More

    ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ಎನ್​. ಟಿ ಶ್ರೀನಿವಾಸ್​ ಗೆಲುವು

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಎನ್​. ಟಿ ಶ್ರೀನಿವಾಸ್​ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​​ಗೆ ಸಿಕ್ಕಿರುವ ಮೊದಲ ಗೆಲುವು ಇದಾಗಿದೆ.

    ಕೂಡ್ಲಿಗಿಯಲ್ಲಿ 7 ನೇ ಸುತ್ತಿನ ಮುಕ್ತಾಯಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಎನ್ .ಟಿ ಶ್ರೀನಿವಾಸ್  42,974 ಮತ ಪಡೆದಿದ್ದಾರೆ. ಈ ಮೂಲಕವಾಗಿ 23,850 ಮತಗಳ ಮುನ್ನಡೆಯನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಬಿಜೆಪಿ ಅಭ್ಯರ್ಥಿ ಲೋಕೆಶ್ ನಾಯ್ಕ್ ಪಡೆದ ಮತಗಳು 19,124 ಮತಗಳನ್ನು ಪಡೆದು ಸೋತಿದ್ದಾರೆ.

    ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಅವರ ಮಗ ಡಾ. ಎನ್.ಟಿ. ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಪಕ್ಷವು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. ಕೂಡ್ಲಿಗಿ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಎನ್​.ಟಿ ಶ್ರೀನಿವಾಸ್​​​ ನಾಮಪತ್ರ ಸಲ್ಲಿಸಿದ್ದರು.

    ಶ್ರೀನಿವಾಸ್​​ ಅವರು ವೃತ್ತಿಯಿಂದ ವೈದ್ಯರಾಗಿದ್ದಾರೆ. ಮೂಲತಃ ಕೂಡ್ಲಿಗಿಯವರಾದರೂ ತುಮಕೂರಿನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಅವರ ತಂದೆ ನಿಧನದ ನಂತರ ಕ್ಷೇತ್ರದ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು.

    ರಾಜ್ಯದಾದ್ಯಂತ 52,283 ಮತಗಟ್ಟೆಗಳಲ್ಲಿ 24,063 ನಗರ ಪ್ರದೇಶ ಹಾಗೂ 34,219 ಗ್ರಾಮೀಣ ಮತಗಟ್ಟೆಗಳು ಇವೆ. ಸರಾಸರಿ 888 ಮತದಾರರಿಗೊಂದು ಮತಗಟ್ಟೆಯು ಬರುತ್ತದೆ. 12,000 ಸೂಕ್ಷ್ಮ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದ್ದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮೇ 13, 2023ರಂದು ಫಲಿತಾಂಶ ಘೋಷಣೆ.

    ಕರ್ನಾಟಕದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವಿವರ:
    ಒಟ್ಟು ಮತದಾರರು: 2,03,753 ಪುರುಷರು: 1,03,387 ಮಹಿಳೆಯರು: 1,00,352 , 2018ರ ವಿಜೇತರು: ಎನ್.ವೈ. ಗೋಪಾಲಕೃಷ್ಣ (ಬಿಜೆಪಿ): 2023ರ ಅಭ್ಯರ್ಥಿಗಳು: ಡಾ.ಎನ್.ಟಿ. ಶ್ರೀನಿವಾಸ್ (ಕಾಂಗ್ರೆಸ್), ಲೋಕೇಶ್ ವಿ. ನಾಯಕ (ಬಿಜೆಪಿ), ಕೋಡಿಹಳ್ಳಿ ಭೀಮಣ್ಣ (ಜೆಡಿಎಸ್)

    2018ರ ಫಲಿತಾಂಶ ಏನಿತ್ತು?
    2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ದೊರೆಯಲಿಲ್ಲ. ಉಳಿದಂತೆ ಕಾಂಗ್ರೆಸ್​ 80 ಮತ್ತು ಜೆಡಿಎಸ್​ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್​ ಮತ್ತು ಜೆಡಿಎಸ್​ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಈ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಪೂರೈಸಿತು. ಬದಲಾದ ರಾಜಕೀಯ ಚಿತ್ರಣದಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts