More

    ಮಯಾಂಕ್ ಬಳಗ ಅಜೇಯ ಓಟ: ಬಿಹಾರ ಎದುರು ದೇವದತ್ ಪಡಿಕಲ್ ಭರ್ಜರಿ ಬ್ಯಾಟಿಂಗ್

    ಅಹಮದಾಬಾದ್: ಎಡಗೈ ಬ್ಯಾಟರ್ ದೇವದತ್ ಪಡಿಕಲ್ (93* ರನ್, 57 ಎಸೆತ, 9 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ಎದುರು 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮಯಾಂಕ್ ಅಗರ್ವಾಲ್ ಬಳಗ ಗೆಲುವಿನ ಓಟವನ್ನು ಸತತ 4ನೇ ಪಂದ್ಯಕ್ಕೆ ವಿಸ್ತರಿಸಿದೆ.

    ನರೇಂದ್ರ ಮೋದಿ ಕ್ರೀಡಾಂಗಣದ ಬಿ ಗ್ರೌಂಡ್‌ನಲ್ಲಿ ನಡೆದ ಬುಧವಾರ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬಿಹಾರ, ಶಕಿಬುಲ್ ಗನಿ (113* ರನ್, 100 ಎಸೆತ, 9 ಬೌಂಡರಿ, 5 ಸಿಕ್ಸರ್) ಶತಕದ ನೆರವಿನಿಂದ 7 ವಿಕೆಟ್‌ಗೆ 217 ರನ್ ಕಲೆಹಾಕಿತು. ಪ್ರತಿಯಾಗಿ ಕರ್ನಾಟಕ, ದೇವದತ್ ಪಡಿಕಲ್ ಹಾಗೂ ನಿಕಿನ್ ಜೋಸ್ (69 ರನ್, 73 ಎಸೆತ, 7 ಬೌಂಡರಿ, 2 ಸಿಕ್ಸರ್) ಅವಳಿ ಅರ್ಧಶತಕಗಳ ಲವಾಗಿ 33.4 ಓವರ್‌ಗಳಲ್ಲಿ 3 ವಿಕೆಟ್‌ಗೆ 218 ರನ್‌ಗಳಿಸಿ ಸುಲಭ ಗೆಲುವು ಕಂಡಿತು.

    ಬಿಹಾರ: 7 ವಿಕೆಟ್‌ಗೆ 217 (ಶರ್ಮನ್ 21, ಬಬುಲ್ 17, ಶಕಿಬುಲ್ 113*, ಅಶುತೋಶ್ 33*, ಜೆ. ಸುಚಿತ್ 27ಕ್ಕೆ3, ಆರ್. ಸಮರ್ಥ್ 4ಕ್ಕೆ1). ಕರ್ನಾಟಕ: 33.4 ಓವರ್‌ಗಳಲ್ಲಿ 3 ವಿಕೆಟ್‌ಗೆ 228 (ಆರ್. ಸಮರ್ಥ್ 4, ಮಯಾಂಕ್ 28, ನಿಕಿನ್ ಜೋಸ್ 69, ಪಡಿಕಲ್ 93*, ಮನೀಷ್ 17*, ವೀರ್ ಪ್ರತಾಪ್ 31ಕ್ಕೆ1).

    ಕರ್ನಾಟಕಕ್ಕೆ ಮುಂದಿನ ಪಂದ್ಯ
    ಎದುರಾಳಿ: ಚಂಡೀಗಢ
    ಯಾವಾಗ: ಶುಕ್ರವಾರ
    ಆರಂಭ: ಬೆಳಗ್ಗೆ 9.00

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts