More

    ಭವಿಷ್ಯದ ಡಿಜಿಟಲ್​ನತ್ತ ಕರ್ಣಾಟಕ ಬ್ಯಾಂಕ್: ಮುಂದಿನ ಯೋಜನೆಗಳನ್ನು ತೆರೆದಿಟ್ಟ ಮಹಾಬಲೇಶ್ವರ

    ಭವಿಷ್ಯದ ಡಿಜಿಟಲ್​ನತ್ತ ಕರ್ಣಾಟಕ ಬ್ಯಾಂಕ್: ಮುಂದಿನ ಯೋಜನೆಗಳನ್ನು ತೆರೆದಿಟ್ಟ ಮಹಾಬಲೇಶ್ವರಮಂಗಳೂರು: ಬ್ಯಾಂಕ್​ಗಳ ತವರೂರು ಕರಾವಳಿಯಲ್ಲಿ ಜನ್ಮ ತಳೆದು ದೇಶಾದ್ಯಂತ ಪ್ರಬಲ ಬ್ಯಾಂಕರ್ ಆಗಿ ರೂಪುಗೊಂಡಿರುವ ಕರ್ಣಾಟಕ ಬ್ಯಾಂಕ್​ಗೆ ಇನ್ನು ಮೂರು ವರ್ಷಗಳಲ್ಲಿ 100ರ ಸಂಭ್ರಮ. 2024ರಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಬ್ಯಾಂಕ್ ಎರಡನೇ ಶತಮಾನದಲ್ಲಿ ‘ಭವಿಷ್ಯದ ಡಿಜಿಟಲ್ ಬ್ಯಾಂಕ್’ ಆಗಿ ರೂಪುಗೊಳ್ಳುವುದೂ ಸೇರಿ ಹತ್ತು ಹಲವು ಯೋಜನೆಗಳಿಗೆ ಮುನ್ನುಡಿ ಬರೆದಿದೆ. ಕೋವಿಡ್ ಕರಿನೆರಳಿನಲ್ಲೂ ಸತತ ಎರಡು ತ್ರೈಮಾಸಿಕಗಳಲ್ಲಿ ಅತ್ಯುತ್ತಮ ಪ್ರಗತಿಯೊಂದಿಗೆ ನಿವ್ವಳ ಲಾಭ ಏರಿಕೆಯ ದಾಖಲೆ ಹೊಂದಿರುವ ಬ್ಯಾಂಕ್​ನ ನೇತೃತ್ವ ವಹಿಸಿರುವ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ‘ವಿಜಯವಾಣಿ’ಯೊಂದಿಗೆ ಮುಂದಿನ ಯೋಜನೆಗಳನ್ನು ತೆರೆದಿಟ್ಟಿದ್ದಾರೆ.

    • ನೂರರ ಸಂಭ್ರಮಕ್ಕೆ ಯಾವ ಯೋಜನೆಗಳನ್ನು ಹಾಕಿಕೊಂಡಿದ್ದೀರಿ?
      ಕರ್ಣಾಟಕ ಬ್ಯಾಂಕ್ ಎರಡನೇ ಶತಮಾನಕ್ಕೆ ಕಾಲಿಡುವಾಗ ನಾವು ಶಾಖೆಗಳ ಸಂಖ್ಯೆ ಹೆಚ್ಚಳಕ್ಕಿಂತಲೂ ಡಿಜಿಟಲ್ ಬ್ಯಾಂಕಿಂಗ್ ಅಥವಾ ಫೇಸ್​ಲೆಸ್ ಬ್ಯಾಂಕಿಂಗ್​ಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಇತರ ಹೊಸ ಬ್ಯಾಂಕ್​ಗಳ ಪೈಪೋಟಿ ದೃಷ್ಟಿಯಿಂದಲೂ ಇದು ಸೂಕ್ತ. 7 ವರ್ಷಗಳ ಹಿಂದೆ ನಮ್ಮ ಒಟ್ಟು ವಹಿವಾಟಿನ ಶೇ.35 ಡಿಜಿಟಲ್ ಆಗಿದ್ದರೆ ಪ್ರಸ್ತುತ ಈ ಸಂಖ್ಯೆ ಶೇ.88ಕ್ಕೆ ಏರಿದೆ, ಮಾರ್ಚ್ ವೇಳೆಗೆ ಇದು ಶೇ.90 ತಲುಪಲಿದೆ. ಬಹುತೇಕ ವಹಿವಾಟು ಡಿಜಿಟಲ್ ರೂಪದಲ್ಲಿ ಆಗುತ್ತಿರುವ ಕಾರಣ ಜನರು ಬ್ಯಾಂಕಿಗೆ ಬರುವ ಅವಶ್ಯಕತೆ ತೀರಾ ಕಡಿಮೆ. 100 ವರ್ಷ ಪೂರ್ಣಗೊಳ್ಳುವ ಹೊತ್ತಿಗೆ ನಮ್ಮ ಬ್ಯಾಂಕ್ ‘ಡಿಜಿಟಲಿ ಎನೇಬಲ್ಡ್ ಬ್ಯಾಂಕ್’ ಆಗಿ ಗುರುತಿಸಲ್ಪಡಬೇಕು. ಜತೆಯಲ್ಲಿ ಹಲವಾರು ಸಾಮಾಜಿಕ ಬದ್ಧತೆಯ ಶಾಶ್ವತ ಸೌಲಭ್ಯಗಳಂತಹ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈಗಿರುವ ಪ್ರಧಾನ ಕಚೇರಿ ಕಟ್ಟಡ ನಮ್ಮ ಕಾರ್ಯ ನಿರ್ವಹಣೆಗೆ ಸಾಕಾಗುತ್ತಿಲ್ಲ, ಹಾಗಾಗಿ ‘ಶತಮಾನೋತ್ಸವ ಕಟ್ಟಡ’ವನ್ನೂ ನಿರ್ವಿುಸುವ ಯೋಜನೆ ಇದೆ.
    • ಕೋವಿಡ್ ಸಂದರ್ಭದಲ್ಲೂ ಸತತ ಲಾಭ ಹೇಗೆ ಸಾಧ್ಯವಾಯಿತು?
      ನಾವು ಕಳೆದ ಮಾರ್ಚ್​ನಲ್ಲೇ ಕುಳಿತು ರ್ಚಚಿಸಿದೆವು. ವ್ಯಾಪಾರ ವಿಸ್ತರಣೆ, ಹೊಸ ವಹಿವಾಟುಗಳು ಇಲ್ಲದ ಕಾರಣ ಸಾಲದ ಪ್ರಗತಿ ಆಗದು, ಹಾಗಾಗಿ ಆದಾಯ ಕಡಿಮೆ ಎನ್ನುವುದು ನಿರೀಕ್ಷೆ ಇತ್ತು. ಅದಕ್ಕಾಗಿ ನಮ್ಮ ವೆಚ್ಚದಲ್ಲಿ ನಿಯಂತ್ರಣ ತಂದೆವು, ಅದಕ್ಕೆ ಬ್ಯಾಂಕ್​ನ ಎಲ್ಲ ಸಹೋದ್ಯೋಗಿಗಳು, ಸಿಬ್ಬಂದಿ ಸಹಕಾರ ಕೊಟ್ಟರು. ಅನಗತ್ಯ ದೊಡ್ಡ ಶಾಖೆ ಬದಲು ಚಿಕ್ಕದು ಮಾಡುವುದು, ಬಾಡಿಗೆಯಲ್ಲಿ ಇಳಿಕೆ ಇತ್ಯಾದಿಗಳಿಂದ ಹಣ ಉಳಿತಾಯವಾಯಿತು. ಜತೆಯಲ್ಲಿ ನಮ್ಮ ಬ್ಯಾಂಕ್​ನ ಕಾಸಾ(ಚಾಲ್ತಿ, ಉಳಿತಾಯ ಖಾತೆ ) ಶೇ.30.07ಕ್ಕೆ ಏರಿಕೆಯಾಯಿತು. ಇದರ ಪರಿಣಾಮ ಲಾಭಾಂಶ ವೃದ್ಧಿಸಿತು.
    • ಬೇರೆ ಖಾಸಗಿ ಬ್ಯಾಂಕ್​ಗಳನ್ನು ತೆಕ್ಕೆಗೆ ತೆಗೆದುಕೊ್ಳವ ಯೋಜನೆ ಇದೆಯೇ?
      ಯಾವುದನ್ನೂ ತಳ್ಳಿ ಹಾಕá-ವಂತಿಲ್ಲ. ನಮ್ಮ ಕ್ಯಾಪಿಟಲ್ ಅಡಕ್ವೆಸಿ ರೇಶಿಯೋ(ಸಿಎಆರ್) ಚೆನ್ನಾಗಿ ಪ್ರಗತಿ ಹೊಂದುತ್ತಿದೆ. ಆರ್​ಬಿಐ ಸೂಚಿಸಿರುವ ಕನಿಷ್ಠ ಅನುಪಾತಕ್ಕಿಂತಲೂ ನಮ್ಮದು ಸರಾಸರಿ ಶೇ.3-4 ಹೆಚ್ಚೇ ಇದೆ. ಇದು ಸದ್ಯ ಶೇ.13.8 ಇದ್ದು, ಮಾರ್ಚ್​ಗೆ ಶೇ.14 ಮೀರಬಹುದು. ಹಾಗಾಗಿ ಬೇರೆ ಬ್ಯಾಂಕ್​ಗಳನ್ನು ಸ್ವಾಧೀನಪಡಿಸಿಕೊಳ್ಳುವ ಅವಕಾಶ ಇದೆ. ಸೂಕ್ತವಾದ ದರ ಹಾಗೂ ಹೊಂದಿಕೆಯಾಗುವ ವಾತಾವರಣ ನೋಡಿಕೊಂಡು, ನಮ್ಮ ಬ್ಯಾಂಕ್ ಜತೆಗೆ ಹೊಂದಾಣಿಕೆಯಾಗುವುದಿದ್ದರೆ ಮಾತ್ರ ಮುಂದಾಗುತ್ತೇವೆ. 1960ರಲ್ಲಿ ಆಗಿನ ಚೇರ್ಮನ್ ಸೂರ್ಯನಾರಾಯಣ ಅಡಿಗರ ನೇತೃತ್ವದಲ್ಲಿ ಚಿತ್ತಲ್​ದುರ್ಗ ಬ್ಯಾಂಕ್, ಬ್ಯಾಂಕ್ ಆಫ್ ಕರ್ನಾಟಕ ಮತ್ತು ಶೃಂಗೇರಿ ಶಾರದಾ ಬ್ಯಾಂಕ್​ಗಳು ನಮ್ಮ ಬ್ಯಾಂಕ್ ಜತೆ ವಿಲೀನ ಆಗಿದ್ದ ನಿದರ್ಶನ ನಮ್ಮಲ್ಲಿದೆ, ಹಾಗಾಗಿ ನಮಗೆ ಇದು ಹೊಸತೇನೂ ಅಲ್ಲ.
    • ಸದ್ಯ ಕೋವಿಡ್ ಪ್ರಭಾವ ಉದ್ಯಮ ರಂಗದಲ್ಲಿ ಹೇಗಿದೆ?
      ಅದೃಷ್ಟವಶಾತ್ ಪ್ರಭಾವ ಬೇಗನೆ ಕಡಿಮೆಯಾಗುತ್ತಿದೆ. ಈಗಾಗಲೇ ಹಲವು ರಂಗಗಳು ಸಾಮಾನ್ಯ ಸ್ಥಿತಿಗೆ ತಲುಪುತ್ತಿವೆ. ವ್ಯಾಪಾರ ವಹಿವಾಟು ವಿಸ್ತರಣೆ ಶುರುವಾಗಿದೆ, ಇದೇ ಕಾರಣಕ್ಕೆ ನಮಗೆ ಸಾಲದ ಬೇಡಿಕೆ ಹೆಚ್ಚುತ್ತಿದೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡಂತಹ ಅನೇಕ ನಿರ್ಧಾರಗಳು ಸಕಾಲಿಕವಾಗಿದ್ದವು, ಜನರಿಗೆ ನಿಜಕ್ಕೂ ಸಹಾಯವಾಗಿತ್ತು. ಏಪ್ರಿಲ್ ವೇಳೆಗೆ ಪೂರ್ಣ ನಾವು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.
    • ಬದಲಾಗುತ್ತಿರುವ ಆರ್​ಬಿಐ ನೀತಿಯಡಿ ಮುಂದೆ ಹೊಸ ಬ್ಯಾಂಕ್​ಗಳು ಬಂದರೆ ಪೈಪೋಟಿಗೆ ಸಿದ್ಧವೇ?
      ಬದಲಾವಣೆಗೆ ಹೊಂದಿಕೊಳ್ಳುವುದೇ ನಮ್ಮ ಸಾಮರ್ಥ್ಯ. ನಮ್ಮ ಅಂತಃಸತ್ವದಲ್ಲಿ ರಾಜಿ ಮಾಡಿಕೊಳ್ಳದೆ ಹೊಸತನಕ್ಕೆ ತೆರೆಯುತ್ತ ಹೋಗುವುದೇ ನಮ್ಮ ನಿಲುವು. ಹೊಸ ಬ್ಯಾಂಕ್​ಗಳಿಂದ ಸಮಸ್ಯೆಯಾಗದು, ಆರೋಗ್ಯಕರ ಸ್ಪರ್ಧೆ ಇದ್ದರೆ ಒಳ್ಳೆಯದೆ. ಭಾರತದಲ್ಲಿ ಇನ್ನೂ ಬ್ಯಾಂಕ್​ಗಳ ಅವಶ್ಯಕತೆ ಇದೆ. ಮಾನವ ಸೇವೆ, ಡಿಜಿಟಲ್ ಸೇವೆ ಹಾಗೂ ದರಗಳಲ್ಲಿ ಸ್ಪರ್ಧೆ ಕೊಡಬೇಕಷ್ಟೆ. ಅದರೊಂದಿಗೆ ನಮಗೆ ಪರಂಪರೆಯ ಹಿನ್ನೆಲೆಯೂ ಇರುವುದರಿಂದ ಸ್ಪರ್ಧೆಯಲ್ಲಿ ಸದಾ ಮುಂದಿರುತ್ತೇವೆ.

    ಇದುವರೆಗೆ ಕಂಡರಿಯದ ಬಜೆಟ್ ನೀಡುವುದಾಗಿ ಕೇಂದ್ರ ವಿತ್ತ ಸಚಿವರು ಹೇಳಿರುವುದರಿಂದ ಎಲ್ಲರ ನಿರೀಕ್ಷೆ ಹೆಚ್ಚಿದೆ. ಅವರ ಮಾತಿನಂತೆ ದೇಶ ಇನ್ನಷ್ಟು ಶ್ರೇಯೋಭಿವೃದ್ಧಿಯತ್ತ ಸಾಗಬಲ್ಲ ಅಂಶಗಳು ಬಜೆಟ್​ನಲ್ಲಿ ಇರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ.
    | ಮಹಾಬಲೇಶ್ವರ ಎಂ.ಎಸ್.

    ಅಮೆರಿಕದಲ್ಲಿನ್ನು ಡೆಮಾಕ್ರಟನ್ನರ ಆಡಳಿತ: ಅಧಿಕಾರ ಸ್ವೀಕರಿಸಿದ ಜೋ ಬೈಡೆನ್-ಕಮಲಾ ಹ್ಯಾರಿಸ್

    ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts