More

    ಫಾರ್ಮ್ ನಂ.3 ವಿತರಿಸಲು ಕ್ರಮಕೈಗೊಳ್ಳಿ: ಕಾರಟಗಿ ಪುರಸಭೆ ಮುಖ್ಯಾಧಿಕಾರಿಗೆ ಸಾರ್ವಜನಿಕರ ಮನವಿ

    ಕಾರಟಗಿ: ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಇಲ್ಲದ ಆಸ್ತಿ ಹಾಗೂ ನಿವೇಶನಗಳ ಫಾರ್ಮ್ ನಂ.3 ನೀಡುವಂತೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ನೇತೃತ್ವದಲ್ಲಿ ಸಾರ್ವಜನಿಕರು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ರಡ್ಡಿರಾಯನಗೌಡಗೆ ಮನವಿ ಸಲ್ಲಿಸಿದರು.

    ಸಂಸ್ಥೆ ರಾಜ್ಯಕಾರ್ಯದರ್ಶಿ ಕೆ.ಶ್ರೀನಿವಾಸ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ಇಲ್ಲದ ಆಸ್ತಿ ಹಾಗೂ ನಿವೇಶನಗಳಿಗೆ ಕಳೆದ ಎರಡು ವರ್ಷಗಳಿಂದ ಫಾರ್ಮ್ ನಂ.3 ನೀಡುತ್ತಿಲ್ಲ. ಆರ್ಥಿಕವಾಗಿ ಅನೇಕ ತೊಡಕುಗಳನ್ನು ಹೊಂದಿರುವ ಕುಟುಂಬಗಳು ಮನೆ, ನಿವೇಶನ ಮಾರಾಟ ಮಾಡಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ. ಭವಿಷ್ಯದಲ್ಲಿ ತಮ್ಮ ಆಸ್ತಿ ಮಾರಾಟವಾದರೂ ಅಸಲು ಮತ್ತು ಬಡ್ಡಿ ಹಣ ಸರಿಹೊಂದಿ ಇವರು ಇಕ್ಕಟ್ಟಿಗೆ ಸಿಲುಕಿ ನರಳಾಡುವಂತಾಗಲಿದೆ. ಆಸ್ತಿ ಪರಭಾರೆ ಮತ್ತು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಹ ಸಾಧ್ಯವಾಗುತ್ತಿಲ್ಲ. ಕೂಡಲೇ ಡಿಸಿಯೊಂದಿಗೆ ಮುಖ್ಯಾಧಿಕಾರಿ ಚರ್ಚಿಸಿ ಫಾರ್ಮ್ ನಂ.3 ವಿತರಿಸಲು ಮುಂದಾಗಬೇಕು ಎಂದರು. ಪ್ರಮುಖರಾದ ನರೇಶ ಅಬ್ಬಿನ್, ನಾಗೇಶ, ವಿಜಯಲಕ್ಷ್ಮೀ, ಈ.ಶ್ರೀಧರ, ವೆಂಕಟೇಶ ಬೂದಿ, ಶಿವಕುಮಾರ, ಲಿಂಗಯ್ಯಸ್ವಾಮಿ ಇತರರಿದ್ದರು.

    ಈಗಾಗಲೇ ಅನೇಕ ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಸಾರ್ವಜನಿಕರ ಸಂಕಷ್ಟಗಳ ಕುರಿತು ಮತ್ತೊಮ್ಮೆ ಅವರ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಾರ್ವಜನಿಕರಿಗೆ ಅನುಕೂಲತೆಗಳನ್ನು ಕಲ್ಪಿಸುವುದು ಪುರಸಭೆಯ ಉದ್ದೇಶವೇ ಹೊರತು ತೊಂದರೆ ಕೊಡುವುದಲ್ಲ.
    | ರಡ್ಡಿರಾಯನಗೌಡ ಕಾರಟಗಿ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts