More

    ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

    ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

    ಜಿಲ್ಲೆಯಲ್ಲಿ ದಾಖಲೆ ಇಲ್ಲದ 2.32 ಕೋಟಿ ರೂ. ನಗದು, 9.04 ಕೋಟಿ ರೂ. ಮೌಲ್ಯದ 2.83 ಲಕ್ಷ ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಮಾದಕ ಮತ್ತು ನಶೆಯನ್ನುಂಟು ಮಾಡುವ 7.54 ಲಕ್ಷ ರೂ. ಮೌಲ್ಯದ 22.187 ಕೆಜಿ ತೂಕದ ವಸ್ತು, 21.51 ಲಕ್ಷ ರೂ. ಮೌಲ್ಯದ ಇತರ ಸಾಮಗ್ರಿ ಹಾಗೂ 60 ಸಾವಿರ ರೂ. ಮೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಜಿಲ್ಲೆಯಾದ್ಯಂತ 120 ಪ್ರಕರಣ

    ಸಿ ವಿಜಿಲ್ ಮೂಲಕ ಒಟ್ಟು 120 ಪ್ರಕರಣ ದಾಖಲಾಗಿವೆ. ಈ ಪೈಕಿ ಕೆ.ಆರ್.ನಗರದಲ್ಲಿ 30, ಚಾಮರಾಜದಲ್ಲಿ 23, ಚಾಮುಂಡೇಶ್ವರಿಯಲ್ಲಿ 20, ಕೃಷ್ಣರಾಜದಲ್ಲಿ 17ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂದರು.

    2018ರಲ್ಲಿ ಒಟ್ಟು 2905 ಮತಗಟ್ಟೆ ಪೈಕಿ 1199 ಮತಗಟ್ಟೆಗಳಲ್ಲಿ ರಾಜ್ಯದ ಮತದಾನದ ಸರಾಸರಿಗಿಂತ ಕಡಿಮೆ ಮತದಾನ ಆಗಿದೆ. ಈ ಪೈಕಿ 303 ಗ್ರಾಮೀಣ ಮತಗಟ್ಟೆಗಳು ಮತ್ತು 896 ನಗರ ಪ್ರದೇಶದ ಮತಗಟ್ಟೆಗಳು ಇವೆ ಎಂದು ಮಾಹಿತಿ ನೀಡಿದರು.

    ಮತದಾನವನ್ನು ಶೇಕಡವಾರು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಐಕಾನ್ ಜಾವಗಲ್ ಶ್ರೀನಾಥ್, ಅಂಗವಿಕಲ ರಾಷ್ಟ್ರೀಯ ಕ್ರೀಡಾಪಟು ಮಹೇಂದ್ರ ಅವರನ್ನು ಐಕಾನ್ ಆಗಿ ನೇಮಿಸಿಕೊಂಡಿದ್ದು, ಅವರು ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

    ಜಿಲ್ಲಾ ಮಟ್ಟದಲ್ಲಿ ಕಡಿಮೆ ಮತದಾನ ಆದ ಮತಗಟ್ಟೆಗಳಿಗೆ ಬಿಎಲ್‌ಒ ಮತ್ತು ತಂಡಗಳು ಮತದಾನದ ಶೇಕಡವಾರು ಪ್ರಮಾಣ ಹೆಚ್ಚಿಸಲು ಮನೆಗಳಿಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸುವರು. ಜಿಲ್ಲೆಯಲ್ಲಿ ಒಟ್ಟು 41 ಶಾಲಾ ಚಿತ್ರಕಲಾ ಶಿಕ್ಷಕರನ್ನು ಗುರುತಿಸಿ ಅವರ ಮೂಲಕ ಮತದಾನ ಕೇಂದ್ರಗಳನ್ನು ಆಕರ್ಷಣೆಗೊಳಿಸಲಾಗುತ್ತಿದೆ. ತೃತೀಯ ಲಿಂಗಿಗಳು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವಂತೆ ಮಾಡುವುದು ನಮ್ಮ ಉದ್ದೇಶ. ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು, ಮತದಾನದ ಪ್ರತಿಜ್ಞಾವಿಧಿ ಬೋಧಿಸುವುದು, ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅಂಚೆ ಮೂಲಕ ಮತದಾನ ಮಾಡಲು ಪ್ರೇರೇಪಿಸುವುದು, ರೈಲ್ವೆ ಇಲ್ದಾಣ, ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಜಾಗೃತಿ, ಪಿರಿಯಾಪಟ್ಟಣದಲ್ಲಿ ಕಸ ಸಂಗ್ರಹಿಸುವ ವಾಹನದ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದರು.

    ಜಿಲ್ಲೆಯಾದ್ಯಂತ 2905 ಮತಗಟ್ಟೆ

    ಜಿಲ್ಲೆಯ 11 ಕ್ಷೇತ್ರಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 1454, ನಗರ ಪ್ರದೇಶದಲ್ಲಿ 1451 ಮತಗಟ್ಟೆ ಸೇರಿ ಒಟ್ಟು 2905 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ 55 ಸಖಿ ಬೂತ್‌ಗಳು, 11 ಪಿಡಬ್ಲುೃಡಿ ಬೂತ್‌ಗಳು, 11 ಯುವ ಮತದಾರರ ಬೂತ್, 10 ಸಾಂಪ್ರದಾಯಿಕ ಹಾಗೂ 10 ವಿಷಯಾಧಾರಿತ ಬೂತ್ ಸೇರಿದಂತೆ 97 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ 1199 ಮತಗಟ್ಟೆಗಳಲ್ಲಿ ಸರಾಸರಿಗಿಂತ ಕಡಿಮೆ ಮತದಾನವಾಗಿದ್ದು, ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಥೀಮ್ ಬೇಸ್ ಬೂತ್‌ನಲ್ಲಿ ಮೈಸೂರು ಜಿಲ್ಲೆಯ ಪಾರಂಪರಿಕತೆ ಬಿಂಬಿಸುವ ಮತಗಟ್ಟೆ, ಸಾಂಸ್ಕೃತಿಕ ನಗರ ಮೈಸೂರನ್ನು ಪ್ರತಿಬಿಂಬಿಸುವ ಮತಗಟ್ಟೆಗಳು, ಅರಮನೆ, ಮೃಗಾಲಯ, ಲಲಿತಮಹಲ್ ಅರಮನೆ, ಜಗನ್ಮೋಹನ ಅರಮನೆ ಮುಂತಾದವನ್ನು ಪ್ರತಿಬಿಂಬಿಸುವ ಬೂತ್‌ಗಳು, ಆಯಾ ತಾಲೂಕಿನ ಸ್ಥಳೀಯ ಆಕರ್ಷಣೀಯ ಸ್ಥಳಗಳನ್ನು ಪ್ರತಿಬಿಂಬಿಸುವ ಬೂತ್ ಇವೆ ಎಂದರು.
    ಎಥಿಕ್ ಬೂತ್‌ನಲ್ಲಿ ಮತದಾನದ ದಿನದಂದು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಯು ಗಿರಿಜನ ಹಾಡಿ ಆದಿವಾಸಿಗಳ ಉಡುಗೆ ತೊಟ್ಟು ಮತದಾರರನ್ನು ಆರ್ಷಿಸುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts