More

    ಅಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ

    ಚಿತ್ರದುರ್ಗ:ಆರೋಗ್ಯ ತಪಾಸಣಾ ಅಭಿಯಾನದಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತದೆ. ನಾಗರಿಕರು ಇದರ ಸದುಪ ಯೋಗ ಪಡೆದುಕೊಳ್ಳ ಬೇಕೆಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮನವಿ ಮಾಡಿದರು. ಚಿತ್ರದುರ್ಗ ತಾ ಲೂಕು ಚಿಕ್ಕಬೆನ್ನೂರು ಗ್ರಾಪಂ,ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸೋಮವಾರ ಹನುಮನಹಳ್ಳಿಯಲ್ಲಿ ಏರ್ಪಡಿಸಿದ್ದ ಆರೋಗ್ಯ ಕರ್ನಾಟಕ ಅಭಿಯಾನ ಮತ್ತು ಗ್ರಾಪಂ ದೂರದೃಷ್ಟಿ ಯೋಜನೆ ವಾರ್ಡ್ ಸಭೆಯಲ್ಲಿ ಅವರು ಮಾತನಾಡಿದರು.
    ಅಂಗಾಂಗ ದಾನದ ಮಹತ್ವ,ಕ್ಷಯ ಮುಕ್ತ ಭಾರತ ಅಭಿಯಾನ,ತಾಯಿ ಮಕ್ಕಳ ಆರೋಗ್ಯ ಪರೀಕ್ಷೆ, ಕಣ್ಣು ಮತ್ತು ಕಿವಿಯ ಸೇವೆಗಳು,ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಲ್ಲಿ ಆಭಾ ಕಾರ್ಡ್ ಜನರೇಷನ್,ಮಕ್ಕಳಲ್ಲಿ ಅಪೌಷ್ಟಿಕತೆ ಪತ್ತೆ ಪರೀಕ್ಷೆ ಚಿಕಿತ್ಸೆ, ಕೋವಿಡ್ 19 ಲಸಿಕಾ ಕಾರಣ, ಪೌಷ್ಠಿಕಾಹಾರ ಕುರಿತು ಮಾಹಿತಿ ಶಿಕ್ಷಣ ಇತ್ಯಾದಿ ಆರೋಗ್ಯ ಕರ್ನಾಟಕ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದು,ಇವುಗಳ ಪ್ರಯೋಜನ ಪಡೆಯುವಂತೆ ಕೋರಿದರು.
    ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ವೀರಭದ್ರಪ್ಪ ಅವರು ಗ್ರಾಪಂ ದೂರದೃಷ್ಠಿ ಯೋಜನೆ,ಸ್ವಚ್ಛ ಭಾರತ ಅಭಿಯಾ ನದ ಬಗ್ಗೆ ವಿವಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ,ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ ಮಾತನಾಡಿದರು. 167 ಆಭಾ ಕಾರ್ಡ್ ನೋಂದಾಯಿಸಲಾಯಿತು. ಗ್ರಾಪಂ ಸದಸ್ಯೆ ಎಚ್.ಬಿ.ನಾಗವೇಣಿ ರಾಮಣ್ಣ,ಸಮುದಾಯ ಆರೋಗ್ಯಾಧಿಕಾರಿ ಕೃಷ್ಣಮೂರ್ತಿ,ವಿಜಯಕುಮಾರ್,ಸುನಿಲ್,ಚಂದ್ರಶೇಖರ್,ಶ್ರೀಧರ್,ದಾಕ್ಷಯಣಮ್ಮ,ಶಾರದಮ್ಮ,ಉಷಾ,ಕವಿತಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts