More

    ‘ಸ್ವಾತಂತ್ರ್ಯಕ್ಕಾಗಿ ಅಡ್ಜಸ್ಟ್​ಮೆಂಟ್ ಮಾಡಿಕೊಂಡವರು ಮಹಾತ್ಮರೆನಿಸಿಕೊಂಡರು’: ವಿವಾದಕ್ಕೀಡಾಯಿತು ಸಂಸದ ಅನಂತ್​ ಕುಮಾರ್​ ಹೆಗಡೆ ಹೇಳಿಕೆ

    ಬೆಂಗಳೂರು: ಬ್ರಿಟಿಷರ ಜತೆಗೆ ಅಡ್ಜಸ್ಟ್​ಮೆಂಟ್ ಮಾಡಿಕೊಂಡವರು ಮಹಾತ್ಮರೆನಿಸಿಕೊಂಡರು; ಉಪವಾಸ ಸತ್ಯಾಗ್ರಹದಿಂದಲೇ ಸ್ವಾತಂತ್ರ್ಯ ಪ್ರಾಪ್ತಿಯಾಯಿತು ಎಂದು ಬಿಂಬಿಸಲಾಯಿತು ಆದರೆ, ವಾಸ್ತವ ಅದಲ್ಲ ಎಂಬುದನ್ನು ವಿವರಿಸಿದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಈಗ ವಿವಾದಕ್ಕೀಡಾಗಿದೆ.

    ಬೆಂಗಳೂರಿನಲ್ಲಿ ಶನಿವಾರ ನಡೆದ ವಿನಾಯಕ ದಾಮೋದರ ಸಾವರ್ಕರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ಭಾಷಣದಲ್ಲಿ ವಿವಾದಕ್ಕೀಡಾದ ಭಾಗದ ಸಾರ ಹೀಗಿದೆ- “ಎರಡು ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಶಸ್ತ್ರದ ಮೇಲೆ ನಂಬಿಕೆ ಇರಿಸಿದವರು ಒಬ್ಬರಾದರೆ, ಇನ್ನೊಬ್ಬರು ಶಾಸ್ತ್ರ(ಬೌದ್ಧಿಕ ಪ್ರೇರಕರು) ದ ಮೇಲೆ ನಂಬಿಕೆ ಇರಿಸಿಕೊಂಡವರು. ಅಲ್ಲಿ ಇನ್ನೂ ಒಂದು ವರ್ಗದ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅವರು ಬ್ರಿಟಿಷರ ಬಳಿಯೇ ಸ್ವಾತಂತ್ರ್ಯ ಹೋರಾಟ ನಡೆಸುವುದು ಹೇಗೆ ಎಂದು ಕೇಳುತ್ತಿದ್ದರು. ಈ ವಿಚಾರದಲ್ಲಿ ನೀವು ಸರಳವಾಗಿ ಹೇಳುವ ಅಡ್ಜಸ್ಟ್​ಮೆಂಟ್​, ಹೊಂದಾಣಿಕೆ.. ಅದೇ 20-20 ಮಾದರಿಯಲ್ಲಿ.. ಆ ಮಾತನ್ನು ನಾವೂ ಬೆಂಬಲಿಸುತ್ತೇವೆ. ಅವರು ಬ್ರಿಟಿಷರಲ್ಲಿ ಬೇಡಿಕೊಂಡರು- ನೀವು ನಮ್ಮ ಬಗ್ಗೆ ಕಾಳಜಿ ತೋರಿದ್ದು ಸಾಕಷ್ಟಾಯಿತು. ಇದಕ್ಕೂ ಹೆಚ್ಚಿನದು ಬೇಡ ಎಂದು. ಇಂತಹ ಜನ ಮಹಾತ್ಮ ಎನಿಸಿಕೊಂಡರು.. ದೇಶದಲ್ಲಿ ಬಹುದೊಡ್ಡ ಬದಲಾವಣೆ ತರಲು ಜೀವ ಬಲಿದಾನ ಮಾಡಿದವರನ್ನು ಇತಿಹಾಸದ ಕತ್ತಲೆಗೆ ತಳ್ಳಲಾಯಿತು. ಆದರೆ, ಯಾರು ಬ್ರಿಟಿಷರ ಜತೆಗೆ ಅಡ್ಜಸ್ಟ್​ಮೆಂಟ್ ಮಾಡಿಕೊಂಡು ಹೋರಾಡಿದರೋ ಅವರು ಪ್ರಮಾಣಪತ್ರ ಸಹಿತ ಸ್ವಾತಂತ್ರ್ಯ ಹೋರಾಟಗಾರರಾದರು.. ಇದು ಈ ದೇಶದ ದುರಂತ… “

    ಸಂಸದ ಹೆಗಡೆಯವರ ಈ ಹೇಳಿಕೆ ಈಗ ರಾಷ್ಟ್ರಮಟ್ಟದಲ್ಲಿ ಸದ್ದುಮಾಡಿದ್ದು, ಹೆಗಡೆಯವರು ಮಹಾತ್ಮ ಗಾಂಧಿಯವರನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts