More

    ದಲ್ಲಾಳಿಗಳು ಹಣಕ್ಕೆ ಒತ್ತಾಯಿಸಿದರೆ ದೂರು ಕೊಡಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ

    ಮಂಡ್ಯ: ಭತ್ತ, ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದಾರೆನ್ನುವ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಈ ವೇಳೆ ಮಾತನಾಡಿದ ಅವರು, ಸಣ್ಣ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಭತ್ತ ಖರೀದಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರೈತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಲ್ಲಾಳಿಗಳು ಭಾಗವಹಿಸುತ್ತಿರುತ್ತಾರೆಂದು ಮೌಖಿಕವಾಗಿ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದರು.
    ಕೃಷಿ ಇಲಾಖೆ ನೀಡುವ ಫ್ರೂಟ್ ಐಡಿ ಆಧಾರದ ಮೇಲೆ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಯೋಜನೆಯಲ್ಲಿ ರಾಗಿ ಮತ್ತು ಭತ್ತ ಮಾರಾಟಕ್ಕೆ ಸಂಬಂಧಿಸಿದಂತೆ ಐಡಿಯಲ್ಲಿ ನೋಂದಣಿಯಾಗಿರುವ ರೈತರ ಬ್ಯಾಂಕಿನ ಖಾತೆಗೆ ಹಣ ಜಮಾವಣೆ ಆಗಲಿದೆ. ಒಂದು ವೇಳೆ ರೈತರಿಗೆ ಅರಿವಿಲ್ಲದೆ ರೈತರ ಐಡಿ ಸಂಖ್ಯೆಯನ್ನು ಬೇರೆಯಾರಾದರೂ ನೋಂದಣಿ ಮಾಡಿದ್ದಲ್ಲಿ ತಮ್ಮ ಖಾತೆಗೆ ಜಮಾ ಆಗುವ ಹಣವನ್ನು ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಗೆ ನೀಡಬಾರದು. ಒಂದು ವೇಳೆ ಹಣ ನೀಡುವಂತೆ ಒತ್ತಾಯಿಸಿದರೆ ಸಮೀಪದ ಪೋಲೀಸ್ ಠಾಣೆಗೆ ದೂರು ನೀಡಬಹುದು ಎಂದು ಸೂಚನೆ ನೀಡಿದರು.
    ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts