More

    ಮಠದ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯ

    ಸುರಪುರ: ಈ ಬಾರಿಯ ಚಾತುರ್ಮಾಸ್ಯ ಪರ್ಯಂತ ಶ್ರೀಮಠದಲ್ಲಿ ಹೋಮ-ಹವನ ಮತ್ತು ಶ್ರೀ ಭಾಗವತ ಪುರಾಣ ನಡೆದಿದ್ದು, ಮುಂಬರುವ ದಿನಗಳಲ್ಲಿ ಶ್ರೀಮಠದ ಅಭಿವೃದ್ಧಿ ಹಾಗೂ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಭಕ್ತರ ಸಹಕಾರ ಅಗತ್ಯವಿದೆ ಎಂದು ಹುಣಸಿಹೊಳೆಯ ಶ್ರೀಮದ್ ಕಣ್ವಮಠದ ಪೀಠಾಧಿಪತಿ ಶ್ರೀ ವಿದ್ಯಾ ಕಣ್ವವಿರಾಜ ತೀರ್ಥರು ನುಡಿದರು.

    ಶನಿವಾರ ತಮ್ಮ ಚತುರ್ಥ ಚಾತುರ್ಮಾಸ್ಯ ವ್ರತ ಸಂಪನ್ನಗೊಳಿಸಿದ ಅವರು, ಈ ಬಾರಿಯ ಚಾತುರ್ಮಾಸ್ಯದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಠದ ಶಿಷ್ಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ವಿಶೇಷವಾಗಿ ಮಹಿಳೆಯರು ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಗಣನೀಯ ಸೇವೆ ಸಲ್ಲಿಸಿರುವುದು ವಿಶೇಷ ಎಂದರು.

    ಶ್ರೀಗಳು ಮಾಧವತೀರ್ಥರ ತಪೋಭೂಮಿ ವೀರಘಟ್ಟದ ಕೃಷ್ಣಾ ನದಿ ತಟದಲ್ಲಿ ನೂರಾರು ಭಕ್ತರೊಂದಿಗೆ ದಂಡೋದಕ ಸ್ನಾನ ವಿಧಿ ವಿಧಾನಗಳೊಂದಿಗೆ ಪೂರ್ಣಗೊಳಿಸಿದರು. ನಂತರ ಹುಣಸಿಹೊಳೆಗೆ ಆಗಮಿಸಿ ಗ್ರಾಮ ದೇವತೆಗೆ ಮಂಗಳಾರತಿ ನೆರವೇರಿಸಿದರು. ಭಕ್ತಾದಿಗಳು ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.

    ಕಣ್ವಮಠ ಆಡಳಿತಾಭಿವೃದ್ಧಿ ಟ್ರಸ್ಟ್ ಕಾರ್ಯಾಧ್ಯಕ್ಷ ಮನೋಹರ ಮಾಡಿಗೇರಿ ಮಾತನಾಡಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ವಿ.ಕಿಶನರಾವ ಕುಲಕರ್ಣಿ, ವೈದಿಕರಾದ ವಿಷ್ಣುಪ್ರಕಾಶ ಜೋಷಿ, ಜಗನ್ನಾಥಾಚಾರ್ಯ ಜೋಷಿ, ಹನುಮೇಶಾಚಾರ್ಯ ಬುದ್ದಿನ್ನಿ, ಶಂಕರಭಟ್ ಜೋಷಿ ವೇದಘೋಷ ಮೊಳಗಿಸಿದರು. ಅಪೇಕ್ಷಾ ಸರ್ಕಿಲ್ ಪ್ರಾರ್ಥಿಸಿದರು. ರಂಗನಾಥಾಚಾರ್ಯ ಸಾಲಗುಂದ ಶ್ರೀಗಳಿಗೆ ಗೌರವ ಸಮರ್ಪಣೆ ಸಲ್ಲಿಸಿದರು. ಪಂ.ಸೂರ್ಯನಾರಾಯಣಾಚಾರ್ಯ ಅವರಿಂದ ಭಾಗವತ ಪುರಾಣ ಮಂಗಲ ನೆರವೇರಿತು.

    ಔದುಂಬರಭಟ್ ಜೋಷಿ, ಮೋಹನ ದೇವರು, ಹನುಮೇಶ ದೇವರು, ರಾಧಾಕೃಷ್ಣ ಜೋಷಿ, ಕೃಷ್ಣಾಚಾರ ಪುರೋಹಿತ, ಸತ್ಯನಾರಾಯಣರಾವ ಮುಜುಮದಾರ, ರಾಘವೇಂದ್ರ ಕುಲಕರ್ಣಿ, ಕೃಷ್ಣಾಚಾರ್ಯ ತುರಡಗಿ, ರಾಘವೇಂದ್ರ ಲಕ್ಕಿಹಾಳ, ರಾಘವೇಂದ್ರ ಗೆದ್ದಲಮರಿ, ಭೀಮಶೇನರಾವ ವಿಜಯಪುರ, ಗೋವಿಂದರಾವ ಆಲಂಪಲ್ಲಿ, ಪ್ರಸನ್ನ ಆಲಂಪಲ್ಲಿ, ಸತ್ಯನಾರಾಯಣ ಕುಲಕರ್ಣಿ, ಮನೋಹರರಾವ ದ್ಯಾಮನಾಳ, ಗುರುರಾಜ ಚಾಮನಾಳ, ಮುರಳೀಧರರಾವ ಗಂಗನಾಳ, ಪ್ರಾಣೇಶರಾವ ಕವಿತಾಳ, ಮಂಜುನಾಥ ಕುಲಕರ್ಣಿ, ಆನಂದತೀರ್ಥ ಜೋಷಿ, ರಮೇಶ ಕಾಮನಟಗಿ, ಅಶೋಕ ಬಾಬುರಾವ, ಅಶೋಕ ನಾಯಕ, ವಾಸು ದ್ಯಾಮನಾಳ, ಪ್ರಕಾಶರಾವ ಆಲಂಪಲ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts