More

    ಕನ್ನಡ ಸಾಹಿತ್ಯ ಪರಿಷತ್‌ನ ಪಾವಿತ್ರ್ಯತೆ ಬದಲಾಗಿಲ್ಲ: ಸಾಹಿತಿ ಪವನ್‌ಕುಮಾರ್ ಗುಂಡೂರು ಅಭಿಮತ

    ಕಾರಟಗಿ: ಕಾಲಕ್ಕೆ ತಕ್ಕಂತೆ ಕನ್ನಡ ಸಾಹಿತ್ಯ ಪರಿಷತ್ ಬದಲಾಗುತ್ತ ಬಂದಿದೆ. ಆದರೆ, ಅದರ ಪಾವಿತ್ರ್ಯತೆ ಮಾತ್ರ ಬದಲಾಗಿಲ್ಲ ಎಂದು ಸಾಹಿತಿ ಪವನ್‌ಕುಮಾರ್ ಗುಂಡೂರು ಅಭಿಪ್ರಾಯಪಟ್ಟರು.

    ಪಟ್ಟಣದ ಎಲ್‌ವಿಟಿ ಕಲ್ಯಾಣ ಮಂಟಪದಲ್ಲಿ ಕಸಾಪ ತಾಲೂಕು ಘಟಕ ಭಾನುವಾರ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಒಂದು ಭಾಷೆಯಾಗಿ ಇರದೆ ನಾಡಿನ ಜನರ ಅಸ್ಮಿತೆಯಾಗಿದೆ. ವೈವಿಧ್ಯಮಯದಿಂದ ಕೂಡಿದ್ದು ಅದರ ಮೂಲ ತಾತ್ವಿಕತೆ ಆದರ್ಶವಾಗಬೇಕು. ಕನ್ನಡದ ಕವಿಗಳು ಜಗತ್ತಿಗೆ ಮಾನವೀಯತೆಯ ಸಂದೇಶ ಸಾರಿದ್ದಾರೆ. ಕನ್ನಡ ಸಾಹಿತ್ಯ ಎಲ್ಲವನ್ನೂ ಒಳಗೊಂಡಿದೆ. ಭಾಷೆಯ ಉಳಿವಿನಲ್ಲಿ ಜನಸಮುದಾಯದ ಉಳಿವಿದೆ. ಭಾಷೆಗೆ ಅಗೌರವ ತರುವ ಕೆಲಸಗಳು ಆಗಬಾರದು. ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡಬೇಕಿದೆ ಎಂದರು.

    ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ನೆಲ, ಜಲ ಹಾಗೂ ಭಾಷೆಯ ವಿಷಯಗಳಲ್ಲಿ ಧಕ್ಕೆ ಉಂಟಾದಾಗ ಮಾತ್ರ ಎಲ್ಲರೂ ಧ್ವನಿ ಎತ್ತುವುದಲ್ಲ. ಎಲ್ಲ ಕಾಲಕ್ಕೂ ನಾಡಿನ ಏಳಿಗೆಗೆ ಶ್ರಮಿಸಬೇಕು ಎಂದರು.

    ನಿಕಟಪೂರ್ವ ಕಸಾಪ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ್, ನೂತನ ಅಧ್ಯಕ್ಷ ಶರಣಪ್ಪ ಕೋಟ್ಯಾಳಗೆ ಕನ್ನಡ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು. ಚನ್ನಬಸಪ್ಪ ಆಸ್ಪರಿ ಅವರ ‘ಸಂತೆಯೊಳಗಣ ಮೌನ’, ಸೋಮು ಕುದರಿಹಾಳ ಸಂಪಾದಕತ್ವದ ‘ಅಕ್ಷರ ಬೆಳಕು’ ಮಕ್ಕಳ ಶೈಕ್ಷಿಣಕ ಮಾಸ ಪತ್ರಿಕೆ ಹಾಗೂ ಕಸಾಪ ಸಾಮಾಜಿಕ ಜಾಲತಾಣಗಳ ಲೋಕಾರ್ಪಣೆಗೊಳಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಪುರಸಭೆ ಸದಸ್ಯೆ ಸೌಮ್ಯಾ ಮಹೇಶ ಕಂದಗಲ್, ಪ್ರಮುಖರಾದ ಗುರುಸಿದ್ದಪ್ಪ ಯರಕಲ್, ನಾಗರಾಜ ಬಿಲ್ಗಾರ್, ಮಂಜುನಾಥ ಮಸ್ಕಿ, ಹೊನ್ನೂರಪ್ಪ ಮಡಿವಾಳರ್, ಬಿ.ಕಾಶಿವಿಶ್ವನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts