More

    ಶುರುವಾಗಿದೆ ಉಪ ಚುನಾವಣೆ ಮತದಾನ: ಅಭ್ಯರ್ಥಿಗಳಲ್ಲಿ ಟೆನ್ಷನ್​

    ಬೆಂಗಳೂರು: ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಇಂದು ಬೆಳಗ್ಗೆ ಆರಂಭವಾಗಿದ್ದು, ಬಿಸಿಲನ್ನೂ ಲೆಕ್ಕಿಸದೆ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ. ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

    ಬೆಳಗಾವಿ ಲೋಕಸಭಾ ಉಪಚುನಾವಣಾ ಕ್ಷೇತ್ರ ಹೈವೋಲ್ಟೇಜ್​ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟಿದ್ದು, ಮೂರೂ ಪಕ್ಷಗಳು ಗೆಲುವಿನ ನಗೆ ಬೀರಲು ಕೊನೇ ಹಂತದ ಕಸರತ್ತು ನಡೆಸುತ್ತಿವೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ‌ ಮಂಗಳಾ ಅಂಗಡಿ ಅವರು ಬೆಳಗ್ಗೆ ವಿಶ್ವೇಶ್ವರಯ್ಯ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದರು. ಸ್ಫೂರ್ತಿ ಅಂಗಡಿ, ಶ್ರದ್ಧಾ ಅಂಗಡಿ ಇದ್ದರು.

    ಗೆಲುವು ನಮ್ಮದೇ ಆಗಲಿ ಎಂದು ಅಭ್ಯರ್ಥಿಗಳು ಕೊನೇ ಕ್ಷಣದಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇತ್ತ ರಾಮದುರ್ಗ ತಾಲೂಕಿನ ಹಿರೇತಡಸಿ, ಚಿಕ್ಕತಡಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಮೂಲಕ ಅಭ್ಯರ್ಥಿಗಳಲ್ಲಿ ಮತ್ತಷ್ಟು ಟೆನ್ಷನ್ ತಂದೊಡ್ಡಿದ್ದಾರೆ.

    ಪ್ರವಾಹಪೀಡಿತ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿರುವ ಮತದಾರರು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ ಖಂಡಿಸಿದ್ದಾರೆ. ಬೇಡಿಕೆ ಈಡೇರುವವರೆಗೆ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಚಿಕ್ಕತಡಸಿ ಹಾಗೂ ಹಿರೆತಡಸಿ ಗ್ರಾಮದಲ್ಲಿ ಸುಮಾರು 3 ಸಾವಿರ ಜನಸಂಖ್ಯೆ ಇದೆ. ಮತದಾನ ಮಾಡುವಂತೆ ಅಧಿಕಾರಿಗಳು ಮನವೊಲಿಸುತ್ತಿದ್ದ ದೃಶ್ಯ ಕಂಡುಬಂತು.

    ಇತ್ತ ಮಸ್ಕಿ ವಿಧಾನಸಭೆ ಉಪ ಚುನಾವಣೆ ಕಾರ್ಯಕ್ಕೆ ಬಂದ ಮಹಿಳಾ ಪೇದೆಗಳು ಮತ್ತು ಮತಗಟ್ಟೆ ಮಹಿಳಾ ಸಿಬ್ಬಂದಿಗಳು ಸ್ನಾನ, ಶೌಚಕ್ಕಾಗಿ ಪರದಾಡಿದರು. ಶಾಲೆಗಳಲ್ಲಿ ಬಾಗಿಲು ಇಲ್ಲದ ಸ್ನಾನಗೃಹ. ಸ್ವಚ್ಛತೆ ಇಲ್ಲದ ಶೌಚಗೃಹಗಳನ್ನ ಕಂಡು ಹೈರಾಣಾದರು. ಬಯಲುಸ್ಥಳದಲ್ಲೇ ಕೆಲ ಸಿಬ್ಬಂದಿ ಸ್ನಾನ ಮಾಡಿದರು. ಗ್ರಾಮಸ್ಥರ ಮನೆಗಳಿಗೆ ಹೋಗಿ ಮಹಿಳಾ ಸಿಬ್ಬಂದಿ ಸ್ನಾನ ಮಾಡಿದರು.

    ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

    ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

    ಅಪ್ರಾಪ್ತರ ಲವ್​ ಕೇಸ್​: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಿಂದ ಬಿತ್ತು ಬಾಲಕನ ಹೆಣ, ಊರಲ್ಲಿ ಪ್ರಕ್ಷುಬ್ಧ ವಾತಾವರಣ

    ಕಲ್ಲಿನಿಂದ ಹೊಡೆದು ಸಾರಿಗೆ ಬಸ್​ ಚಾಲಕನ ಪ್ರಾಣ ತೆಗೆದ ಕಿಡಿಗೇಡಿಗಳು! ಮುಷ್ಕರ ಬಿಟ್ಟು ಕೆಲಸಕ್ಕೆ ಬಂದಿದ್ದಕ್ಕೆ ಶಿಕ್ಷೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts