More

    ಚಿತಾಗಾರದ ಮುಂದೆ ಕಸದ ರಾಶಿ; ಕರಿಸಂದ್ರ ವಾರ್ಡ್​ನಲ್ಲಿ ಸಮಸ್ಯೆ

    ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕರಿಸಂದ್ರ ವಾರ್ಡ್​ನಲ್ಲಿರುವ ವಿದ್ಯುತ್​ ಚಿತಾಗಾರ ಕಟ್ಟಡದ ಮುಖ್ಯದ್ವಾರದ ಬಳಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ನಿತ್ಯ ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಕೆಲ ತಿಂಗಳುಗಳಿಂದ ಸೃಷ್ಟಿಯಾಗಿದೆ.

    ಸ್ಮಶಾನ ಪಕ್ಕದಲ್ಲಿ ಬಿಎಂಟಿಸಿ ಟಕ ಹಾಗೂ ಮುಂಭಾಗದಲ್ಲಿ ಅರೇಬಿಕ್​ ಶಾಲೆಯಿದ್ದು, ಈ ಭಾಗದಲ್ಲಿ ಜನರ ಓಡಾಟವೂ ಹೆಚ್ಚಿದೆ. ಈ ಭಾಗದ ಮಂದಿ ನಿತ್ಯ ಬೆಳಗಾದರೆ ಸ್ಮಶಾನದ ಮುಂದೆ ಕಸ ತಂದು ಸುರಿಯುತ್ತಿದ್ದಾರೆ. ಇದು ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಹೀಗಾಗಿ ಕಸದ ಸಮಸ್ಯೆ ಹೆಚ್ಚುತ್ತಿದೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ.

    ದಂಡ ವಿಧಿಸಬೇಕು:

    ಸ್ಮಶಾನದ ಮಂಭಾಗ ಕಸ ಎಸೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಜನರಿಗೆ ಭಯ ಇಲ್ಲವಾಗಿದೆ. ಹೀಗಾಗಿ ಈ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಬಳಿಕ ತ್ಯಾಜ್ಯ ಸುರಿಯುವವರಿಗೆ ದುಬಾರಿ ಮೊತ್ತದ ದಂಡ ವಿಧಿಸಬೇಕು. ಹೀಗಾದರಷ್ಟೇ ಸಮಸ್ಯೆ ನಿಯಂತ್ರಣಕ್ಕೆ ಬರಬಹುದು ಎಂದು ಸ್ಥಳಿಯ ನಿವಾಸಿ ಸಂತೋಷ್​ ಸಲಹೆ ನೀಡಿದ್ದಾರೆ.

    ವಿಲೇವಾರಿ ಆಗಬೇಕು

    ನಿತ್ಯ ಬಿಬಿಎಂಪಿ ಸಿಬ್ಬಂದಿ ಬಂದು ಕಸ ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಆದರೆ ಸಂಪೂರ್ಣವಾಗಿ ಕಸ ವಿಲೇವಾರಿ ಆಗುವುದಿಲ್ಲ. ಇದರಿಂದಾಗಿ ನಿತ್ಯ ಕಸದ ರಾಶಿ ಹೆಚ್ಚುತ್ತಲೇ ಇದೆ. ಜನ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದಾರೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಬಿಬಿಎಂಪಿ ಅಧಿಕಾರಿಗಳು ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯ ನಿವಾಸಿ ವಸೀಂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts