More

    ಕೋಟೆ ಮಾರಿಕಾಂಬೆ ಜಾತ್ರೆಗೆ ವೈಭವದ ತೆರೆ

    ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಮಾರಿಕಾಂಬೆಯ ಐದು ದಿನಗಳ ಜಾತ್ರೆಗೆ ಶನಿವಾರ ತಡರಾತ್ರಿ ತೆರೆ ಬಿದಿತು. ರಾತ್ರಿ 11 ಗಂಟೆಗೆ ಮಾರಿಕಾಂಬೆಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆ ಮೂಲಕ ವನಕ್ಕೆ ಕಳಿಸಲಾಯಿತು. ಸಾವಿರಾರು ಮಂದಿ ಜಾತ್ರೆಯ ಅಂತಿಮ ಕ್ಷಣವನ್ನು ಕಣ್ತುಂಬಿಕೊಂಡರು.

    ಜಾತ್ರೆಯ ಕಡೆ ದಿನವಾದ ಶನಿವಾರ ಭಕ್ತರು ಹಲವು ಹರಕೆ ಸಮರ್ಪಿಸಿದರು. ಚಿಕ್ಕಮಕ್ಕಳನ್ನು ದೇವಿಯ ಮಡಿಲಲ್ಲಿ ಕೂರಿಸಿ ಹರಕೆ ಪೂರೈಸಿದರು. ಹರಕೆ ಕೋಳಿಗಳನ್ನು ಅರ್ಪಿಸಲಾಯಿತು. ಮಂಗಳವಾರ ಬಿಬಿ ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರು ದೇವಿಗೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಉಪ್ಪಾರ, ಹರಿಜನ, ಕುರುಬ ಜನಾಂಗ, ಚೌಡಿಕೆ ಕುಟುಂಬದವರು ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು.
    ವಾಲ್ಮೀಕಿ, ಉಪ್ಪಾರ ಹಾಗೂ ಮಡಿವಾಳ ಸಮಾಜದವರು ಸರದಿಯಲ್ಲಿ ನಾಲ್ಕು ದಿನಗಳ ಕಾಲ ಗದ್ದುಗೆಗೆ ಪೂಜೆ ಸಲ್ಲಿಸಿದರು. ಶನಿವಾರ ರಾತ್ರಿ 11 ಗಂಟೆ ಬಳಿಕ ವಿವಿಧ ಜಾನಪದ ಕಲಾತಂಡಗಳ ಮೆರುಗಿನೊಂದಿಗೆ ದೇವಿಯನ್ನು ಉತ್ಸವದೊಂದಿಗೆ ವನ ಪ್ರವೇಶಕ್ಕೆ ಅಣಿಮಾಡಿಕೊಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts