More

    ಗ್ಯಾರಂಟಿ ಯೋಜನೆ ಬಿಟ್ಟಿ ಯೋಜನೆಯಲ್ಲ: ಸಿಎಂ ತಿರುಗೇಟು

    ಬೆಂಗಳೂರು: 2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದಡಿ ಬಜೆಟ್ ಮಂಡನೆ ಆರಂಭಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಿ, ಸಾಮಾಜಿಕ ಸಮಾನತೆ, ಅಭಿವೃದ್ಧಿ ಆಧಾರದಡಿ ಬಜೆಟ್ ಮಂಡಿಸುತ್ತಿರುವೆ ಎಂದು ತಿಳಿಸಿದರು.


    ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು. ಆದರೆ ಕನಸುಗಳು ಇಲ್ಲದೆ ಹಾದಿಯಲ್ಲಿ ಹೇಗೆ ನಡೆಯಲಿ…..’ಎಂಬ ಗಿರೀಶ್ ಕಾರ್ನಾಡ್ ಅವರ ‘ಯಯಾತಿ’ ನಾಟಕದ ಸಾಲುಗಳನ್ನು ಸಹ ಈ ಸಂದರ್ಭದಲ್ಲಿ ಸಿಎಂ ಸ್ಮರಿಸಿದರು.


    “ಬಡವರು, ಶ್ರೀ ಸಾಮಾನ್ಯನ ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಯೋಜನೆಯೆಂದು ವಿರೋಧ ಪಕ್ಷದವರು ತಮಾಷೆ ಮಾಡಬಾರದು” ಎಂದು ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುವ ವಿಪಕ್ಷದ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

    ಇವು ಬಿಟ್ಟಿ ಭಾಗ್ಯಗಳು ಅಲ್ಲ. ಜನಸಾಮಾನ್ಯರ ಏಳಿಗೆಗೆ ನೀಡಿದ ಯೋಜನೆಗಳು. ಜನರ ಶಕ್ತಿ ಹೆಚ್ಚಿಸಲು ಗ್ಯಾರಂಟಿಗಳನ್ನು ನಾವು ಮೊದಲ ಸಂಪುಟದಲ್ಲೇ ಜಾರಿಗೆ ಅನುಮೋದನೆ ನೀಡಿದ್ದೇನೆ. ಏಕೆಂದರೆ ಜನರು ನಮಗೆ ಬಹುಮತ ನೀಡಿದ್ದಾರೆ ಎಂದು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಿಎಂ ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts