಕಾವನ್ನು ನಳಿಕೆ ಅಥವಾ ಪೈಪ್ ಸಲಕರಣೆ ಮೂಲಕ ಬಾಯಿಯಿಂದ ಸೇವನೆ ಮಾಡುವ ಉತ್ಪನ್ನವಾಗಿದೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳಾದ ಹರ್ಪಿಸ್, ಕ್ಷಯರೋಗ, ಹೆಪಟೈಟಿಸ್, ಕೋವಿಡ್ ಹಾಗೂ ಇತರೆ ಕಾಯಿಲೆಗಳು ಹರಡುವ ಆತಂಕವಿದೆ. ಈ ಎಲ್ಲ ಕಾರಣದಿಂದ ಹುಕ್ಕಾ ನಿಷೇಧಿಸಲಾಗಿದೆ ಎಂದು ಇಲಾಖೆ ಹೇಳಿದೆ.

    ರಾಜ್ಯದಲ್ಲಿ ತಂಬಾಕು ಬಳಕೆ:
    ವಿಶ್ವ ಆರೋಗ್ಯ ಸಂಸ್ಥೆಯು ನಡೆಸಿರುವ ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೆ 2016-17ರ ಅಧ್ಯಯನ ಪ್ರಕಾರ, ಕರ್ನಾಟಕದಲ್ಲಿ 22.8 ವಯಸ್ಕರು (15 ಮತ್ತು ಮೇಲ್ಪಟ್ಟವರು) ಒಂದಲ್ಲ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ ಶೇ. 8.8 ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ ಶೆ. 23.9 ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts