More

    ರಾಜ್ಯಾದ್ಯಂತ ಭುಗಿಲೆದ್ದ ಧ್ವಜ ದಂಗಲ್; ಹಸಿರು ಬಾವುಟ ತೆಗಿಸಲು ಎಲ್ಲೆಡೆ ಪಟ್ಟು

    ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣದ ಕಿಡಿ ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವಜಗಳನ್ನು ಹಾರಿಸಿರುವ ವಿಚಾರವಾಗಿ ರಾಜ್ಯದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.

    ಇದನ್ನೂ ಓದಿ:ದೇಶಕ್ಕಾಗಿ ಮತದಾನ ಮಾಡಿ

    ಕೆರಗೋಡು ಗ್ರಾಮದಲ್ಲಿ ಅಧಿಕಾರಿಗಳು ಬಂದು ಹನುಮನ ಧ್ವಜ ಕೆಳಗಿಳಿಸಿ, ಪೊಲೀಸರ ಭದ್ರತೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದರು. ಇದರ ವಿರುದ್ಧ ಬಿಜೆಪಿಯವರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದರ ನಡುವೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಟಿ ಚಾರ್ಜ್ ಕೂಡ ಮಾಡಿದ್ದರು.
    ಇಷ್ಟೆಲ್ಲಾ ಬೆಳವಣಿಗಳ ನಡುವೆ ರಾಜಧಾನಿ ಬೆಂಗಳೂರಿನ ಶಿವಾಜಿನಗರ ಬಾವುಟ ವಿಚಾರ ಮುನ್ನೆಲೆ ಬಂದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟದ ಫೋಟೋವನ್ನು ಬಿಜೆಪಿ ಹಿರಿಯ ಶಾಸಕ ಯತ್ನಾಳ್ ಹಂಚಿಕೊಂಡಿದ್ದರು.

    ರಾಜ್ಯಾದ್ಯಂತ ಭುಗಿಲೆದ್ದ ಧ್ವಜ ದಂಗಲ್; ಹಸಿರು ಬಾವುಟ ತೆಗಿಸಲು ಎಲ್ಲೆಡೆ ಪಟ್ಟು

    ಶಿವಾಜಿ ನಗರದ ಚಾಂದಿನಿ ಚೌಕ್ ನಲ್ಲಿ ಬಾವುಟ ಹಾರಾಟ ಮಾಡಲಾಗಿತ್ತು. ಈ ಕುರಿತ ಫೋಟೋವನ್ನು ರಾಮಚಂದ್ರ ಯರ್ಗಾಲ್ ಎಂಬವರು ಎಕ್ಸ್​ ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್​ಅನ್ನು ರೀ ಟ್ವೀಟ್ ಮಾಡಿದ್ದ ಯತ್ನಾಳ್ ಅವರು, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಬೆಂಗಳೂರು ಪೂರ್ವ ಡಿಸಿಪಿ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು. ಯತ್ನಾಳ್ ಅವರ ಟ್ವೀಟ್​ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಿವಾಜಿನಗರ ಪೊಲೀಸರು, ಹಸಿರು ಬಾವುಟ ತೆಗೆಸಿ ರಾಷ್ಟ್ರ ಧ್ವಜ ಭಾವುಟ ಹಾರಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ವಿಚಾರ ಸದ್ಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದೀಗ ಬೆಂಗಳೂರಿನ ಚಾವರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಜೆ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಸಿರು ಮತ್ತು ಹಳದಿ‌ ಬಣ್ಣದ ಧ್ವಜ ಹಾರಿಸಿರುವ ವಿಚಾರವಾಗಿ ಆಕ್ಷೇಪ ವ್ಯಕ್ತವಾಗಿದೆ.

    ರಾಜ್ಯಾದ್ಯಂತ ಭುಗಿಲೆದ್ದ ಧ್ವಜ ದಂಗಲ್; ಹಸಿರು ಬಾವುಟ ತೆಗಿಸಲು ಎಲ್ಲೆಡೆ ಪಟ್ಟು

    ಮಂಡ್ಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದ ಕೇಸ್ ಹಿನ್ನೆಲೆ ಇದೀಗ ಸಂಸದ ಪ್ರತಾಪ್​ ಸಿಂಹ ಕೂಡ ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್​ಗೆ ಟಾಂಗ್​ ನೀಡಿದ್ದಾರೆ. ಮೈಸೂರಿನ ಕೈಲಾಸಪುರಂನ ಪಾರ್ಕ್​​ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರಲ್ಲ, ಒಪ್ಪಿಗೆ ಪಡೆದಿದ್ದಾರಾ? ಸಿಎಂ ಸಿದ್ದರಾಮಯ್ಯ, ಪರಮೇಶ್ವರ್​ಗೆ? ಪ್ರಶ್ನೆ ಮಾಡಿದ್ದಾರೆ.

    ಅಧಿಕಾರಿಗಳ ವಿರುದ್ಧ ಸಂಸದ ಕಿಡಿ: ಮತ್ತೊಂದು ಪೋಸ್ಟ್​ ಮಾಡಿರುವ ಸಂಸದ ಸಿಂಹ ಅವರು, ಮೈಸೂರು ಜಿಲ್ಲಾಡಳಿತಕ್ಕೆ ಧನ್ಯವಾದಗಳು, ಆದ್ರೆ ಒಂದು ಬಾವುಟ ತೆಗೆದು ಪಕ್ಕದಲ್ಲೇ ಇನ್ನೊಂದನ್ನೇಕೆ ಬಿಟ್ಟಿದ್ದೀರಿ? ನಾನೇ ಸ್ಥಳಕ್ಕೆ ಬಂದು ತೋರಿಸಬೇಕಾ? ಕೈಲಾಸ್ ಪುರಂ, 4 ನೇ ಮುಖ್ಯರಸ್ತೆ, ಅಂಬೇಡ್ಕರ್ ಪಾರ್ಕ್, ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿ ಮತ್ತೊಂದು ಧ್ವಜವಿರುವುದು ಕಾಣುತ್ತಿಲ್ಲವೇ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿ ಧ್ವಜ ದಂಗಲ್ ಮುಂದುವರೆದಿದೆ. ಹಿಂದೂ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಧ್ವಜ ಕಟ್ಟೆ ಇದ್ದ ಸ್ಥಳದಲ್ಲೇ ಇದೀಗ ಕೇವಲ 20 ನಿಮಿಷದಲ್ಲಿ ಧ್ವಜ ಕಟ್ಟೆಯನ್ನು ಹಿಂದೂ ಕಾರ್ಯಕರ್ತರು ನಿರ್ಮಾಣ ಮಾಡಿದ್ದಾರೆ.

    ಕೇಸರಿಧ್ವಜ ಅಭಿಯಾನ: ಕೆರಗೋಡಿನಲ್ಲಿ ಹನುಮನ ಧ್ವಜ ತೆರವು ವಿವಾದ ಪ್ರಕರಣ ಹಿನ್ನೆಲೆ ಮಂಡ್ಯದಲ್ಲಿ ಹನುಮಧ್ವಜ ತೆರವು ವಿರೋಧಿಸಿ ಫೆ.2ರಿಂದ ಹನುಮಧ್ವಜ ಅಭಿಯಾನಕ್ಕೆ ಬಿಜೆಪಿ ನಿರ್ಧಾರ ಮಾಡಿದೆ. ಸ್ವಯಂಪ್ರೇರಿತರಾಗಿ ಕೆರಗೋಡಿನ ಗ್ರಾಮದ ಜನರು ಮನೆಗಳ ಮೇಲೆ ಕೇಸರಿಧ್ವಜ ಹಾರಿಸಿದ್ದಾರೆ. ಬಿಜೆಪಿ ಅಭಿಯಾನಕ್ಕೂ ಮೊದಲೇ ಕೇಸರಿಧ್ವಜ ಹಾರಿಸಲಾಗಿದೆ.

    ಮಂಡ್ಯ, ಶಿವಾಜಿನಗರ, ಮೈಸೂರು, ಭಟ್ಕಳ ಬಳಿಕ ಕೋಲಾರದಲ್ಲೂ ಧರ್ಮ ದಂಗಲ್ ಶುರುವಾಗಿದ್ದು ಈ ಕಿಡಿ ರಾಜ್ಯಕ್ಕೆ ವ್ಯಾಪಿಸಲಿದೆ ಎನ್ನಲಾಗಿದೆ.

    ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ ಕೋರ್ಟ್​ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts